ಕಂಗನಾ ಆಗಲಿದ್ದಾರೆ ಸಿಮ್ರಾನ್

Update: 2016-10-16 18:20 GMT

‘ತನು ವೆಡ್ಸ್ ಮನು’ ‘ಕ್ವೀನ್’ ಚಿತ್ರಗಳ ಮೂಲಕ ಖ್ಯಾತಿಯ ಶಿಖರಕ್ಕೇರಿದ ಬಾಲಿವುಡ್ ನಟಿ ಕಂಗನಾ ರಾಣಾವತ್, ಹಿರಿಯ ನಿರ್ದೇಶಕ ಹನ್ಸ್‌ಲಾಲ್ ಮೆಹ್ತಾ ನಿರ್ದೇಶನದ ಚಿತ್ರ ‘ಸಿಮ್ರಾನ್’ನಲ್ಲಿ ನಟಿಸಲಿದ್ದಾರೆ.ಕಂಗನಾ ಚಿತ್ರವೆಂದರೆ ಅದು ಹಿರೋಯಿನ್ ಒರಿಯಂಟೆಡ್ ಆಗಿರುವುದೆಂಬುದರಲ್ಲಿ ಸಂಶಯವಿಲ್ಲ. ಸಂಪೂರ್ಣ ಭಾವಾನಾತ್ಮಕ ಕಥಾವಸ್ತುವುಳ್ಳ ಈ ಸಿನೆಮಾದಲಿ ಕಂಗನಾ, 30ರ ಹರೆಯದ ವಿವಾಹ ವಿಚ್ಛೇದಿತ ಮಹಿಳೆ ಪ್ರಫುಲ್ಲಾ ಪಟೇಲ್‌ಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇಷ್ಟೊಂದು ಅಭಿನಯ ತೀವ್ರತೆಯುಳ್ಳ ಪಾತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲ ಸಲವೆಂದು ಸ್ವತಃ ಕಂಗನಾ ತನ್ನ ಚಿತ್ರದ ಗುಣಗಾನ ಮಾಡಿದ್ದಾಳೆ. ಅಷ್ಟೇ ಅವಳು ಸಿಮ್ರಾನ್ ಪಾತ್ರದಲ್ಲಿ ಪರ್‌ಫೆಕ್ಷನ್‌ಗಾಗಿ ಸಾಕಷ್ಟು ಪೂರ್ವತಯಾರಿ ನಡೆಸುತ್ತಿದ್ದಾರೆೆ. ಈ ಚಿತ್ರದ ಬಗ್ಗೆ ಅವರು ಎಷ್ಟು ಮುತುವರ್ಜಿ ವಹಿಸಿದ್ದಾಳೆಂದರೆ, ಹೊರಪ್ರಪಂಚದ ಜೊತೆ ಸಂಪರ್ಕವನ್ನೇ ಕಡಿದುಕೊಂಡು, ಅಭಿನಯವನ್ನು ಅಭ್ಯಾಸ ಮಾಡುತ್ತಿದ್ದಾರೆಂದು ಚಿತ್ರತಂಡದ ಮೂಲಗಳು ತಿಳಿಸಿವೆ.
 ಇದರ ಜೊತೆಗೆ ಕಂಗನಾ, ವಿಶಾಲ್ ಭಾರದ್ವಾಜ್ ನಿರ್ದೇಶನದ ‘ರಂಗೂನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಹೀದ್ ಕಪೂರ್ ಹಾಗೂ ಸೈಫ್ ಅಲಿ ಖಾನ್ ಚಿತ್ರದ ನಾಯಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News