ಒಂದು ವೀಡಿಯೋಗೆ ಲಕ್ಷ ಸಂಪಾದನೆ ಮಾಡುವ 6 ವರ್ಷದ ಪೋರ !

Update: 2016-10-19 08:19 GMT

ಅರಳುವ ಪ್ರತಿಭೆ ಚಿಗುರಿನಲ್ಲಿಯೇ ಗಂಧವನ್ನು ಪಸರಿಸುತ್ತದೆ ಎನ್ನುವುದಕ್ಕೆ ಕೊಚ್ಚಿಯ ಈ 6 ವರ್ಷದ ಪೋರ ನಿಹಾಲ್ ಸಾಕ್ಷಿಯಾಗಿದ್ದಾರೆ. ನಿಹಾಲ್ ಪ್ರತಿಭೆಯನ್ನು ನೋಡಿ ದೊಡ್ಡ ದೊಡ್ಡ ಉದ್ಯಮಪತಿಗಳು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. 6 ವರ್ಷದಲ್ಲಿಯೇ ಈ ಪೋರ ಯೂ ಟ್ಯೂಬ್ ಸೆಲೆಬ್ರಿಟಿ ಮತ್ತು ಉದ್ಯಮಿಯೂ ಆಗಿದ್ದಾರೆ. ಮಾರ್ಕ್ ಝುಕರ್‌ಬರ್ಗ್‌ನಿಂದ ಆರಂಭಿಸಿ ಪ್ರಸಿದ್ಧ ಪಾಕಶಾಸ್ತ್ರ ಪ್ರವೀಣರಾದ ಎಲೆನ್ ಮೊಲಾದವರು ಇವರ ಅಭಿಮಾನಿಗಳು.

ಈ ವಯಸ್ಸಿನಲ್ಲಿ ಮಕ್ಕಳಿಗೆ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದೂ ತಿಳಿದಿರುವುದಿಲ್ಲ. ಉಡುವ ತೊಡುಗೆಯನ್ನು ಅಮ್ಮಂದಿರು ಖರೀದಿಸಿ ಕೊಡುತ್ತಾರೆ. ಆದರೆ 6 ವರ್ಷದಲ್ಲೇ ಈ ಪೋರ ಅಡುಗೆಯಲ್ಲಿ ನಿಸ್ಸೀಮ. ಇವರ ಅಡುಗೆ ಕಲೆಯನ್ನು ಪ್ರದರ್ಶಿಸುವ ವೀಡಿಯೋಗಳು ಯೂಟ್ಯೂಬ್‌ನಲ್ಲಿ ಸುಪ್ರಸಿದ್ಧ. ಇವರು ಒಂದು ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ.

ನಾಲ್ಕು ವರ್ಷಗಳಲ್ಲಿ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇರಬಹುದು? ಹೆಚ್ಚೆಂದರೆ ಫುಟ್ಬಾಲ್ ಅಥವಾ ಹಗ್ಗ ಜಗ್ಗಾಟವಾಡಬಹುದು. ಆದರೆ ನಿಹಾಲ್ ಈ ವರ್ಷದಲ್ಲಿ ಅಮ್ಮನ ಜೊತೆಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಅಮ್ಮನಿಂದ ವಿವಿಧ ಅಡುಗೆ ಕಲೆಗಳನ್ನು ಕಲಿಯಲು ಆಸಕ್ತಿ ತೋರಿಸಿದ್ದ. ಹೀಗೆ ಕಲಿಯುತ್ತಾ ನಿಧಾನವಾಗಿ ಹೊಸ ಅಡುಗೆಗಳನ್ನು ಮಾಡಲಾರಂಭಿಸಿದ್ದ.

ಟಿವಿಯಲ್ಲಿ ಬರುವ ವಿವಿಧ ಕಾರ್ಯಕ್ರಮಗಳ ಅಡುಗೆಯನ್ನು ನೋಡಿ ಹಾಗೇ ತಯಾರಿಸುತ್ತಿದ್ದ. ಹೀಗೆ ಮಗ ಅಡುಗೆ ಮಾಡುವುದನ್ನು ತಂದೆ ಫೋನಿನಲ್ಲಿ ಚಿತ್ರೀಕರಣ ಮಾಡಿ ಇಂಟರ್ನೆಟ್‌ನಲ್ಲಿ ಹಾಕಿದರು. ಅಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಕಾರ್ಯಕ್ರಮ ನಡೆಸುವ ಪಾಕ ಪ್ರವೀಣರಾದ ಎಲೆನ್ ಡಿಜನರ್ಸ್‌ ವೀಡಿಯೋ ನೋಡಿದರು. ಈಗ ನಿಹಾಲ್ ಎಲೆನ್ ಜೊತೆಗೆ ಅಡುಗೆ ಕಾರ್ಯಕ್ರಮ ನಡೆಸಿಕೊಡುತ್ತಾರೆ.

ನಿಹಾಲ್ ಅವರು ಕಿಚ್ಚಾಟ್ಯೂಬ್ ಹೆಸರಲ್ಲಿ ತಮ್ಮದೇ ಯೂಟ್ಯೂಬ್ ಚಾನಲ್ ನಡೆಸುತ್ತಾರೆ. ಈ 9 ವರ್ಷದ ಇವಾನ್ ಯೂಟ್ಯೂಬ್ ಚಾನಲ್ ಮಾಡಿಕೊಂಡು ತಮ್ಮ ಆಟದ ಸಾಮಾನುಗಳ ವಿಶ್ಲೇಷಣೆ ಮಾಡುವುದರಿಂದ ಪ್ರೇರಣೆ ಪಡೆದು ನಿಹಾಲ್ ಕೂಡ ಅಡುಗೆ ವಿಚಾರಕ್ಕಾಗಿ ತಮ್ಮದೇ ಚಾನಲ್ ಆರಂಭಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಿಹಾಲ್ ಅಡುಗೆ ಕಲೆಗೆ ಅಂತರ್ಜಾಲದಲ್ಲಿ ಬಹಳ ಮಂದಿ ಮಾರು ಹೋಗಿದ್ದಾರೆ ಮತ್ತು ಅವರಿಗೆ ಇದರಿಂದ ಹಣವೂ ಬರುತ್ತಿದೆ. ಈಗ ಅವರು ದೀಪಾವಳಿಯ ತಯಾರಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News