ದ್ವಿತಿಯ ಟೆಸ್ಟ್ : ಚೊಚ್ಚಲ ದ್ವಿಶತಕ ವಂಚಿತ ರಹಾನೆ

Update: 2016-10-09 10:28 GMT

ಇಂದೋರ‍್, ಅ.9: ಇಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್‌ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್ ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ದಾಖಲಿಸಿದ್ದಾರೆ. ಆದರೆ ಅಗ್ರಸರದಿಯ ದಾಂಡಿಗ  ಅಜಿಂಕ್ಯ ರಹಾನೆ ದ್ವಿಶತಕ ವಂಚಿತಗೊಂಡಿದ್ದಾರೆ.

ಇಲ್ಲಿನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್‌ನ ಎರಡನೆ ದಿನ ಕೊಹ್ಲಿ 347 ಎಸೆತಗಳಲ್ಲಿ 18 ಬೌಂಡರಿ  ನೆರವಿನಲ್ಲಿ   ಕೊಹ್ಲಿ  ದ್ವಿಶತಕ ಪೂರ್ಣಗೊಳಿಸಿದರು.  ಆದರೆ ರಹಾನೆ ಅವರು  381 ಎಸೆತಗಳಲ್ಲಿ 18 ಬೌಂಡರಿ ಮತ್ತು 4 ಸಿಕ್ಸರ್   ನೆರವಿನಲ್ಲಿ 188 ರನ್ ಗಳಿಸಿ ಔಟಾದರು. 

ಇದು ಕೊಹ್ಲಿ  ಅವರ ಎರಡನೆ ದ್ವಿಶತಕ. ಕಳೆದ ಜುಲೈ 21ರಿಂದ 24ರ ತನಕ ಆಂಟಿಗುವಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಕೊಹ್ಲಿ ದ್ವಿಶತಕ(200) ದಾಖಲಿಸಿದ್ದರು.

ಶನಿವಾರ ದಿನದಾಟದಂತ್ಯಕ್ಕೆ ಭಾರತ 90 ಓವರ‍್ ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 267 ರನ್‌ ಗಳಿಸಿತ್ತು. ಕೊಹ್ಲಿ 103  ರಹಾನೆ 79 ರಹಾನೆ ಕ್ರೀಸ್ ನಲ್ಲಿದ್ದರು.

ಇಂದು ರಹಾನೆ ಜೊತೆ ಬ್ಯಾಟಿಂಗ್‌ ಮುಂದುವರಿಸಿದ ಕೊಹ್ಲಿ  ಸೊಗಸಾದ ದ್ವಿಶತಕ ಸಿಡಿಸಿದರು. ಬಳಿಕ  ಅವರು 211 ರನ್ (366 ಎಸೆತ, 20 ಬೌಂಡರಿ) ಗಳಿಸಿ ಔಟಾದರು.

ಇದಕ್ಕೂ ಮೊದಲು ಅಗ್ರ ಸರದಿಯ ದಾಂಡಿಗ ಅಜಿಂಕ್ಯ ರಹಾನೆ ಎಂಟನೆ ಶತಕ ದಾಖಲಿಸಿದ್ದರು. ಕೊಹ್ಲಿ ಮತ್ತು ರಹಾನೆ ನಾಲ್ಕನೆ ವಿಕೆಟ್ ಗೆ 365 ರನ್ ಗಳ ಜೊತೆಯಾಟ ನೀಡಿದ್ದರು. 167 ಓವರ್ ಗಳು ಮುಕ್ತಾಯಗೊಂಡಾಗ ಭಾರತ 5 ವಿಕೆಟ್ ನಷ್ಟದಲ್ಲಿ 538ರನ್ ಗಳಿಸಿತ್ತು. ರೋಹಿತ್ ಶರ್ಮ ಔಟಾಗದೆ 35 ಮತ್ತು ರವೀಂದ್ರ ಜಡೇಜ 13 ರನ್ ಗಳಿಸಿ  ಕ್ರೀಸ್ ನಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News