ಇಕ್ಬಾಲ್ ಕೈಕುಲುಕಲು ನಿರಾಕರಿಸಿದ ಸ್ಟೋಕ್ಸ್

Update: 2016-10-17 18:31 GMT

 ಲಂಡನ್, ಅ.17: ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಪ್ರತಿಭಟನೆಯ ರೂಪದಲ್ಲಿ ಬಾಂಗ್ಲಾದೇಶ ಕ್ರಿಕೆಟಿಗನ ಕೈಕುಲುಕಲು ನಿರಾಕರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಕೊನೆಗೊಂಡ ಬಾಂಗ್ಲಾದೇಶ ಪ್ರವಾಸದಲ್ಲಿ 2ನೆ ಏಕದಿನ ಪಂದ್ಯದಲ್ಲಿ ಸ್ಟೋಕ್ಸ್ ಬಾಂಗ್ಲಾದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್‌ರೊಂದಿಗೆ ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿದ್ದರು.

ಪಂದ್ಯ ಮುಗಿದ ಬಳಿಕ ತಮೀಮ್ ಕೈಕುಲುಕಲು ಮುಂದಾದಾಗ ಸ್ಟೋಕ್ಸ್ ಕೈಕುಲುಕದೇ ತನ್ನ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಈ ದೃಶ್ಯ ವಿಡಿಯೋದಲ್ಲಿ ವೈರಲ್ ಆಗಿದೆ.

ಬೆನ್ ಓರ್ವ ಭಾವಜೀವಿ. ಮೈದಾನದಲ್ಲಿ ಏನು ನಡೆಯದೇ ಇರುತ್ತಿದ್ದರೆ ಅವರು ಖಂಡಿತ ಹಾಗೇ ಮಾಡುತ್ತಿರಲಿಲ್ಲ ಎಂದು ಇಂಗ್ಲೆಂಡ್‌ನ ಏಕದಿನ ತಂಡದ ನಾಯಕ ಜೋಸ್ ಬಟ್ಲರ್ ಹೇಳಿದಾದರೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News