ಹೊಸ ಜೊತೆಗಾರನ ನಿರೀಕ್ಷೆಯಲ್ಲಿ ಪೇಸ್

Update: 2016-10-27 18:19 GMT

ಪುಣೆ, ಅ.27: ಭಾರತದ ಹಿರಿಯ ಟೆನಿಸ್ ಪಟು ಲಿಯಾಂಡರ್ ಪೇಸ್ ದಾಖಲೆ 20ನೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಗುರಿ ಹಾಕಿಕೊಂಡಿದ್ದು, ಹೊಸ ಡಬಲ್ಸ್ ಜೊತೆಗಾರನ ಹುಡುಕಾಟದಲ್ಲಿದ್ದಾರೆ.

43ರ ಹರೆಯದ ಪೇಸ್ ಈ ವರ್ಷಾರಂಭದಲ್ಲಿ ಸ್ವಿಸ್ ಸ್ಟಾರ್ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಫ್ರೆಂಚ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದ್ದರು.

ನಾನು ಈ ವರ್ಷ ಗುರಿ ತಲುಪಲು ಯಶಸ್ವಿಯಾಗಿದ್ದಕ್ಕೆ ಸಂತೋಷವಾಗುತ್ತಿದೆ. ನಾನು ಕೆಲವು ವಾರ ಮಗಳೊಂದಿಗೆ ಸಮಯ ಕಳೆದಿರುವೆ. 20 ಗ್ರಾನ್‌ಸ್ಲಾಮ್ ಗೆಲ್ಲುವುದು ನನ್ನ ಮುಂದಿರುವ ಪ್ರಮುಖ ಗುರಿ ಎಂದು ರಾಮ್‌ಕುಮಾರ್ ರಾಮನಾಥನ್‌ರೊಂದಿಗೆ ಪುಣೆ ಚಾಲೆಂಜರ್‌ನಲ್ಲಿ ಮೊದಲ ಸುತ್ತಿನ ಪಂದ್ಯ ಗೆದ್ದುಕೊಂಡಿರುವ ಪೇಸ್ ಹೇಳಿದ್ದಾರೆ.

ಪೇಸ್ ಡಿಸೆಂಬರ್ 1997ರ ಬಳಿಕ ಮೊದಲ ಬಾರಿ ಭಾರತದಲ್ಲಿ ಚಾಲೆಂಜರ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ದಶಕದ ಹಿಂದೆ ಅಹ್ಮದಾಬಾದ್‌ನಲ್ಲಿ ನಿತಿನ್ ಜೊತೆಗೂಡಿ ಡಬಲ್ಸ್ ಪಂದ್ಯ ಆಡಿದ್ದರು.

ಪೇಸ್-ರಾಮ್‌ಕುಮಾರ್ ಜೋಡಿ ಪುಣೆ ಚಾಲೆಂಜರ್‌ನಲ್ಲಿ ಸಿದ್ದಾರ್ಥ್ ರಾವತ್ ಹಾಗೂ ಅನ್ವಿತ್ ಬೆಂಡ್ರೆ ಅವರನ್ನು 6-3, 6-4 ನೇರ ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ತಲುಪಿದೆ.

 ನಾನು ಮುಂದಿನ ವರ್ಷಕ್ಕೆ ಹೊಸ ಪಾರ್ಟ್ನರ್ ನಿರೀಕ್ಷೆಯಲ್ಲಿರುವೆ.ಈ ವರ್ಷ ಯಾವ ತಂಡ ಕೂಡ ಪ್ರಾಬಲ್ಯ ಸಾಧಿಸಿಲ್ಲ. ಮಿಶ್ರ ಫಲಿತಾಂಶ ದಾಖಲಾಗಿದೆ. ನಾನು 4 ವಾರ ತರಬೇತಿ ನಡೆಸಿದ್ದು, 10 ತಿಂಗಳ ಹಿಂದಿಗಿಂತ ಹೆಚ್ಚು ಫಿಟ್ ಆಗಿದ್ದೇನೆ ಎಂದು ಪೇಸ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News