ರಥಶಿಲ್ಪಿ ಅಶ್ವತ್ಥಪುರ ಬಾಬುರಾಯ ಆಚಾರ್ಯ
Update: 2016-10-15 12:34 IST
ಮೂಡುಬಿದಿರೆ, ಅ.15: ರಥಶಿಲ್ಪಿ ಅಶ್ವತ್ಥಪುರ ಬಾಬುರಾಯ ಆಚಾರ್ಯ (65) ಅಲ್ಪಕಾಲದ ಅಸೌಖ್ಯದಿಂದಾಗಿ ಗುರುವಾರ ರಾತ್ರಿ ನಿಧನ ಹೊಂದಿದರು.
ಇವರು ರಾಜ್ಯದ ವಿವಿಧ ದೇವಸ್ಥಾನಗಳಿಗೆ ರಥವನ್ನು ನಿರ್ಮಿಸಿದ್ದರು. ಆಳ್ವಾಸ್ ನುಡಿಸಿರಿ, ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದರು. ಎರಡು ಬಾರಿ ರಾಷ್ಟ್ರೀಯ ಶಿಲ್ಪಕಲಾ ಪರಿಷತ್ ಗೆ ಶಿಫಾರಸು ಮಾಡಲಾಗಿತ್ತು.
ಇವರ ಸಾಧನೆಯನ್ನು ಗುರುತಿಸಿ ತೆಂಕಮಿಜಾರು ಪಂಚಾಯತ್ ಸಹಿತ ವಿವಿಧ ಸಂಘಸಂಸ್ಥೆಗಳು ಗುರುತಿಸಿ ಗೌರವಿಸಿವೆ.