ಪಾಕಿಸ್ತಾನಿ ಪತ್ರಕರ್ತ ಸಿರಿಲ್ ಎಲ್ಲಿಯವರು ?

Update: 2016-10-12 13:07 GMT

ಪಣಜಿ, ಅ.12: ಪಾಕಿಸ್ತಾನ ಸರಕಾರ ಹಾಗೂ ಸೇನಾ ನಾಯಕತ್ವದ ನಡುವೆ ಬಿರುಕುಂಟಾಗಿದೆಯೆಂಬ ವರದಿಗಾಗಿ ಪಾಕಿಸ್ತಾನದಿಂದ ಹೊರ ಹೋಗುವುದಕ್ಕೆ ನಿಷೇಧ ಹೇರಲ್ಪಟ್ಟಿರುವ ಪತ್ರಕರ್ತ ಸಿರಿಲ್ ಅಲ್ಮೆಡಾ ಗೋವಾ ಮೂಲದವರಾಗಿದ್ದಾರೆ.

ದೇಶ ವಿಭಜನೆಗೆ ಮೊದಲು ಕರಾಚಿ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದಾಗಲೇ ಅವರ ಹಿರಿಯರು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. 30 ವರ್ಷಗಳ ಬಳಿಕ ದೇಶ ವಿಭಜನೆಯಾದ ಮೇಲೆ, ಕರಾಚಿಯಲ್ಲಿ ಗೋವನ್ ಸಮುದಾಯ ಸಾಕಷ್ಟು ಸಂಖ್ಯೆಯಲ್ಲಿದ್ದ ಕಾರಣ ಅಲ್ಮೆಡಾ ಕುಟುಂಬ ಅಲ್ಲಿಯೇ ನೆಲೆ ನಿಲ್ಲಲು ನಿರ್ಧರಿಸಿತ್ತು. ಈ ರೀತಿ ಪಾಕಿಸ್ತಾನದಲ್ಲಿ ಗೋವನ್ನರ ಮೂಲ ಆರಂಭವಾಗಿತ್ತೆಂದು ಕಳೆದ ವರ್ಷ ಸತತ ಮೂರನೆ ಬಾರಿಗೆ ವಾರ್ಷಿಕ ಗೋವಾ ಕಲೆ ಮತ್ತು ಸಾಹಿತ್ಯೋತ್ಸವಕ್ಕಾಗಿ (ಗಾಲ್ಫ್) ಆಗಮಿಸಿದ್ದ ವೇಳೆ ಸಿರಿಲ್ ಟಿಒಐಗೆ ತಿಳಿಸಿದ್ದರು. ಅವರದು ಅದು ಗೋವಾಕ್ಕೆ ಮೂರನೆಯ ಭೇಟಿಯಾಗಿದ್ದರೂ, ಅವರ ಕುಟುಂಬಿಕರಿಗೆ ಅದು ಮೊದಲ ಭೇಟಿಯಾಗಿತ್ತು.

ಸಿರಿಲ್‌ಗೆ ಕೊಂಕಣಿ ಬರುವುದಿಲ್ಲವಾದರೂ, ಇಂಗ್ಲಿಷ್ ಹಾಗೂ ಉರ್ದುಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News