ಅಂತಿಮ ಟೆಸ್ಟ್ : ಅಜಿಂಕ್ಯ ರಹಾನೆ ಎಂಟನೆ ಶತಕ ; ಭಾರತ 306/3

Update: 2016-10-09 04:52 GMT

ಇಂದೋರ‍್, ಅ.9: ಇಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್‌ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್ ನಲ್ಲಿ ಭಾರತದ ಅಗ್ರ ಸರದಿಯ ದಾಂಡಿಗ ಅಜಿಂಕ್ಯ ರಹಾನೆ ಇಂದು  ಎಂಟನೆ ಶತಕ ದಾಖಲಿಸಿದ್ದಾರೆ.
ಇಲ್ಲಿನ ಹೋಲ್ಕರ‍್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್‌ನ ಎರಡನೆ ದಿನ ರಹಾನೆ  210 ಎಸೆತಗಳಲ್ಲಿ 11 ಬೌಂಡರಿ ಮತ್ತು 1ಸಿಕ್ಸರ್‌ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು.
ಶನಿವಾರ ದಿನದಾಟದಂತ್ಯಕ್ಕೆ ಭಾರತ 90 ಓವರ‍್ ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 267 ರನ್‌ ಗಳಿಸಿತ್ತು. ಇಂದು ಕೊಹ್ಲಿ ಜೊತೆ ಬ್ಯಾಟಿಂಗ್‌ ಮುಂದುವರಿಸಿದ ರಹಾನೆ ಸೊಗಸಾದ ಶತಕ ಸಿಡಿಸಿದರು. ಭಾರತ 101.1 ಓವರ್ ಗಳಲ್ಲಿ3 ವಿಕೆಟ್ ನಷ್ಟದಲ್ಲಿ 306ರನ್ ಗಳಿಸಿದ್ದು, ರಹಾನೆ  100ರನ್ ಮತ್ತು ಕೊಹ್ಲಿ 121 ರನ್ ಗಳಿಸಿ ಆಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News