ಆ ಹೆಚ್ಚುವರಿ ತೂಕವನ್ನು ಶಾಶ್ವತವಾಗಿ ಕಳೆದುಕೊಳ್ಳಲು ಇಲ್ಲಿವೆ ಕೆಲವು ಸರಳ ಸೂತ್ರಗಳು
ತೂಕ ಕಳೆದುಕೊಳ್ಳಬೇಕೆಂದರೆ ಸೂಕ್ತ ಆಹಾರ ಸೇವಿಸುವುದು ಬಹಳ ಅಗತ್ಯ. ಕೆಲವು ಆಹಾರ ಹಾನಿಕರ ಎಂದು ತಿನ್ನುವುದನ್ನು ಬಿಡುತ್ತೇವೆ. ಆದರೆ ವಾಸ್ತವದಲ್ಲಿ ವೈದ್ಯರೇ ಸಲಹೆ ನೀಡದ ವಿನಾ ಯಾವುದೇ ಆಹಾರ ಸೇವನೆ ಬಿಡಬಾರದು.
ಯಾವಾಗಲೂ ಕುಳಿತು ತಿನ್ನಿ
ನಿಮ್ಮ ಡೈನಿಂಗ್ ಕೋಣೆಯಲ್ಲಿ ಟಿವಿ ಇರಬಾರದು/ ಇದು ಯೋಚಿಸದೇ ತಿನ್ನುವಂತೆ ಮಾಡುತ್ತದೆ. ಮೇಜಿನ ಮೇಲೆ ಕುಳಿತು ನಿಧಾನವಾಗಿ ತಿನ್ನುವಾಗ ಕುಟುಂಬದ ಜೊತೆಗೆ ಸಂಭಾಷಣೆಯಲ್ಲಿ ನಿರತರಾಗಿರುತ್ತೀರಿ. ಯಾಂತ್ರಿಕವಾಗಿ ಆರೋಗ್ಯಕರ ಊಟವೆನಿಸುತ್ತದೆ. ಸುಮ್ಮನೆ ಬ್ಯುಸಿಯಾಗಿದ್ದಾಗ ಆಹಾರ ಸೇವಿಸುವುದು ಸರಿಯಾಗಿ ತಿನ್ನಲಿಲ್ಲ ಎನ್ನುವ ಭಾವನೆ ಬಂದು ಅಧಿಕವಾಗಿ ತಿನ್ನಬಹುದು.
ಪ್ರತೀ ಬೆಳಗ್ಗೆ ಒಂದು ಮೊಟ್ಟೆ
ಬೆಳಗಿನ ಉಪಹಾರಕ್ಕೆ ಮೊಟ್ಟೆ ಸೇವಿಸುವುದು ತೂಕ ನಿಯಂತ್ರಿಸಲು ಉತ್ತಮ ವಿಧಾನ. ಕೃತಕವಾಗಿ ಸಂಸ್ಕರಿಸಿದ ಧಾನ್ಯಗಳನ್ನು ತಿನ್ನುವುದಕ್ಕಿಂತ ಇದು ಆರೋಗ್ಯಕರ. ಮೊಟ್ಟೆ ಪ್ರೊಟೀನ್ ಮತ್ತು ವಿಟಮಿನ್‌ಗಳನ್ನು ದೇಹಕ್ಕೆ ಕೊಟ್ಟು ಹೆಚ್ಚು ಹೊತ್ತು ಹಸಿವೆ ದೂರ ಮಾಡುತ್ತದೆ.
ವಾರಕ್ಕೆ ಎರಡು ಬಾರಿ ಮೀನು
ಎಣ್ಣೆಮಯ ಮೀನು ಸೇವನೆ ಅಗತ್ಯ. ಅವು ಅಗತ್ಯ ಪೌಷ್ಠಿಕಾಂಶ ಮತ್ತು ಒಮೆಗಾ 3 ಹೊಂದಿರುತ್ತವೆ. ಇದು ಹೃದಯ, ಚರ್ಮ ಮತ್ತು ತೂಕ ಕಡಿಮೆ ಮಾಡಲೂ ಉತ್ತಮ.
ಮಾಂಸಾಹಾರವೂ ಉತ್ತಮ
ರೆಡ್ ಮೀಟ್ ಪ್ರತೀ ಮತ್ತೊಂದು ದಿನ ಸೇವಿಸುವುದು ಉತ್ತಮ. ಆದರೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಇದರಲ್ಲಿ ಪೌಷ್ಠಿಕಾಂಶಗಳು ಇದ್ದು, ಹೆಚ್ಚು ಧೀರ್ಘ ಕಾಲ ಹಸಿವೆ ಇರುವುದಿಲ್ಲ.
