ಉಪಚುನಾವಣೆ: ವೇಳಾಪಟ್ಟಿಪ್ರಕಟ
ಬೆಂಗಳೂರು, ಅ.28: ರಾಜ್ಯ ಚುನಾವಣಾ ಆಯೋಗವು ರಾಜ್ಯದ ಹಲವು ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯನ್ನು ನ.20ರಂದು (ಕೌನ್ಸಿಲರುಗಳ ಚುನಾವಣೆ)ನಡೆಸಲಿದೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರಸಭೆ-ವಾರ್ಡ್ ನಂ.18, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರಸಭೆ- ವಾರ್ಡ್ ಸಂಖ್ಯೆ 31, ಗದಗ ಜಿಲ್ಲೆಯ ಮುಳಗುಂದ ಪಟ್ಟಣ ಪಂಚಾಯತಿ ವಾರ್ಡ್ ಸಂಖ್ಯೆ-1, ಬೆಳಗಾವಿ ಜಿಲ್ಲೆಯ ಗೋಕಾಕ್ ನಗರಸಭೆ-ವಾರ್ಡ್ ಸಂಖ್ಯೆ-5.
ಬಾಗಲಕೋಟೆ ಜಿಲ್ಲೆಯ ಅಮೀನಗಡ ಪಟ್ಟಣ ಪಂಚಾಯತ್-ವಾರ್ಡ್ ಸಂಖ್ಯೆ-7, ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆ-ವಾರ್ಡ್ ಸಂಖ್ಯೆ 10, ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ ಪಂಚಾಯತ್-ವಾರ್ಡ್ ಸಂಖ್ಯೆ 4, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ನಗರಸಭೆ-ವಾರ್ಡ್ ಸಂಖ್ಯೆ 10.
ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತ್-ವಾರ್ಡ್ ಸಂಖ್ಯೆ-12 ಹಾವೇರಿ ಜಿಲ್ಲೆಯ ಹಾವೇರಿ ನಗರಸಭೆ-ವಾರ್ಡ್ ಸಂಖ್ಯೆ 4 ಹಾಗೂ ಹಾನಗಲ್ ಪುರಸಭೆ-ವಾರ್ಡ್ ಸಂಖ್ಯೆ-6 ರಲ್ಲಿ ಚುನಾವಣೆ ನಡೆಯಲಿದೆ.
ನ.2ರಂದು ಚುನಾವಣಾ ಅಧಿಸೂಚನೆ, ನ.9ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ, ನ.10ಕ್ಕೆ ನಾಮಪತ್ರ ಪರಿಶೀಲನೆ, ನ.12ಕ್ಕೆ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ, ನ.20ರಂದು ಮತದಾನ ನಡೆಯಲಿದ್ದು, ನ.23 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಅ.26 ರಿಂದ ನ.23ರವರೆಗೆ ಚುನಾವಣೆ ನಡೆಯುವ ನಗರ, ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟನೆಯಲ್ಲಿ ತಿಳಿಸಿದೆ.