'ಜೇಮ್ಸ್ ಬಾಂಡ್', ಪಾನ್ ಬಹಾರ್ ಮುಗಿಯದ ಜಟಾಪಟಿ

Update: 2016-10-23 03:39 GMT

ಹೊಸದಿಲ್ಲಿ, ಅ.23: ಜೇಮ್ಸ್ ಬಾಂಡ್, ಪಾನ್ ಬಹಾರ್ ಮುಗಿಯದ ಜಟಾಪಟಿ ಮುಂದುವರಿದಿದ್ದು, ಪಾನ್ ಬಹಾರ್‌ನಲ್ಲಿ ಯಾವುದೇ ನಿಕೋಟಿನ್ ಅಥವಾ ತಂಬಾಕು ಅಂಶ ಇಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಉತ್ಪನ್ನದ ಪ್ರಚಾರ ರಾಯಭಾರಿಯಾಗಿರುವ ಹಾಲಿವುಡ್ ತಾರೆ ಪಿಯರ್ಸ್‌ ಬ್ರೋಸ್ನನ್ ಜತೆ ಮಾಡಿಕೊಂಡ ಒಪ್ಪಂದದದಲ್ಲಿ ಯಾವ ಉಲ್ಲಂಘನೆಯೂ ಆಗಿಲ್ಲ ಎಂದು ಸಂಸ್ಥೆ ಸಮರ್ಥಿಸಿಕೊಂಡಿದೆ.

ಸಂಸ್ಥೆಯ ಈ ಉತ್ಪನ್ನ ಜಾಹೀರಾತಿನಿಂದ ತಮ್ಮ ಭಾವಚಿತ್ರವನ್ನು ಹಿಂಪಡೆಯುವಂತೆ  ಜೇಮ್ಸ್ ಬಾಂಡ್ ತಾರೆ ಮಾಡಿಕೊಂಡ ಮನವಿ ಬಗ್ಗೆ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ ಎಂದು ಸ್ಪಷ್ಟಪಡಿಸಿದೆ. ಈ ಉತ್ಪನ್ನವನ್ನು ಶಿಫಾರಸ್ಸು ಮಾಡುವ ವೇಳೆ ಬ್ರೋಸ್ನನ್ ಉತ್ಪನ್ನದ ಅಂಶಗಳ ಬಗ್ಗೆ ತಿಳಿದುಕೊಂಡಿದ್ದರು ಎಂದು ಹೇಳಿಕೊಂಡಿದೆ. ಇದುವರೆಗೆ ಉತ್ಪನ್ನದಲ್ಲಿ ಯಾವ ಅಂಶಗಳು ಇವೆ ಎನ್ನುವುದನ್ನು ಕಂಪೆನಿ ಬಹಿರಂಗಪಡಿಸದ ಹಿನ್ನೆಲೆಯಲ್ಲಿ ಪ್ರಚಾರ ರಾಯಭಾರಿ ಹಾಗೂ ಉತ್ಪಾದಕ ಸಂಸ್ಥೆ ನಡುವಿನ ಜಟಾಪಟಿಗೆ ಕಾರಣವಾಗಿತ್ತು.

ಕ್ಯಾನ್ಸರ್‌ಗೆ ಕಾರಣವಾಗುವ ಈ ಉತ್ಪನ್ನದ ಪ್ರಚಾರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಬ್ರೋಸ್ನನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಪೀಪಲ್ ನಿಯತಕಾಲಿಕಕ್ಕೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಬ್ರೋಸ್ನನ್, "ಕಂಪೆನಿಯು ಎಲ್ಲ ಉತ್ಪನ್ನಗಳಿಗೆ ಅನಧಿಕೃತವಾಗಿ ನನ್ನ ಭಾವಚಿತ್ರ ಬಳಸಿಕೊಂಡಿದೆ" ಎಂದು ಹೇಳಿಕೊಂಡಿದ್ದರು. ಆದರೆ ಕಂಪೆನಿ ಇದನ್ನು ಅಲ್ಲಗಳೆದು, ಪಾನ್‌ಮಸಾಲ/ ಮೌತ್ ಫ್ರೆಶ್ನರ್‌ಗೆ ಕೂಡಾ ಅವರ ಭಾವಚಿತ್ರ ಬಳಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿತ್ತು" ಎಂದು ಕಂಪೆನಿ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News