ಇತರರಿಗಿಂತ ಹೆಚ್ಚಾಗಿ ಸೊಳ್ಳೆಗಳು ನಿಮ್ಮನ್ನೇ ಏಕೆ ಕಚ್ಚುತ್ತವೇ?
ಪುಟ್ಟ ಸೊಳ್ಳೆ ನಿಮ್ಮ ರಕ್ತ ಹೀರುವ ಜತೆಗೆ ನಿಮ್ಮ ಸುಖನಿದ್ದೆಯನ್ನೂ ಕೆಡಿಸಬಲ್ಲವು. ನಿಮ್ಮನ್ನು ರೋಗಿಗಳನ್ನಾಗಿಯೂ ಮಾಡುವ ಸಾಮರ್ಥ್ಯ ಇದಕ್ಕಿದೆ. ನಿಮ್ಮ ಕಿವಿಯ ಪಕ್ಕ ಗುಂಯ್‌ಗುಡುವ ಸದ್ದು, ನಿಮ್ಮನ್ನು ಕಚ್ಚುವುದಕ್ಕಿಂತಲೂ ಹೆಚ್ಚಿನ ಕಿರಿ ಕಿರಿ ಉಂಟುಮಾಡಬಲ್ಲದು.
ಯಾವ ರೋಗವನ್ನು ಹೊತ್ತು ತಂದಿವೆ ಎಂಬ ಭೀತಿಗೂ ಇದು ಕಾರಣವಾಗಬ್ಬದು. ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ, 700 ದಶಲಕ್ಷ ಮಂದಿ ಸೊಳ್ಳೆಯಿಂದ ಹರಡುವ ರೋಗಗಳಿಗೆ ತುತ್ತಾಗುತ್ತಾರೆ. ಸೊಳ್ಳೆಗಳು ಪ್ರತಿ ವರ್ಷ ಕನಿಷ್ಠ 10 ಲಕ್ಷ ಮಂದಿಯ ಜೀವ ತೆಗೆದುಕೊಳ್ಳುತ್ತವೆ. ಮಾನವನ ಸಾವಿಗೆ ಕಾರಣವಾಗುವ ಅತಿದೊಡ್ಡ ಶತ್ರು ಎಂದರೆ ಸೊಳ್ಳೆ ಎನ್ನುವುದು ನಿಮಗೆ ಅಚ್ಚರಿ ಉಂಟುಮಾಡಬಲ್ಲದು.
ಮಲೇರಿಯಾ, ಡೆಂಗೆ, ಆನೆಕಾಲು, ವೆಸ್ಟ್ ನೀಲ್ ವೈರಸ್ ಹೀಗೆ ಅಸಂಖ್ಯಾತ ರೋಗಗಳನ್ನು ಇವು ಹರಡುತ್ತವೆ. ಆದ್ದರಿಂದ ಇದರಿಮದ ತಪ್ಪಿಸಿಕೊಳ್ಳುವುದೇ ಒಳ್ಳೆಯದು. ಆದರೆ ಅದು ಅಸಾಧ್ಯ ಎನ್ನುವುದು ವಾಸ್ತವ. ಸೊಳ್ಳೆಗಳಿಂದ ಶೇಕಡ 100ರಷ್ಟು ಸುರಕ್ಷೆ ಪಡೆಯುವುದು ಇನ್ನೂ ಸಾಧ್ಯವಾಗಿಲ್ಲ.
ಇವುಗಳ ಕಾಟದ ಪರಿಣಾಮ ಕಡಿಮೆ ಮಾಡಿಕೊಳ್ಳಲು ಮಾತ್ರ ಸಾಧ್ಯವೇ ವಿನಃ ಸಂಪೂರ್ಣ ಸುರಕ್ಷೆ ಸಾಧ್ಯವಿಲ್ಲ. ನಿಮ್ಮ ಸುಗಂಧವೇ ಅವುಗಳನ್ನು ಆಕರ್ಷಿಸುವಂಥದ್ದು. 100 ಅಡಿ ದೂರದಿಂದಲೂ ನಿಮ್ಮ ವಾಸನೆ ಆಘ್ರಾಣಿಸುವ ಶಕ್ತಿ ಸೊಳ್ಳೆಗಳಿಗೆ ಇವೆ. ನಿಮ್ಮನ್ನೇ ಸೊಳ್ಳೆಗಳು ಆಯ್ಕೆ ಮಾಡಿಕೊಳ್ಳಲು ಶೇಕಡ 85ರಷ್ಟು ವಂಶವಾಹಿ ಅಂಶಗಳು ಕಾರಣ. ಹೇಗೆ ಎಂಬ ಕುತೂಹಲವೇ?
ಅಂದರೆ ಅಧಿಕ ಪ್ರಮಾಣದಲ್ಲಿ ಲ್ಯಾಕ್ಟಿಕ್ ಆಸಿಡ್ ಉತ್ಪತ್ತಿ ಮಾಡುವ ಹಾಗೂ ಅಧಿಕವಾಗಿ ಬೆವರುವವರು ಸೊಳ್ಳೆಗಳ ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಅಧಿಕ. ಆದ್ದರಿಂದ ಅಧಿಕವಾಗಿ ಬೆವರಿದ್ದರೆ ಸೊಳ್ಳೆ ಕಡಿತದಿಂದ ಪಾರಾಗಲು ಸ್ನಾನ ಮಾಡಿ!