×
Ad

ಪೊಲೀಸರ ಆತ್ಮಹತ್ಯೆ ದುರದೃಷ್ಟಕರ ಬೆಳವಣಿಗೆ: ಸಿಎಂ

Update: 2016-10-20 23:45 IST

ಬೆಂಗಳೂರು, ಅ.20: ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುವುದು ದುರದೃಷ್ಟಕರ ಬೆಳವಣಿಗೆ. ಅಲ್ಲದೆ, ಪೊಲೀಸರ ಆತ್ಮಹತ್ಯೆ ನೋವಿನ ಸಂಗತಿಯಾಗಿದ್ದು, ಸಾರ್ವಜನಿಕವಾಗಿಯೇ ಇಂತಹ ದುರ್ಘಟನೆಗಳು ಸಂಭವಿಸಿದರೆ, ಉತ್ತಮವಾದ ಪ್ರತಿಕ್ರಿಯೆ ಬರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದ್ದಾರೆ.

ಗುರುವಾರ ನಗರದ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಏರ್ಪಡಿಸಿದ್ದ, ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿರುವ ಸಾಧಕರಿಗೆ ‘ರಾಷ್ಟ್ರಪತಿಯವರ ಪದಕ ಪ್ರದಾನ’ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
 


  ಯಾವುದೇ ಒತ್ತಡಕ್ಕೂ, ಕುಟುಂಬದ ಕಾರಣಕ್ಕೂ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳುವುದು ಒಳ್ಳೆಯ ಪ್ರವೃತ್ತಿಯಲ್ಲ ಎಂದ ಅವರು, ಪೊಲೀಸರಿಗೆ ಈಗಲೂ ಹಳೆಯ ಕಾಲದ ತರಬೇತಿ ನೀಡಲಾಗುತ್ತಿದೆ. ಇದನ್ನು ಬದಲಾಯಿಸಿ, ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠರಾಗುವ ಬಗ್ಗೆ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಸಮಾಜದ ರಕ್ಷಣೆ ಮಾಡುವ ಜವಾಬ್ದಾರಿ, ಶಾಂತಿ ಸುವ್ಯವಸ್ಥೆ ಪಾಲನೆ, ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಣೆ ಮಾಡುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಅಲ್ಲದೆ, ಪೊಲೀಸರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಾರೆ. ಸಮಾಜ ಗುರುತಿಸಲಿ, ಬಿಡಲಿ ನೀವು ಮಾತ್ರ ಕರ್ತವ್ಯದಿಂದ ವಿಮುಖರಾಗಬೇಡಿ. ಏಕೆಂದರೆ, ಸಮಾಜ ನಿಮ್ಮಿಂದ ಉತ್ತಮ ಸೇವೆ ನಿರೀಕ್ಷೆ ಮಾಡುತ್ತದೆ ಎಂದು ಸಿಎಂ ನುಡಿದರು.ುಪ್ತದಳ ಬಲಿಷ್ಠ: ಪೊಲೀಸ್ ಗುಪ್ತದಳ ಬಲಿಷ್ಠವಾಗಿದ್ದರೆ, ಸಂಭಾವ್ಯ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ುಪ್ತದಳ ಇಲಾಖೆ ಬಲಯುತವಾಗಿದ್ದರೆ, ಮುಂದಾಗುವ ಹಲವಾರು ದುರ್ಘಟನೆಗಳು, ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಅಲ್ಲದೆ, ಕೇವಲ ಮಾಧ್ಯಮಗಳಲ್ಲಿ ಬರುವ ವರದಿಯನ್ನೇ ಆಧರಿಸಿ ಮಾಹಿತಿ ನೀಡುವುದು ಗುಪ್ತಚರ ತನಿಖಾ ದಳದ ಕೆಲಸವಲ್ಲ. ಮುಂದಾಗುವುದನ್ನು ತಿಳಿಸಬೇಕು ಎಂದ ಅವರು, ಅಪರಾಧ ಸಂಭವಿಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅಪರಾಧಗಳನ್ನೆ ನಿಯಂತ್ರಿಸುವುದು ಸೂಕ್ತ ಎಂದು ಸಿದ್ದರಾಮಯ್ಯ ಸಲಹೆ ಮಾಡಿದರು.

