×
Ad

ಎಲ್.ಪಿ.ಜಿ. ಎಂದರೇನು?

Update: 2016-10-10 17:19 IST

ಚಿಣ್ಣರೇ, ಈಗ ದೇಶದ ಹಳ್ಳಿಗಳಲ್ಲೂ ಇಂಧನವಾಗಿ ಬಳಸುತ್ತಿರುವ ಎಲ್.ಪಿ.ಜಿ. ಅಥವಾ ‘ಲಿಕ್ವಿಫೈಡ್ ಪೆಟ್ರೋಲಿಯಮ್ ಗ್ಯಾಸ್’ ಮುಖ್ಯವಾಗಿ ಪ್ರೊಪೇನ್, ಪ್ರೊಪಿಲಿನ್, ಬ್ಯೂಟೇನ್ ಮತ್ತು ಬ್ಯುಟಿಲೀನ್‌ಗಳ ಮಿಶ್ರಣ; ನೈಸರ್ಗಿಕ ಅನಿಲದ ಸಂಸ್ಕರಣೆ ಮತ್ತು ಪೆಟ್ರೋಲಿಯಂನ ಶುದ್ಧೀಕರಣದ ಸಮಯದಲ್ಲಿ ದೊರೆಯುವ ಉಪಉತ್ಪನ್ನವಾಗಿದೆ.

ಸಾಮಾನ್ಯ ಒತ್ತಡ ಹಾಗೂ ಉಷ್ಣತೆಗಳಲ್ಲಿ ‘ಎಲ್‌ಪಿಜಿ’ಯ ಘಟಕಗಳು ಅನಿಲ ರೂಪದಲ್ಲಿರುತ್ತವೆ. ಹೀಗಾಗಿ ಹೆಚ್ಚಿನ ಒತ್ತಡಕ್ಕೆ ಒಳಪಡಿಸಿ ಅನಿಲವನ್ನು ದ್ರವೀಕರಿಸಿ, ಸಿಲಿಂಡರ್‌ಗಳಲ್ಲಿ ತುಂಬಿ ಸರಬರಾಜು ಮಾಡಲಾಗುತ್ತದೆ. ಸಿಲಿಂಡರಿನಿಂದ ಹೊರಬಂದ ಕೂಡಲೇ ದ್ರವ ಅನಿಲವಾಗಿ ಮಾರ್ಪಟ್ಟು, ಉರಿದು, ಶಾಖವನ್ನೊದಗಿಸುತ್ತದೆ. 

Writer - ಸಂ: ಆಶಾ ಡಿ’ಸೋಜಾ, ಮಂಗಳೂರು

contributor

Editor - ಸಂ: ಆಶಾ ಡಿ’ಸೋಜಾ, ಮಂಗಳೂರು

contributor

Similar News