ಫಿಲಿಪ್ಪೀನ್ಸ್ಗೆ ಅಪ್ಪಳಿಸಿದ ‘ಹೆಮಾ’ ಚಂಡಮಾರುತ

Update: 2016-10-21 18:45 GMT

ಬೆಂಗುಯೆಟ್ (ಫಿಲಿಪ್ಪೀನ್ಸ್), ಅ. 21: ಫಿಲಿಪ್ಪೀನ್ಸ್‌ಗೆ ಅಪ್ಪಳಿಸಿದ ಚಂಡಮಾರುತ ‘ಹೈಮಾ’ ಕನಿಷ್ಠ 12 ಮಂದಿಯನ್ನು ಬಲಿತೆಗೆದುಕೊಂಡಿದೆ ಹಾಗೂ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹವು ಬೆಳೆದು ನಿಂತಿರುವ ಭತ್ತ ಮತ್ತು ಇತರ ಧಾನ್ಯಗಳು ಬೆಳೆದು ನಿಂತ ವಿಶಾಲ ಪ್ರದೇಶವನ್ನು ಆವರಿಸಿದೆ ಎಂದು ಮನಿಲಾದಲ್ಲಿ ಅಧಿಕಾರಿಗಳು ಶುಕ್ರವಾರ ತಿಳಿಸಿದರು.

ಚಂಡಮಾರುತವು ಬಳಿಕ ಹಾಂಕಾಂಗ್‌ನತ್ತ ಮುಂದುವರಿದಿದೆ.
ಮೂಲಸೌಕರ್ಯ ಮತ್ತು ಬೆಳೆಗಳಿಗೆ ಆಗಿರುವ ನಷ್ಟದ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ ಎಂದು ಫಿಲಿಪ್ಪೀನ್ಸ್ ಅಧಿಕಾರಿಗಳು ಹೇಳಿದರು.
ಉತ್ತರದ ರಾಜ್ಯಗಳಲ್ಲಿ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ ಎಂದರು.

ಬುಧವಾರ ರಾತ್ರಿ ಕಗಯಾನ್ ರಾಜ್ಯಕ್ಕೆ ಗಂಟೆಗೆ 225 ಕಿ.ಮೀ. ವೇಗದ ಗಾಳಿಯೊಂದಿಗೆ ಚಂಡಮಾರುತ ಅಪ್ಪಳಿಸಿತು. ಜೊತೆಗೆ ಭಾರೀ ಮಳೆಯೂ ಸುರಿಯಿತು. 50,000ದಿಂದ 60,000 ಹೆಕ್ಟೇರ್‌ಗಳಷ್ಟು ಭತ್ತದ ಗದ್ದೆಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದವು ಎಂದು ಪ್ರಾಂತೀಯ ಗವರ್ನರ್ ಮ್ಯಾನುಯಲ್ ಮಂಬ ತಿಳಿಸಿದರು.
2013ರಲ್ಲಿ ಫಿಲಿಪ್ಪೀನ್ಸ್‌ಗೆ ಅಪ್ಪಳಿಸಿದ ಭೀಕರ ‘ಹಯಾನ್’ ಎಂಬ ಹೆಸರಿನ ಚಂಡಮಾರುತವು 6,000ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿತ್ತು ಹಾಗೂ ಸಾವಿರಾರು ಕೋಟಿ ರೂಪಾಯಿ ವೌಲ್ಯದ ಸೊತ್ತು ನಷ್ಟ ಉಂಟುಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News