ದಿನಕ್ಕೊಂದು ಏಕೆ, ಎರಡು ಮೊಟ್ಟೆ ತಿನ್ನಲು ಇಲ್ಲಿವೆ 6 ಕಾರಣಗಳು

Update: 2016-10-23 18:27 GMT

ಬಹಳಷ್ಟು ಮಂದಿಗೆ ಮೊಟ್ಟೆಗಳು ಕುತೂಹಲಕರ ಮತ್ತು ಹಿತಕರವಾಗಿರುವ ಸಸ್ಯಾಹಾರಿ ಮತ್ತು ಮಾಂಸಾಹಾರದ ನಡುವಿನ ಪದಾರ್ಥವಾಗಿದೆ. ಸೂಕ್ತ ಪ್ರೊಟೀನ್ ಪಡೆಯುವ ಬಗ್ಗೆ ಯೋಚಿಸುವವರು ಸಸ್ಯಾಹಾರಿಗಳಾಗಿದ್ದರೂ ಇದನ್ನು ಸೇವಿಸುತ್ತಾರೆ. ಮೊಟ್ಟೆಯಲ್ಲಿ ಪೌಷ್ಠಿಕಾಂಶಗಳು, ಲವಣಗಳು ಮತ್ತು ವಿಟಮಿನ್‌ಗಳು ಭರಪೂರ ತುಂಬಿಕೊಂಡಿರುವ ಕಾರಣ ವೈದ್ಯರು ಮತ್ತು ಆಹಾರ ತಜ್ಞರು ಇದರ ಸೇವನೆಗೆ ಹೆಚ್ಚು ಸಲಹೆ ನೀಡುತ್ತಾರೆ. ಕನಿಷ್ಠ ದಿನಕ್ಕೆ ಎರಡು ಮೊಟ್ಟೆ ತಿನ್ನಬೇಕು ಎನ್ನುತ್ತಾರೆ.

ಸುಲಭವಾಗಿ ಸಿಗುವ ಮತ್ತು ಸುಲಭವಾಗಿ ಬೇಯಿಸಬಹುದಾದ ಪ್ರೊಟೀನ್ ಶ್ರೀಮಂತ ಆಹಾರವಿದು. ವಾರಕ್ಕೆ ಆರರಿಂದ ಎಂಟು ಮೊಟ್ಟೆ ಸೇವಿಸಬೇಕು ಎನ್ನುತ್ತಾರೆ ಆಕ್ಟಿವ್ ಆರ್ತೋದ ಹಿರಿಯ ಆಹಾರ ತಜ್ಞೆ ತರನ್ಜೀತ್ ಕೌರ್. "ಮೊಟ್ಟೆ ತಿನ್ನುವಾಗ ಯೋಕ್ ಬಿಡಬಾರದು. ಅದರಲ್ಲೇ ಪೌಷ್ಠಿಕಾಂಶ ಹೆಚ್ಚಾಗಿರುತ್ತದೆ. ಮೊಟ್ಟೆಯನ್ನು ತಲೆ ಮತ್ತು ಕೂದಲಿಗೆ ಹಾಕುವುದು ಉತ್ತಮ. ಅದರ ಬಿಳಿ ರಸ ಚರ್ಮದ ಸುಕ್ಕುಗಳನ್ನು ನಿವಾರಿಸುತ್ತದೆ" ಎನ್ನುತ್ತಾರೆ ಕೌರ್. ವಿಶ್ವ ಮೊಟ್ಟೆ ದಿನವನ್ನು ಪ್ರತೀ ವರ್ಷ ಅಕ್ಟೋಬರ್‌ನ ಎರಡನೇ ಶುಕ್ರವಾರ ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 14ರಂದು ಮೊಟ್ಟೆ ದಿನ ಆಚರಿಸಲಾಗಿದೆ. ಮೊಟ್ಟೆ ತಿನ್ನಲು ಆರು ಉತ್ತಮ ಕಾರಣಗಳನ್ನು ನಾವು ಇಲ್ಲಿ ನಿಮಗೆ ಕೊಟ್ಟಿದ್ದೇವೆ.

1. ಮೊಟ್ಟೆಗಳು ಅತಿಯಾಗಿ ಪೌಷ್ಠಿಕಾಂಶ ಹೊಂದಿವೆ

 

ಪ್ರೊಟೀನ್, ವಿಟಮಿನ್ (ವಿಟಮಿನ್ ಎ,ಬಿ, ಬಿ5, ಬಿ12, ಡಿ) ಮತ್ತು ಲವಣಗಳು (ಪೊಟಾಶಿಯಂ, ಜಿಂಕ್, ಕ್ಯಾಲ್ಸಿಯಂ ಮತ್ತು ಸೆಲೆನಿಯಂ) ಇತ್ಯಾದಿಯನ್ನು ಹೊಂದಿವೆ. ಅವುಗಳು ದೇಹ ಮತ್ತು ಚಯಾಪಚಯಕ್ಕೆ ಉತ್ತಮ.

