ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ನ್ಯಾಯಮೂರ್ತಿಗಳೇ ಇಲ್ಲ!

Update: 2016-10-08 17:32 GMT

ಬೆಂಗಳೂರು, ಅ.8: ರಾಜ್ಯ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಕೊರತೆ ಕಂಡು ಬಂದರೆ, ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ನ್ಯಾಯಮೂರ್ತಿಗಳೇ ಇಲ್ಲದಂತಾಗಿದೆ.

ಹೌದು, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಯಾಗಿದ್ದ ಎಚ್.ಎಲ್.ದತ್ತು ಅವರು ನಿವೃತ್ತರಾದ ಬಳಿಕ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ ಕರ್ನಾಟಕದಿಂದ ನ್ಯಾ.ವಿ.ಗೋಪಾಲಗೌಡ ಅವರು ನೇಮಕಗೊಂಡಿದ್ದರು. ಆದರೆ, ಅವರೂ ಅ.5ರಂದು ನಿವೃತ್ತಿಯಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ಕರ್ನಾಟಕದ ನ್ಯಾಯಮೂರ್ತಿಗಳೇ ಇಲ್ಲದಂತಾಗಿದೆ.ಳೆದ ಎರಡು ದಶಕಗಳಲ್ಲಿ ಇಂತಹ ಪರಿಸ್ಥಿತಿ ಏರ್ಪಡುತ್ತಿ ರುವುದು ಇದು ಎರಡನೇ ಬಾರಿ. 2005ರ ಜೂನ್ 16ರಿಂದ ಸೆ.9ರವರೆಗೆ ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ಯಾವ ನ್ಯಾಯಮೂರ್ತಿಯೂ ಇರಲಿಲ್ಲ. ಇದೀಗ ಮತ್ತೆ ಅಂತಹದ್ದೇ ಸಂದರ್ಭ ಎದುರಾಗಲಿದೆ. ದಕ್ಕೆ ಕಾರಣ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿ ಸಿದಂತೆ ಇರುವ ಕೊಲಿಜಿಯಂ ಬಗ್ಗೆ ಉಂಟಾಗಿರುವ ವಿವಾದ ಮತ್ತು ಕಳೆದ ನಾಲ್ಕು ವರ್ಷಗಳಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹುದ್ದೆ ಭರ್ತಿ ಮಾಡುವಲ್ಲಿ ಆದ ವಿಳಂಬವೂ ಕಾರಣ ಎನ್ನಲಾಗಿದೆ. ರ್ನಾಟಕಕ್ಕೆ ಹಿನ್ನೆಡೆ: ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ನ್ಯಾಯಮೂರ್ತಿಗಳೇ ಇಲ್ಲದಿದ್ದರೆ ರಾಜ್ಯದ ನ್ಯಾಯಾಂಗ ಕ್ಷೇತ್ರಕ್ಕೆ ನಷ್ಟವಾಗಲಿದೆ ಎನ್ನುತ್ತಾರೆ ಕಾನೂನು ತಜ್ಞರು. ವಕೀಲರ ಸಂಘ ಗಳು, ಸರಕಾರ ಮತ್ತು ಮಂತ್ರಿಮಂಡಲದ ಸದಸ್ಯರು ರಾಜ್ಯದ ನ್ಯಾಯಾಂಗಕ್ಕೆ ಸಂಬಂಧಿಸಿದ ಯಾವುದೇ ಅಹವಾಲು, ಸಮಸ್ಯೆ, ಮನವಿ, ಬೇಡಿಕೆ ಹಾಗೂ ಹಕ್ಕೊತ್ತಾಯವನ್ನು ಸುಪ್ರೀಂಕೋರ್ಟ್ ಮತ್ತದರ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದು ಪರಿಹಾರ ಪಡೆಯುವಲ್ಲಿ ಬಹುದೊಡ್ಡ ಪಾತ್ರವಿರುವುದು ಸುಪ್ರೀಂಕೋರ್ಟ್ ನಲ್ಲಿರುವ ಕರ್ನಾಟಕದ ನ್ಯಾಯಮೂರ್ತಿಗಳದ್ದು. ಹಾಗೆಯೇ ಹೈಕೋರ್ಟ್ ನ್ಯಾಯಮೂರ್ತಿ, ಮುಖ್ಯ ನ್ಯಾಯ ಮೂರ್ತಿ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸ್ಥಾನಗಳಿಗೆ ರಾಜ್ಯದ ವ್ಯಕ್ತಿಯನ್ನು ನೇಮಿಸುವಾಗ ಆ ವ್ಯಕ್ತಿಯ ಹಿನ್ನೆಲೆ, ವೃತ್ತಿಪರತೆ, ದಕ್ಷತೆ ಹಾಗೂ ಸಾಮರ್ಥ್ಯವನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂಗೆ ತಿಳಿಸಿಕೊಡುವುದು ಸಹ ರಾಜ್ಯದ ನ್ಯಾಯಮೂರ್ತಿಗಳೆ. ಹೀಗಾಗಿ, ಯಾವಾಗಲೂ ಸುಪ್ರೀಂಕೋರ್ಟ್ ನಲ್ಲಿ ರಾಜ್ಯದ ನ್ಯಾಯಮೂರ್ತಿಗಳು ಇರಬೇಕಾಗುತ್ತದೆ ಎನ್ನುತ್ತಾರೆ ಕಾನೂನು ತಜ್ಞರು. ದು ಎರಡನೇ ಬಾರಿ: ಸುಪ್ರೀಂಕೋರ್ಟ್‌ಗೆ ಈವರೆಗೆ 11 ಮಂದಿ ಕರ್ನಾಟಕದ ನ್ಯಾಯಮೂರ್ತಿಗಳು ನೇಮಕಗೊಂಡಿದ್ದರೆ, ಅದರಲ್ಲಿ ನಾಲ್ವರು ಮುಖ್ಯ ನ್ಯಾಯಮೂರ್ತಿಗಳಾಗಿ ನಿವೃತ್ತಿ ಹೊಂದಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಸುಪ್ರೀಂಕೋರ್ಟ್ ನಲ್ಲಿ ಕರ್ನಾಟಕದ ಉಸ್ತುವಾರಿ ಹಾಗೂ ಪ್ರತಿನಿಧಿ ಇಲ್ಲದ ಪರಿಸ್ಥಿತಿ ಎದುರಾಗಿದ್ದು ಇದು ಎರಡನೇ ಬಾರಿ. 1997 ರಿಂದ 2005ರ ಜೂನ್ 16ರವರೆಗೆ ಸತತವಾಗಿ ಕರ್ನಾಟಕದ ನ್ಯಾಯಮೂರ್ತಿಯೊಬ್ಬರು ಸುಪ್ರೀಂಕೋರ್ಟ್‌ನಲ್ಲಿದ್ದರು. ಆದರೆ, 2005ರ ಜೂ.16ರಿಂದ ಸೆ.9ರವರೆಗೆ ಯಾರೂ ಇರಲಿಲ್ಲ. ಅಷ್ಟರಲ್ಲಿ ನ್ಯಾ.ಆರ್.ವಿ.ರವೀಂದ್ರನ್ ನೇಮಕಗೊಂಡಿದ್ದರು. ನಂತರ ನ್ಯಾ.ಎಚ್.ಎಲ್.ದತ್ತು, ನ್ಯಾ.ವಿ.ಗೋಪಾಲಗೌಡ ನೇಮಕವಾಗಿದ್ದರು. 2014ರ ಸೆ.28ರಂದು ನ್ಯಾ.ದತ್ತು ಮುಖ್ಯ ನ್ಯಾಯಮೂರ್ತಿಗಳಾಗಿ ನಿವೃತ್ತಿಯಾದರೆ, 2016ರ ಅ.5ರಂದು ನ್ಯಾ.ವಿ.ಗೋಪಾಲಗೌಡ ಅವರೂ ನಿವೃತ್ತಿಯಾಗಿದ್ದಾರೆ.
ನ್ಯಾ.ಗೋಪಾಲಗೌಡ ಅವರ ಬಳಿಕ ಕರ್ನಾಟಕದಿಂದ ಯಾರೂ ಸುಪ್ರೀಂಕೋರ್ಟ್‌ಗೆ ಪದೋನ್ನತಿ ಪಡೆದಿಲ್ಲ. ಇದೀಗ ಕೊಲಿಜಿಯಂ ಕುರಿತು ವಿವಾದ ಇರುವುದರಿಂದ ಕರ್ನಾಟಕದಿಂದ ಯಾರು ಹಾಗೂ ಯಾವಾಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾಗುತ್ತಾರೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

‘ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ನ್ಯಾಯಮೂರ್ತಿಗಳೇ ಇಲ್ಲದಿದ್ದರೇ ಸಂವಿಧಾನದ ಮೂಲ ತತತ್ವೃ ಹಾಗೂ ಸಮಾನತೆಗೆ ಧಕ್ಕೆ ಬರುತ್ತದೆ. ಈ ಮೊದಲೇ ಕರ್ನಾಟಕದ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳನ್ನು ನೇಮಕಗೊಳಿಸಿದ್ದರೇ, ಇಂದು ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ನ್ಯಾಯಮೂರ್ತಿಗಳಿಗೆ ಪ್ರಾತಿನಿಧ್ಯ ಸಿಗುತ್ತಿತ್ತು.’
-ಶಂಕ್ರಪ್ಪ, ಹೈಕೋರ್ಟ್ ವಕೀಲ

Writer - ಪ್ರಕಾಶ್ ಅವರಡ್ಡಿ

contributor

Editor - ಪ್ರಕಾಶ್ ಅವರಡ್ಡಿ

contributor

Similar News