ಎಸ್. ಹಾಮದ್ ವೇಣೂರು
Update: 2016-10-11 19:54 IST
ಬೆಳ್ತಂಗಡಿ,ಅ.11: ಇಲ್ಲಿಯ ಸ್ವಸ್ತಿಕ್ ನಗರದ ನಿವಾಸಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್. ಹಾಮದ್ (70) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ಅ.10ರಂದು ನಿಧನ ಹೊಂದಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡು ಪಕ್ಷದ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ವೇಣೂರು ಜುಮಾ ಮಸೀದಿಯ ಅಧ್ಯಕ್ಷರಾಗಿ, ಗೌರವ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಬೀಡಿ ಅಸೋಸಿಯೇಶನ್‌ನ ಸಲಹೆಗಾರರಾಗಿದ್ದರು. ವೇಣೂರಿನ ಹಲವು ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, 3 ಗಂಡು, 4 ಹೆಣ್ಣು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.