ಅಂತಿಮ ಟೆಸ್ಟ್ : ಪೂಜಾರ ಶತಕ, ಗಂಭೀರ್ ಅರ್ಧಶತಕ; ನ್ಯೂಝಿಲೆಂಡ್ ಗೆಲುವಿಗೆ 475 ರನ್ ಸವಾಲು

Update: 2016-10-11 08:08 GMT


ಇಂದೋರ್, ಅ.11: ಇಲ್ಲಿ ನಡೆಯುತ್ತಿರುವ  ಮೂರನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ನ್ಯೂಝಿಲೆಂಡ್‌ನ   ಗೆಲುವಿಗೆ  ಭಾರತ 475 ರನ್ ಗಳ ಕಠಿಣ ಸವಾಲು ವಿಧಿಸಿದೆ.

ಅಗ್ರಸರದಿಯ ದಾಂಡಿಗರಾದ ಚೇತೇಶ್ವರ ಪೂಜಾರ ಶತಕ ಮತ್ತು ಗೌತಮ್‌ ಗಂಭೀರ್‌ ಅರ್ಧಶತಕ ದಾಖಲಿಸಿದ್ದಾರೆ.
ಹೋಳ್ಕರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ನ ನಾಲ್ಕನೆ ದಿನವಾಗಿರುವ ಇಂದು ಪೂಜಾರ ಅವರು  8ನೆ ಶತಕ ಪೂರ್ಣಗೊಳಿಸಿದ ಬೆನ್ನಲ್ಲೆ ನಾಯಕ ವಿರಾಟ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು
ಬಹಳ ಸಮಯದ ಬಳಿಕ ಗಂಭೀರ್‌(50)  22ನೆ ಅರ್ಧಶತಕ ದಾಖಲಿಸಿ  ಔಟಾದರು.

ಭಾರತ ಎರಡನೆ ಇನಿಂಗ್ಸ್ ನಲ್ಲಿ 49 ಓವರ್ ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 216 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಮುರಳಿ ವಿಜಯ್ 19 ರನ್, ಗಂಭೀರ್ 50ರನ್ (56ಎ, 6ಬೌ), ಪೂಜಾರ ಔಟಾಗದೆ 101 ರನ್( 148ಎ, 9ಬೌ), ವಿರಾಟ್ ಕೊಹ್ಲಿ 17 , ಅಜಿಂಕ್ಯ ರಹಾನೆ ಔಟಾಗದೆ 23 ರನ್ ಗಳಿಸಿದರು. ನ್ಯೂಝಿಲೆಂಡ್ ನ ಜೀತನ್ ಪಟೇಲ್ 56ಕ್ಕೆ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News