ಗಾಂಧಿ ಮಾರ್ಗದಲ್ಲಿ ಕಾವೇರಿ ಹೋರಾಟ ಗೆಲ್ಲೋಣ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆ.2: ಕಾವೇರಿ ವಿಷಯದಲ್ಲಿ ಅನ್ಯಾಯಕೊಳಗಾಗಿರುವ ಕರ್ನಾಟಕ ದ ಜನತೆ ಗಾಂಧಿ ಮಾರ್ಗದ ಮೂಲಕ ಹೋರಾಟ ಮಾಡಿ ನ್ಯಾಯ ಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ಅಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾವೇರಿ ವಿಷಯದಲ್ಲಿ 1892 ಹಾಗೂ 1924ರ ಒಪ್ಪಂದದ ವೇಳೆ ಬ್ರಿಟಿಷರು ತಮಿಳುನಾಡಿಗೆ ಅನುಕೂಲಕರವಾಗುವ ರೀತಿಯಲ್ಲಿ ರೂಪಿಸಿದ್ದಾರೆ. ಅದರ ಪರಿಣಾಮವಾಗಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್‌ನ್ನು ಗೌರವಿಸುತ್ತೇವೆ: ಕಾವೇರಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕರ್ನಾಟಕ ಸರಕಾರ ಪಾಲಿಸುತ್ತಿಲ್ಲ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ನಾವೆಂದಿಗೂ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸುವುದಿಲ್ಲ ಎಂದು ಹೇಳಿಲ್ಲ. ಆದರೆ, ರಾಜ್ಯದ ಜನತೆಗೆ ಕೂಡಿವುದಕ್ಕೆ ನೀರಿಲ್ಲ. ಇಂತಹ ಸಂದಿಗ್ಧ ಸಂದರ್ಭದಲ್ಲಿ ತಮಿಳುನಾಡಿಗೆ ಕೃಷಿಗೆ ನೀರು ಬಿಡಲು ಸಾಧ್ಯವೆ ಎಂದು ಅವರು ತಿಳಿಸಿದರು.
ಈಗಾಗಲೆ ತಮಿಳುನಾಡಿಗೆ 53ಟಿಎಂಸಿಗೂ ಹೆಚ್ಚು ನೀರನ್ನು ಬಿಟ್ಟಿದ್ದೇವೆ. ಈಗ ನಮ್ಮ ಜಲಾಶಯಗಳಲ್ಲಿ ಕೇವವ 30ಟಿಎಂಸಿ ನೀರಿಗಿಂತ ಕಡಿಮೆಯಿದೆ. ಈ ನೀರು ರಾಜ್ಯದ ಜನತೆಗೆ ಕುಡಿಯಲು ಸಾಕಾಗುವುದಿಲ್ಲ ಎಂಬ ಆತಂಕದಲ್ಲಿದ್ದೇವೆ. ಇಂತಹ ಸಮಯದಲ್ಲಿ ತಮಿಳುನಾಡು ಕೃಷಿಗೆ ನೀರು ಬಿಡಿ ಎಂದು ಪಟ್ಟು ಹಿಡಿಯುವುದು ಸರಿಯಲ್ಲ ಎಂದು ಅವರು ತಿಳಿಸಿದರು.
‘ನಾಲ್ವಡಿ ಕೃಷ್ಣರಾಜ ಒಡೆಯರ್ ಚಿನ್ನಾಭರಣಗಳನ್ನು ಒತ್ತೆ ಇಟ್ಟು ಕೆಆರ್‌ಎಸ್ ಜಲಾಶಯವನ್ನು ನಿರ್ಮಿಸಿದ್ದಾರೆ. ಹೀಗೆಯ ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಗಳನ್ನು ಕಟ್ಟಲು ರಾಜ್ಯ ಸರಕಾರ ಅಪಾರ ಹಣ ಖರ್ಚು ಮಾಡಲಾಗಿದೆ. ಈಗೆ ನಿರ್ಮಿಸಿದ ಜಲಾಶಯಗಳನ್ನು ಕೇಂದ್ರ ಸರಕಾರ ಹತೋಟಿಗೆ ಒಪ್ಪಿಸುವುದು ಎಷ್ಟು ಸರಿ’
-ಸಿದ್ದರಾಮಯ್ಯ