ದುಬೈ: ವಿಶಿಷ್ಟ ನಂಬರ್ ಪ್ಲೇಟ್ ಪಡೆಯಲು ಈ ಭಾರತೀಯ ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ ?

Update: 2016-10-09 06:44 GMT

ದುಬೈ,ಅಕ್ಟೋಬರ್ 9: ಭಾರತೀಯ ಉದ್ಯಮಿಯೊಬ್ಬರು ಒಂದೇ ಅಂಕೆಯಿರುವ ನಂಬರ್‌ಪ್ಲೇಟ್‌ನ್ನು 3.3ಕೋಟಿ ದಿರ್ಹಮ್(60 ಕೋಟಿ ರೂ.) ನೀಡಿ ತನ್ನದಾಗಿಸಿಕೊಂಡಿದ್ದಾರೆ. ಎಲಂನಲ್ಲಿ ಬಲ್‌ವೀಂದರ್ ಸಾಹ್ನಿ ಡಿ-5 ಎಂಬ ನಂಬರ್‌ಪ್ಲೇಟ್‌ನ್ನು ಪಡೆದುಕೊಂಡ ವ್ಯಕ್ತಿಯಾಗಿದ್ದಾರೆಂದು ವರದಿಯೊಂದು ತಿಳಿಸಿದೆ. ಜೆ.ಡಬ್ಲ್ಯೂ ಮಾರಿಯಟ್ ಮಾರ್ಕ್ವಿಸ್ ಹೊಟೇಲ್‌ನಲ್ಲಿ ಆರ್.ಟಿ.ಐ ಏರ್ಪಡಿಸಿದ್ದ ಏಲಂ ಕಾರ್ಯಕ್ರಮದಲ್ಲಿ ವಿಶೇಷವಾದ 80 ನಂಬರ್‌ಗಳನ್ನು ಹರಾಜು ಹಾಕಲಾಗಿತ್ತು. ಇವುಗಳಲ್ಲಿ ಡಿ-5, ಎರಡು, ಮೂರು, ನಾಲ್ಕು ಹೆಚ್ಚು ವಿಶೇಷವಾದ ನಂಬರ್ ಎಂದು ಪರಿಗಣಿಸಲಾಗಿತ್ತು. ಇತ್ತೀಚೆಗೆ ದುಬೈ ಸಾರಿಗೆ ಅಥಾರಿಟಿ 92ನೆ ನಂಬರ್ ಪ್ಲೇಟ್‌ವರೆಗೆ ಏಲಂ ಹಾಕಿತ್ತು ಎಂದು ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News