ಪತ್ರಕರ್ತೆ ಗೌರಿ ಲಂಕೇಶ್ ಬಂಧನ
Update: 2016-10-02 00:17 IST
ಬೆಂಗಳೂರು, ಅ.1: ಲೇಖನ ಪ್ರಕಟಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ವಿಚಾರಣೆಗೆ ಹಾಜರಾಗಲು ಆದೇಶವಿದ್ದರೂ ಹಾಜರಾಗದ ಹಿನ್ನೆಲೆಯಲ್ಲಿ ಪೊಲೀಸರು ಶನಿವಾರ ಅವರನ್ನು ಬಂಧಿಸಿ ಹುಬ್ಬಳ್ಳಿಯ ಎರಡನೆಯ ಜೆಎಮ್‌ಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಗೌರಿ ಲಂಕೇಶ್ ಅವರು ‘ದರೋಡೆಗಿಳಿದ ಬಿಜೆಪಿಗರು’ ಎಂಬ ತಲೆಬರಹದಲ್ಲಿ ಲೇಖನವನ್ನು ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವರು ಗೌರಿ ಲಂಕೇಶ್ ಅವರ ವಿರುದ್ಧ 2008ರಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.
ಅಲ್ಲದೆ, ಹುಬ್ಬಳ್ಳಿಯ ಜೆಎಮ್‌ಎಫ್‌ಸಿ ಕೋರ್ಟ್ ಕೂಡ ಗೌರಿ ಲಂಕೇಶ್‌ಗೆ ಎರಡು ಬಾರಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿತ್ತು. ಆದರೂ ಗೌರಿ ಲಂಕೇಶ್ ಅವರು ಕೋರ್ಟ್‌ಗೆ ವಿಚಾರಣೆಗೆ ಹಾಜರಾಗಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಬಂಧನ ವಾರಂಟ್‌ಗೆ ಆದೇಶ ನೀಡಿತ್ತು. ಹೀಗಾಗಿ, ಪೊಲೀಸರು ಬಾಡಿ ವಾರಂಟ್ ಮೇಲೆ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದರು.