25 ವರ್ಷಗಳ ಬಳಿಕ ರಿಲೀಸ್ ಆಗಲಿದೆ ಶಾರುಕ್ ಚಿತ್ರ!

Update: 2016-10-16 17:35 GMT

ಬಾಲಿವುಡ್ ಬಾದ್‌ಶಹಾ ಶಾರುಕ್ ಖಾನ್ ಬಾಲಿವುಡ್‌ಗೆ ಆಗಮಿಸುವ ಮುಂಚೆ ಟಿವಿ ನಟರಾಗಿಯೂ ಗಮನಸೆಳೆದಿದ್ದರು. ಅವರು ಅಭಿನಯಿಸಿದ್ದ ಸರ್ಕಸ್,ಫೌಝಿ ಟಿವಿ ಧಾರಾವಾಹಿಗಳು ಭಾರತೀಯರ ಮನೆಮಾತಾಗಿದ್ದವು. ಆದರೆ ಅವರು ಅಹಮಾಕ್ ಎಂಬ ಕಿರು ಟಿವಿ ಧಾರಾವಾಹಿಯಲ್ಲೂ ನಟಿಸಿದ್ದರೆಂಬುದು ಅನೇಕರಿಗೆ ತಿಳಿದಿಲ್ಲ. ಆದರೆ ಈ ಧಾರಾವಾಹಿಯನ್ನು ಒಂದು ಪೂರ್ಣಪ್ರಮಾಣದ ಚಿತ್ರವಾಗಿ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಸದ್ಯದಲ್ಲೇ ನಡೆಯಲಿರುವ ಜಿಯೋ ಮಾಮಿ ಮುಂಬೈ ಚಲನಚಿತ್ರೋತ್ಸವದಲ್ಲಿ ಅಹಮಾಕ್ ಪ್ರದರ್ಶನಗೊಳ್ಳಲಿದೆ. ಅಂದಹಾಗೆ ಅಹಮಾಕ್ 1991ರಲ್ಲಿ ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರಗೊಂಡಿತ್ತು. ಆ ಕಾಲದ ಜನಪ್ರಿಯ ಟಿವಿ ತಾರೆ ಮೀತಾ ವಸಿಷ್ಠ್, ಈ ಟೆಲಿಸಿರೀಯಲ್‌ನಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಧಾರಾವಾಹಿಯಾಗಿ ಪ್ರಸಾರವಾದ ಬಳಿಕ ನಿರ್ಮಾಪಕರು ಅಹಮಾಕ್‌ನ್ನು ಚಲನಚಿತ್ರವಾಗಿ ಪರಿವರ್ತಿಸಿದರು. ಅದು 1992ರ ನ್ಯೂಯಾರ್ಕ್ ಚಲನಚಿತ್ರೋತ್ಸವದಲ್ಲೂ ಪ್ರದರ್ಶಿತವಾಗಿತ್ತು. ಆದಾಗ್ಯೂ ಅದು ಈ ತನಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರಲಿಲ್ಲ. ವಿಶ್ವಪ್ರಸಿದ್ಧ ಕಥೆಗಾರ ಫಿಯೋದೊರ್ ದೊಸ್ತೊವ್‌ಸ್ಕಿಯವರ ‘ ದಿ ಇಡಿಯಟ್’ ಕಾದಂಬರಿಯನ್ನು ಅಹಮಾಕ್ ಆಧರಿಸಿದೆ. ಈ ಟಿವಿ ಧಾರಾವಾಹಿಗೆ ಕತ್ತರಿ ಪ್ರಯೋಗಿಸದೆಯೇ ನಾಲ್ಕು ತಾಸುಗಳ ಪೂರ್ಣ ಪ್ರಮಾಣದ ಚಿತ್ರವಾಗಿ ಅದು ಪ್ರದರ್ಶನಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News