ನಿಮ್ಮ ಮೆದುಳಿಗೆ ಅಪಾಯ ತಂದೊಡ್ಡುವ ಈ ಅಭ್ಯಾಸಗಳನ್ನು ತಕ್ಷಣ ನಿಲ್ಲಿಸಿ

Update: 2016-10-21 18:23 GMT

ಉಪಾಹಾರ ಸೇವಿಸದೆ ಇರುವುದು

ನೀವು ಬೆಳಗಿನ ಉಪಾಹಾರ ಸೇವಿಸದಿದ್ದಲ್ಲಿ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಫಲಿತಾಂಶವಾಗಿ ಸಾಕಷ್ಟು ಪೌಷ್ಟಿಕಾಂಶಗಳು ಮೆದುಳಿಗೆ ಹೋಗದೆ ಮೆದುಳಿನಲ್ಲಿ ಗಡ್ಡೆ ಬೆಳೆಯುವ ಸಾಧ್ಯತೆ ಹೆಚ್ಚಾಗುತ್ತದೆ.

ಅತಿಯಾದ ಭೋಜನ

ಅಗತ್ಯಕ್ಕಿಂತ ಹೆಚ್ಚು ತಿನ್ನುವುದರಿಂದ ಹೊಟ್ಟೆ ಬೆಳೆಯುವ ಜೊತೆಗೆ ಮೆದುಳಿನ ನರನಾಳಗಳೂ ಬಿಗಿದುಕೊಂದು ಮಾನಸಿಕ ಶಕ್ತಿ ಕುಸಿಯುತ್ತದೆ.

ಧೂಮಪಾನ

ಮೆದುಳಿನ ಹೊರಗಿನ ಪದರವಾಗಿರುವ ಕಾರ್ಟೆಕ್ಸ್ ಸ್ಮರಣೆ, ಭಾಷೆ ಮತ್ತು ವರ್ತನೆಗೆ ಕಾರಣ. ಧೂಮಪಾನದಿಂದ ಇದು ತೆಳುವಾಗುತ್ತದೆ. ಇದರಿಂದ ಮಲ್ಟಿಪಲ್ ಬ್ರೈನ್ ಶ್ರಿಂಕೇಜ್ (ಬಹುಭಾಗದ ಮೆದುಳು ಮುದುಡುವುದು) ಕೂಡ ಆಗಬಹುದು.

ಅತೀ ಸಕ್ಕರೆ ಪ್ರಮಾಣ

ಅತಿಯಾದ ಸಕ್ಕರೆ ಸೇವನೆಯಿಂದ ಪ್ರೊಟೀನ್‌ಗಳು ಮತ್ತು ಇತರ ಪೌಷ್ಟಿಕಾಂಶಗಳನ್ನು ಹೀರಿಕೊಳ್ಳುವ ಶಕ್ತಿ ಕಡಿಮೆಯಾಗಿ ಅಪೌಷ್ಠಿಕತೆ ಆವರಿಸುತ್ತದೆ. ಇದು ಮೆದುಳಿನ ಬೆಳವಣಿಗೆಗೆ ತಡೆಯೊಡ್ಡುತ್ತದೆ. ಅಲ್ಲದೆ ಅಲ್ಜೀಮರ್ ರೋಗ ಬರುವ ಸಾಧ್ಯತೆ ಹೆಚ್ಚಾಗುತ್ತದೆ.

ವಾಯು ಮಾಲಿನ್ಯ

ಮೆದುಳು ದೇಹದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಆದರೆ ವಾಯು ಮಾಲಿನ್ಯದಿಂದಾಗಿ ಆಮ್ಲಜನಕದ ಸರಬರಾಜಿನಲ್ಲಿ ತಡೆಯುಂಟಾಗುತ್ತದೆ. ಇದರಿಂದ ಮೆದುಳಿನ ಸಾಮರ್ಥ್ಯ ಕುಸಿಯುತ್ತದೆ.

ನಿದ್ರಾರಾಹಿತ್ಯ

ನೀವು ಮಲಗಿದಾಗ ಮೆದುಳಿನ ಕೋಶಗಳ ರಚನೆ ಬದಲಾಗುತ್ತಾ ದಿನದಲ್ಲಿ ತುಂಬಿಕೊಂಡ ಟಾಕ್ಸಿನ್‌ಗಳನ್ನು ಹೊರಕಳುಹಿಸುತ್ತದೆ. ನಿದ್ರಾರಾಹಿತ್ಯವು ಹೀಗೆ ಟಾಕ್ಸಿನ್ ಬಿಡುಗಡೆಯಾಗುವುದನ್ನು ತಡೆಯುತ್ತದೆ ಮತ್ತು ಮೆದುಳಿನ ಕೋಶಗಳ ಮರಣಕ್ಕೆ ಕಾರಣವಾಗುತ್ತದೆ.

ನಿದ್ದೆ ಮಾಡುವಾಗ ತಲೆಗೆ ಹೊದ್ದುಕೊಳ್ಳುವುದು

ತಲೆಗೆ ಕಂಬಳಿ ಹೊದ್ದು ಮಲಗುವುದರಿಂದ ಮೆದುಳಿಗೆ ಹಾನಿಯಾಗಬಹುದು. ಹಾಗೆ ಮಾಡುವುದರಿಂದ ನೀವು ಆಮ್ಲಜನಕಕ್ಕಿಂತ ಹೆಚ್ಚಾಗಿ ಕಾರ್ಬನ್ ಡೈ ಆಕ್ಸೈಡ್ ಒಳತೆಗೆದುಕೊಳ್ಳುತ್ತೀರಿ.

ಅನಾರೋಗ್ಯದ ಸಂದರ್ಭದಲ್ಲಿ ನಿಮ್ಮ ಮೆದುಳಿನ ಕೆಲಸ

ರೋಗದ ವಿರುದ್ಧ ಹೋರಾಟದಲ್ಲಿ ಮಿತಿ ಮೀರಿ ಪ್ರಯತ್ನಿಸುತ್ತಿದ್ದರೆ ಮೆದುಳಿನ ಸಾಮರ್ಥ್ಯವು ಕಡಿಮೆಯಾಗಿಬಿಡುತ್ತದೆ.

ಉತ್ತೇಜನೆಯ ಚಿಂತನೆಗಳ ಕೊರತೆ

ಯೋಚಿಸುವುದು ಮೆದುಳಿನ ಬಹಳ ಮುಖ್ಯ ಕಾರ್ಯ. ಆದರೆ ಹೆಚ್ಚು ಉತ್ತೇಜನಾಕಾರಿ ಆಲೋಚನೆಗಳನ್ನು ಮಾಡಿಕೊಂಡು ಮೆದುಳಿನ ಶಕ್ತಿಯನ್ನು ಹೆಚ್ಚು ಬಳಸಿಕೊಳ್ಳದಿದ್ದಲ್ಲಿ ಅದು ಮುದುಡಿ ಹೋಗುತ್ತದೆ.

ಅಪರೂಪದ ಮಾತು

ನೀವು ಕಡಿಮೆ ಮಾತನಾಡಿದಷ್ಟು ನಿಮ್ಮ ಮೆದುಳಿಗೆ ಹೆಚ್ಚು ಹಾನಿ ಮಾಡುತ್ತೀರಿ. ಬೌದ್ಧಿಕ ಚರ್ಚೆಗಳು ಮೆದುಳಿನ ಬೆಳವಣಿಗೆಗೆ ನೆರವಾಗುತ್ತದೆ.

ಕೃಪೆ: http://www.lifehacker.co.in/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News