ಜಾಗೊ ಹುವಾ ಸವೇರಾ

Update: 2016-10-23 11:58 GMT

ದೇಶದ ಶ್ರೇಷ್ಠ ’ಜಾಗೊ ಹುವಾ ಸವೇರಾ’ ಚಲನಚಿತ್ರವನ್ನು ಮುಂಬೈ ಚಲನಚಿತ್ರೋತ್ಸವದಿಂದ ಕೈಬಿಡಲಾಗಿದೆ. ಈ ಚಿತ್ರ ಪ್ರದರ್ಶಿಸಿದರೆ ಚಿತ್ರೋತ್ಸವಕ್ಕೆ ಅಡ್ಡಿಪಡಿಸುವುದಾಗಿ ಸಂಘರ್ಷ್ ಫೌಂಡೇಷನ್ ಎಂಬ ಸ್ವಯಂಸೇವಾ ಸಂಸ್ಥೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ, ಈ ಮೊದಲು ಘೋಷಣೆ ಮಾಡಿದ್ದ ಚಿತ್ರವನ್ನು ಕೈಬಿಡಲಾಗಿದೆಯೇ?
ನನ್ನ ಪ್ರಕಾರ ಇದು ಚಿತ್ರೋತ್ಸವ ಸಮಿತಿಯ ನಿರ್ಧಾರ. ಈ ಚಿತ್ರ ಪ್ರದರ್ಶನದ ಪರವಾಗಿ ನನಗೆ ಬಂದ ಕರೆ ಹಾಗೂ ಬೆಂಬಲವನ್ನು ಗಮನಿಸಿದರೆ, ಚಿತ್ರವನ್ನು ಕೈಬಿಟ್ಟಿರುವುದು ಮುಂಬೈ ಚಿತ್ರಪ್ರೇಮಿಗಳಿಗೆ ದೊಡ್ಡ ನಷ್ಟ. ಇಂಥ ಅಪೂರ್ವ ಚಿತ್ರ ವೀಕ್ಷಿಸುವ ಅವಕಾಶದಿಂದ ವಂಚಿತರಾಗಿರುವುದು ಹಲವರ ಹತಾಶೆಗೆ ಕಾರಣವಾಗಿದೆ.
ತಂದೆ ನೂಮನ್ ತಾಸೀರ್ ನಿರ್ಮಿಸಿದ್ದ ಈ ಚಿತ್ರದ ಹೊಸ ಅವತರಣಿಕೆ ಪ್ರದರ್ಶಿಸುವ ಆಹ್ವಾನ ಬಂದಾಗ ಒಪ್ಪಿಕೊಳ್ಳಲು ಮುಖ್ಯ ಕಾರಣವೆಂದರೆ, ಅದನ್ನು ಭಾರತ ಉಪಖಂಡದ ಚಿತ್ರಕೇಂದ್ರವಾದ ಮುಂಬೈನಲ್ಲಿ ಪ್ರದರ್ಶಿಸುವುದೇ ರೋಮಾಂಚಕ ಅನುಭವ ಎನ್ನುವುದು. ಎ.ಜೆ.ಖಾದರ್ ನಿರ್ದೇಶನದ ಈ ಚಿತ್ರ 1959ರಲ್ಲಿ ತೆರೆ ಕಂಡಿತ್ತು. ಜಾಗೊ ಹುವಾ ಸವೇರಾ, ಭಾರತ ಮತ್ತು ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನದ ಅತ್ಯಪೂರ್ವ ಪ್ರತಿಭೆಗಳನ್ನು ಆಕರ್ಷಿಸಿದ ಚಿತ್ರ. ಇದು ಕಳೆದುಹೋದ, ಮರುಶೋಧವಾದ, ಪುನಶ್ಚೇತನ ಪಡೆದ ಚಿತ್ರ, ಮೂಲ ಮಾಸ್ಟರ್‌ಪೀಸ್‌ನ ಪರಿಪೂರ್ಣ ಅವತರಣಿಕೆಯಾಗಿ ಹೊಸ ಚಿತ್ರ ಮೂಡಿಬಂದಿತ್ತು.
ಜನರ ಸೂಕ್ಷ್ಮತೆಯನ್ನು ಖಂಡಿತಾ ಗೌರವಿಸಲೇಬೇಕು. ಆದರೆ, ಆದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಬಹುತ್ವಕ್ಕೆ ಅಡ್ಡಿಯಾಗಬಾರದು; ಎರಡು ದೇಶಗಳ ನಡುವಿನ ಸೂಕ್ಷ್ಮ ಸಮತೋಲನಕ್ಕೆ ತಡೆಯಾಗಬಾರದಲ್ಲವೇ? ಕೆಲವರ ಸಂಚಿಗೆ ನಾವು ಬಲಿಯಾಗಿ ಬಹುಸಂಖ್ಯಾತರ ಆಶಯಗಳಿಗೆ ವಿರುದ್ಧವಾಗಿ ವರ್ತಿಸಬಾರದಲ್ಲವೇ? ಗೌಣವಾದ ಒಂದು ಸಂಸ್ಥೆ ನೀಡಿದ ರಾಜಕೀಯ ಹಾಗೂ ಸಾಂಸ್ಕೃತಿಕ ಹೇಳಿಕೆಯನ್ನು ಯಾರೂ ನಿರ್ಲಕ್ಷಿಸುವಂತಿಲ್ಲ.
ಭವಿಷ್ಯವನ್ನು ಯೋಚಿಸಿದರೆ, ಪರಿಸ್ಥಿತಿ ಸುಧಾರಿಸುವ ಲಕ್ಷಣ ಇದೆಯೇ ಅಥವಾ ನಮ್ಮ ಹಣೆಬರಹಕ್ಕೆ ಎರಡೂ ಕಡೆಯವರು ಪರಸ್ಪರ ದೂಷಿಸಿಕೊಳ್ಳುವ ಸ್ಥಿತಿ ಮುಂದುವರಿಯುತ್ತದೆಯೇ? ಎಂಬ ಪ್ರಶ್ನೆಗೆ ಜಾಗೋ ಹುವಾ ಸವೇರಾ ಉತ್ತರಿಸುತ್ತದೆ. ಉಪಖಂಡದ ಜನ ಇಂದಿಗೂ ಬಡತನದ ದವಡೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. 1959ರಲ್ಲಿ ಇದ್ದ ಪರಿಸ್ಥಿತಿಗಿಂತ ದೊಡ್ಡ ಬದಲಾವಣೆಯೇನೂ ಆಗಿಲ್ಲ. ನಮ್ಮೆಲ್ಲರನ್ನೂ ಹಿಂದಿಕ್ಕುವ ಇಂಥ ಹುಚ್ಚಾಟವನ್ನು ಭವಿಷ್ಯದ ಪೀಳಿಗೆಯಾದರೂ ಹಿಮ್ಮೆಟ್ಟಿಸುವಂತೆ ಮಾಡುವುದು ನಮ್ಮ ಕರ್ತವ್ಯವಲ್ಲವೇ?

Writer - ಅಂಜುಂ ತಾಸೀರ್

contributor

Editor - ಅಂಜುಂ ತಾಸೀರ್

contributor

Similar News