ಆಗಾಗ್ಗೆ ತಿನ್ನಬೇಡಿ
ಭೋಜನದ ನಡುವೆ ಸ್ನಾಕ್ ಬೇಡ. ಇದು ಒಟ್ಟಾರೆ ತಿನ್ನುವ ಕ್ರಮ. ಕ್ಯಾಲರಿಗಳನ್ನು ಅಗತ್ಯಕ್ಕಿಂತ ಜಾಸ್ತಿ ದೇಹಕ್ಕೆ ಕೊಡುತ್ತದೆ. ಮೂಲ ಸಮಯಕ್ಕೆ ಸರಿಯಾಗಿ ಸೇವಿಸುವ ಆಹಾರದಲ್ಲೇ ಕಾರ್ಬೋಹೈಡ್ರೇಟ್ಸ್ ಮತ್ತು ತರಕಾರಿಗಳು ಸಮತೋಲನದಲ್ಲಿರಲಿ.
ನೀರು ಕುಡಿಯಿರಿ
ದುಬಾರಿ ಜ್ಯೂಸ್‌ಗಳು, ಎನರ್ಜಿ ಪಾನೀಯ, ಸ್ಮೂತೀಗಳ ಬದಲಾಗಿ ಮನೆಯಲ್ಲೇ ತಯಾರಿಸಿದ ಪಾನೀಯ ಉತ್ತಮ. ಸಕ್ಕರೆ ತುಂಬಿದ ಸಂಸ್ಕರಿತ ಪಾನೀಯ ಬೇಡ. ಬಾಯಾರಿಕೆಯಾದರೆ ನೀರು ಕುಡಿಯಿರಿ. ಆಂಟಿಆಕ್ಸಿಡಂಟ್ ಹೆಚ್ಚಾಗಿರುವ ಗ್ರೀನ್ ಟೀ ಕುಡಿಯಬಹುದು. ದೇಹದಲ್ಲಿ ನೀರಿನಂಶ ಹೆಚ್ಚಾಗಿದ್ದರೆ ಉತ್ತಮ.
ಆಹಾರದ ಲೇಬಲ್ ಪರೀಕ್ಷಿಸಿ ಖರೀದಿಸಿ
ಆಹಾರ ಲೇಬಲ್‌ಗಳು ನಿಮಗೆ ಸಮಸ್ಯೆ ತರದಂತೆ ಗಮನಹರಿಸಿ. ಕಡಿಮೆ ಕೊಬ್ಬು ಅಥವಾ ಲೈಟ್ ಎಂದು ಲೇಬಲ್ ಇದ್ದಾ ಕ್ಷಣ ಸೇವಿಸಬೇಡಿ. ಅದರಲ್ಲಿ ಸಕ್ಕರೆ ಅಂಶ ಹೆಚ್ಚು ಹಾಕಿರುತ್ತಾರೆ. ಇದರಿಂದ ಧೀರ್ಘ ಸಮಯದಲ್ಲಿ ತೂಕ ಅಧಿಕವಾಗಲಿದೆ.
ಬೆಣ್ಣೆ, ತುಪ್ಪವಿಲ್ಲ ಎನ್ನಬೇಡಿ
ಹಾಲು ಬೇಡ ಎನ್ನುತ್ತೀರಾ? ಆದರೆ ಹಾಲಿನಲ್ಲಿ ಹೆಚ್ಚು ವಿಟಮಿನ್‌ಗಳು ಇರುತ್ತವೆ. ಅದರ ಕೊಬ್ಬು ಅಷ್ಟೇನೂ ಕೆಟ್ಟದಲ್ಲ. ಇದರ ಬದಲಾಗಿ ಬೆಣ್ಣೆ ಅಥವಾ ತುಪ್ಪ ಸೇವಿಸುವುದು ಉತ್ತಮವಲ್ಲ.
ಮನೆಯಲ್ಲೇ ಅಡುಗೆ
ಸಂಸ್ಕರಿತ, ಪ್ಯಾಕೇಜ್ ಆಹಾರದಲ್ಲಿ ರಾಸಾಯನಿಕಗಳಿದ್ದು ಆರೋಗ್ಯಕ್ಕೆ ಹಾನಿಕರ. ಮನೆಯಲ್ಲೇ ಮಾಡಿದ ಆಹಾರ ಅಗ್ಗ ಮತ್ತು ಪೌಷ್ಠಿಕಾಂಶ ಹೊಂದಿರುತ್ತದೆ. ಹೊರಗೆ ಆಹಾರ ಸೇವಿಸುವವರಿಗೇ ಹೆಚ್ಚು ತೂಕದ ಸಮಸ್ಯೆ ಇರುವುದಾಗಿ ಅಧ್ಯಯನಗಳು ಹೇಳಿವೆ.
ಕೃಪೆ: timesofindia.indiatimes.com