×
Ad

ಮಂಜುನಾಥ ಭಟ್ಟ

Update: 2016-10-21 17:33 IST

ಭಟ್ಕಳ,ಅ.21 : ತಾಲ್ಲೂಕಿನ ಕಟಗಾರಕೊಪ್ಪದ ನಿವೃತ್ತ ಅಂಚೆ ನೌಕರ ಮಂಜುನಾಥ ನಾರಾಯಣ ಭಟ್ಟ (60) ಅವರು ಹೃದಯಾಘಾತದಿಂದ ಬುಧವಾರ ರಾತ್ರಿ ನಿಧನ ಹೊಂದಿದರು.

 ಮೃತರು ಸುಧೀರ್ಘ 40 ವರ್ಷಗಳ ಕಾಲ ಶಿರಾಲಿ, ಮುರ್ಡೇಶ್ವರ ಮುಂತಾದ ಅಂಚೆ ಕಚೇರಿಯಲ್ಲಿ ಕೆಲಸ ಮಾಡಿ ಅಪಾರ ಜನಮನ್ನಣೆ ಗಳಿಸಿದ್ದರು. ಮೇ 31, 2016 ರಂದು ಇವರು ಸೇವೆಯಿಂದ ನಿವೃತ್ತಿಯಾಗಿದ್ದರು. ಬುಧವಾರ ರಾತ್ರಿ ತಮ್ಮ ಹತ್ತಿರದ ಸಂಬಂಧಿಕರೋರ್ವರ ಮನೆಗೆ ಹೋಗಿ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಅವರಿಗೆ ಹೃದಯದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು, ಅವರನ್ನು ಕುಂದಾಪುರದ ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳು, ಸಹೋದರರು, ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಗುರುವಾರ ಮೃತರ ಮನೆಯಾದ ತೆಕ್ಕನಗದ್ದೆಗೆ ಜನಪ್ರತಿನಿಧಿಗಳು, ಅಂಚೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ನೂರಾರು ಜನರು ಆಗಮಿಸಿ ಮೃತದೇಹವ್ನು ವೀಕ್ಷಿಸಿ ಸಂತಾಪ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News