ಡೆನ್ಮಾರ್ಕ್ ಓಪನ್‌ನಲ್ಲಿ ಸಿಂಧು ಹೊರಕ್ಕೆ

Update: 2016-10-21 18:42 GMT

ಒಡೆನ್ಸಾ, ಅ.21: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಡೆನ್ಮಾರ್ಕ್ ಓಪನ್‌ನಲ್ಲಿ ಎರಡನೆ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.
 ವಿಶ್ವದ ನಂ.12 ಆಟಗಾರ್ತಿ ಜಪಾನ್‌ನ ಸಯಾಕೊ ಸಾಟೊ ಅವರನ್ನು ವಿರುದ್ಧ ಸಿಂಧು ಸೋತು ನಿರ್ಗಮಿಸಿದರು. ಸಿಂಧು ಅವರು ಸಾಟೊ ವಿರುದ್ಧ 13-21, 23-21, 18-21 ಅಂತರದಲ್ಲಿ ಸೋತು  ಹೊರ ನಡೆದರು. ಇವರ ನಡುವೆ 1 ಗಂಟೆ ಮತ್ತು ಐದು ನಿಮಿಷಗಳ ಹಣಾಹಣಿ ನಡೆಯಿತು.
ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಬಳಿಕ ಸಿಂಧು ಎದುರಿಸಿದ ಮೊದಲ ಟೂರ್ನಮೆಂಟ್‌ನಲ್ಲಿ ಎರಡನೆ ಸುತ್ತಿನಲ್ಲೇ ಅಭಿಯಾನ ಕೊನೆಗೊಳಿಸಿದ್ದಾರೆ.
 ಸಿಂಧು ಮೊದಲ ಸುತ್ತಿನಲ್ಲಿ ಚೀನಾದ ಹಿ ಬಿಂಗ್‌ಜಾವೊ ವಿರುದ್ಧ 1-14, 21-19 ಅಂತರದಲ್ಲಿ ಜಯ ಗಳಿಸಿದ್ದರು
 6ನೆ ಶ್ರೇಯಾಂಕದ ಸಿಂಧು ಅವರು ಬಿಂಗ್‌ಜಾವೊ ವಿರುದ್ಧ ಸಿಂಧು ಅವರು ಈ ಮೊದಲು 3ಬಾರಿ ಸೋಲು ಅನುಭವಿಸಿದ್ದರು. ಒಂದು ಬಾರಿ ಮಾತ್ರ ಜಯ ಗಳಿಸಿದ್ದರು. ಕಳೆದ ವರ್ಷ ಎಪ್ರಿಲ್‌ನಲ್ಲಿ ಮಲೇಷ್ಯನ್ ಓಪನ್‌ನಲ್ಲಿ ಸಿಂಧು ಅವರು ಜಿಂಗ್‌ಜಾವೊ ವಿರುದ್ಧ ಜಯ ಗಳಿಸಿದ್ದರು.
 ಸಿಂಧು ಅವರು ಜಿಂಗ್‌ಜಾವೊ ವಿರುದ್ಧ ಎರಡನೆ ಗೆಲುವು ದಾಖಲಿಸಿದ್ದರು. ಹೈದರಾಬಾದ್‌ನ 21ರ ಹರೆಯದ ಸಿಂಧು ಕಳೆದ ಆವೃತ್ತಿಯ ಡೆನ್ಮಾರ್ಕ್ ಓಪನ್‌ನಲ್ಲಿ ಸಿಂಧು ಫೈನಲ್ ತಲುಪಿದ್ದರು.
ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಜಯ್ ಜಯರಾಮ್ ಮತ್ತು ಪ್ರಣೋಯ್ ಸೋಲು ಅನುಭವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News