ರಾಜಕಾರಣಿಗಳಿಗೆ ಫಿಟ್‌ನೆಸ್ ಇಲ್ಲದಿದ್ದರೂ, ಪೊಲೀಸರಿಗೆ ಶೌರ್ಯದ ಜೊತೆಗೆ ಫಿಟ್‌ನೆಸ್ ಇರಬೇಕು. ಅಲ್ಲದೆ, ಪೊಲೀಸರು ಉತ್ತಮ ಸೇವೆ ಸಲ್ಲಿಸಬೇಕಾದರೆ ಕುಟುಂಬದವರ ಸಹಕಾರವೂ ಅಗತ್ಯ. ಅವರ ಸಹಕಾರ ಇಲ್ಲದಿದ್ದರೆ ಸಾಧನೆ ಮಾಡಲಾಗದು. ಪೊಲೀಸರ ಈ ಸಾಧನೆಯ ಪ್ರಶಸ್ತಿಯಲ್ಲಿ ಕುಟುಂಬದವರ ಪಾಲೂ ಇದೆ. ಹೀಗಾಗಿ, ಮೊದಲು ನಾನು ನಿಮ್ಮ ಕುಟುಂಬದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಸಾಧಕರಿಗೆ ಪದಕ ಪ್ರದಾನ: ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ 66 ಪೊಲೀಸ್ ಅಕಾರಿಗಳಿಗೆ ಪೊಲೀಸ್ ಶೌರ್ಯ ಪದಕ, ರಾಷ್ಟ್ರಪತಿಯವರ ಪೊಲೀಸ್ ವಿಶಿಷ್ಟ ಸೇವಾ ಪದಕ ಹಾಗು ಪೊಲೀಸ್ ಶ್ಲಾಘನೀಯ ಸೇವಾ ಪದಕ ಪ್ರದಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ,ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಠಿಯಾ, ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಸೇರಿ ಪ್ರಮುಖರು ಹಾಜರಿದ್ದರು.

ಪೊಲೀಸ್ ತರಬೇತಿಗೆ ಹೊಸ ರೂಪ ಕೊಡುವ ಅಗತ್ಯವಿದೆ: ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು, ಅ.20: ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಸಮಾಜ ಬಯಸುವುದು ಜನಸ್ನೇಹಿ ಪೊಲೀಸರನ್ನು. ಜನಸ್ನೇಹಿಯಾಗಿ ಕೆಲಸ ಮಾಡುವುದು ದೊಡ್ಡ ಸವಾಲು. ಮುಂದಿನ ದಿನಗಳಲ್ಲಿ ಪೊಲೀಸ್ ತರಬೇತಿಗೆ ಹೊಸ ರೂಪ ಕೊಡುವ ಅಗತ್ಯವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದ್ದಾರೆ.

ಗುರುವಾರ ನಗರದ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಏರ್ಪಡಿಸಿದ್ದ, ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿರುವ ಸಾಧಕರಿಗೆ ರಾಷ್ಟ್ರಪತಿಯವರ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಸಮಾಜ ಬಯಸುವುದು ಜನಸ್ನೇಹಿ ಪೊಲೀಸರನ್ನು. ಹಾಗಾಗಿ ಜನರ ಜತೆ ಅವರ ನಡೆ-ನುಡಿ ಬಹಳ ಉತ್ತಮವಾಗಿರಬೇಕೆಂದು ಸಲಹೆ ನೀಡಿದರು.ೆಲವು ಸಂದರ್ಭದಲ್ಲಿ ಜನಸ್ನೇಹಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಜನಸ್ನೇಹಿಯಾಗಿ ಕೆಲಸ ಮಾಡುವುದು ದೊಡ್ಡ ಸವಾಲು ಎಂದ ಅವರು, ಪೊಲೀಸ್ ವೃತ್ತಿ ಎಲ್ಲ ವೃತ್ತಿಗಳಿಗಿಂತ ಶ್ರೇಷ್ಠ ವೃತ್ತಿ. ಮುಂದಿನ ದಿನಗಳಲ್ಲಿ ಪೊಲೀಸ್ ತರಬೇತಿಗೆ ಹೊಸ ರೂಪ ಕೊಡುವ ಅಗತ್ಯವೂ ಇದೆ ಎಂದರು.
ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿ ಹೆಸರು ಮಾಡಿದೆ. ಬೆಂಗಳೂರಿನಲ್ಲಿ ಶಾಂತಿ ಕಾಪಾಡಿ ಎಲ್ಲರನ್ನೂ ಸಮಾನರಾಗಿ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸರ ಮೇಲಿದೆ. ಇತ್ತೀಚಿನ ಕೆಲ ದಿನಗಳಲ್ಲಿ ನಡೆದ ಅಹಿತಕರ ಘಟನೆಗಳ ಸಂದರ್ಭದಲ್ಲಿ ಪೊಲೀಸರು ಸಂಯಮ ತೋರಿದರೂ ಮಾಧ್ಯಮಗಳಲ್ಲಿ ಪ್ರಚೋದನೆ ದೃಶ್ಯಗಳು ಬಿತ್ತರವಾದರೂ ಪೊಲೀಸರು ಸಂಯಮದಿಂದ ವರ್ತಿಸಿದರು ಎಂದು ಗೃಹ ಸಚಿವರು ಕಾವೇರಿ ಗಲಭೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News