2. ಮೊಟ್ಟೆಗಳಲ್ಲಿ ಎಚ್‌ಡಿಎಲ್ ಕೊಲೆಸ್ಟರಾಲ್ ಅಂದರೆ ಉತ್ತಮ ಕೊಬ್ಬು ಹೆಚ್ಚಾಗಿದೆ 

ನಮ್ಮ ದೇಹದಲ್ಲಿ ಉತ್ತಮ ಮತ್ತು ಕೆಟ್ಟ ಕೊಬ್ಬುಗಳು ಅಥವಾ ಎಚ್‌ಡಿಎಲ್ ಮತ್ತು ಎಲ್‌ಡಿಎಲ್‌ಗಳಿರುತ್ತವೆ. ಮೊಟ್ಟೆಗಳು ಉತ್ತಮ ಕೊಬ್ಬನ್ನು ವೃದ್ಧಿಸುತ್ತವೆ. ಹೆಚ್ಚುವರಿಯಾಗಿ ಹೃದಯ ರೋಗದ ಸಾಧ್ಯತೆಯನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ.

3. ಕೊಲೈನ್ ಇರುವ ಕಾರಣ ಮೊಟ್ಟೆಗಳು ಮೆದುಳಿನ ಬೆಳವಣಿಗೆಗೆ ಉತ್ತಮ

ಕೊಲೈನ್ ಮೆದುಳಿನ ಅಭಿವೃದ್ಧಿ ಮತ್ತು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿ. ಒಂದು ಮೊಟ್ಟೆಯಲ್ಲಿ 100 ಗ್ರಾಂಗೂ ಅಧಿಕ ಕೊಲೈನ್ ಇರುತ್ತದೆ. ಇದು ಮೆದುಳನ್ನು ತೀಕ್ಷ್ಣಗೊಳಿಸಲು ನೆರವಾಗುತ್ತದೆ. ಅದೇ ಕಾರಣಕ್ಕೆ ಮಕ್ಕಳಿಗೆ ಬೆಳಗಿನ ಉಪಹಾರಕ್ಕೆ ಮೊಟ್ಟೆ ಕೊಡಬೇಕು ಎನ್ನುವುದು.

4. ಮೊಟ್ಟೆಗಳು ಆಂಟಿ ಆಕ್ಸಿಡಂಟ್ ಹೊಂದಿರುತ್ತವೆ

ಲ್ಯುಟಿನ್ ಮತ್ತು ಖೀಕ್ಸಾಂತಿನ್ ಹೆಚ್ಚಾಗಿರುವ ಕಾರಣ ಕಣ್ಣಿಗೆ ಉತ್ತಮ. ಸೋಂಕು ರೋಗಕ್ಕೆ ಇದು ತಡೆಯೊಡ್ಡುತ್ತದೆ. ವಯಸ್ಸು ಆಧಾರಿತ ರೋಗಗಳನ್ನು ಕಡಿಮೆ ಮಾಡುತ್ತದೆ. ಯೋಕ್‌ನಲ್ಲಿ ವಿಟಮಿನ್ ಎ ಹೆಚ್ಚಾಗಿರುವ ಕಾರಣ ಕುರುಡುತನ ರೋಗದ ಸಾಧ್ಯತೆ ಕಡಿಮೆ ಮಾಡುತ್ತದೆ.

5. ಮೊಟ್ಟೆಯಿಂದ ಬೇಗನೇ ಹೊಟ್ಟೆ ತುಂಬುವ ಕಾರಣ ಹೆಚ್ಚುವರಿ ಆಹಾರ ಸೇವನೆಯ ಅಗತ್ಯ ಕಾಣುವುದಿಲ್ಲ

ಉಪಾಹಾರಕ್ಕೆ ಇದು ಉತ್ತಮ. ಉಪಾಹಾರಕ್ಕೆ ಮೊಟ್ಟೆ ಸೇವಿಸಿದರೆ ಮತ್ತೆ ಆಹಾರ ಸೇವಿಸುವ ಅನಿವಾರ್ಯತೆ ಕಾಣುವುದಿಲ್ಲ. ಮಧ್ಯಾಹ್ನದ ಊಟದವರೆಗೆ ಹೊಟ್ಟೆಗೆ ಸಂಸ್ಕರಿತ ಆಹಾರದ ಅಗತ್ಯವಿರುವುದಿಲ್ಲ.

6. ಮೊಟ್ಟೆಗಳು ಉಗುರು ಮತ್ತು ಕೂದಲಿಗೆ ಉತ್ತಮ

ಸಲ್ಫರ್ ಇರುವ ಅಮಿನೋ ಆಸಿಡ್‌ಗಳು ಹಲವು ವಿಟಮಿನ್ ಮತ್ತು ಲವಣಗಳ ಜೊತೆಗೂಡಿ ಕೂದಲು ಮತ್ತು ಉಗುರುಗಳನ್ನು ಆರೋಗ್ಯವಾಗಿಡುತ್ತದೆ. ಹೀಗಾಗಿ ಉತ್ತಮ ಕೂದಲು ಮತ್ತು ಉಗುರು ಬೇಕಿದ್ದಲ್ಲಿ ಮೊಟ್ಟೆ ಸೇವಿಸಿ.

ಕೃಪೆ: http://indianexpress.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News