ನಿಮ್ಮ ಆಯಸ್ಸು ಎಷ್ಟು ಗೊತ್ತೆ?

Update: 2016-10-29 04:21 GMT

ಕೆಲವರು ಧೀರ್ಘ ಕಾಲ ಜೀವನ ನಡೆಸಿದರೆ, ಇನ್ನು ಕೆಲವರಿಗೆ ಕಡಿಮೆ ಆಯಸ್ಸು ಇರುತ್ತದೆ. ಭಾರತದಲ್ಲಿ ಸರಾಸರಿ ಆಯಸ್ಸಿಗೆ ಹೋಲಿಸಿದರೆ ಪುರುಷರು 17 ವರ್ಷ ಹೆಚ್ಚುವರಿ ಮತ್ತು ಮಹಿಳೆಯರು 19 ವರ್ಷ ಹೆಚ್ಚುವರಿ ಆಯಸ್ಸನ್ನು ಜೀವಿಸುತ್ತಾರೆ ಎಂದು ಸ್ಯಾಂಪಲ್ ರಿಜಿಸ್ಟ್ರೇಶನ್ ಸಿಸ್ಟಂ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಜಮ್ಮು ಮತ್ತು ಕಾಶ್ಮೀರ ಮುಂದು
60 ವರ್ಷಕ್ಕೂ ಮಿಗಿಲಾದ ಆಯಸ್ಸು ಇರುವವರಲ್ಲಿ ಜಮ್ಮು ಮತ್ತು ಕಾಶ್ಮೀರ ಮುಂಚೂಣಿಯಲ್ಲಿದೆ. ಈ ರಾಜ್ಯದ ಜನರು ಸರಾಸರಿ ವಯಸ್ಸಿಗಿಂತ 21.1 ವರ್ಷ ಹೆಚ್ಚು ಕಾಲ ಬದುಕುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಛತ್ತೀಸ್‌ಗಢದ ಜನರ ಆಯಸ್ಸು ಸರಾಸರಿಗಿಂತ 15.6 ವರ್ಷಗಳು ಮಾತ್ರ ಹೆಚ್ಚಾಗಿರುತ್ತದೆ.

ಧೀರ್ಘಕಾಲಕ್ಕೆ ಕಾರಣ

ಎಲ್ಲಾ ರಾಜ್ಯಗಳುದ್ದಕ್ಕೂ ಜೀವನ ಮತ್ತು ಮರಣದ ಅವಧಿಯನ್ನು ಇತ್ತೀಚೆಗೆ ಸಂಗ್ರಹಿಸಿದ 7.4 ಮಿಲಿಯನ್ ಜನರ ಮಾಹಿತಿಯಿಂದ ತಿಳಿದುಕೊಳ್ಳಲಾಗಿದೆ. 2010- 2014ರ ನಡುವಿನ ಮಾಹಿತಿಯಲ್ಲಿ ಈ ವಿವರ ತಿಳಿದಿದೆ. 1970-75ರಲ್ಲಿ ಭಾರತದ ಜನರ ಸರಾಸರಿ ಜೀವಿತಾವಧಿ 49.7 ವರ್ಷಗಳಾಗಿದ್ದವು. 2010-14ರಲ್ಲಿ ಈ ಆಯಸ್ಸು 67.9 ವರ್ಷಗಳಿಗೆ ಅಂದರೆ 18.2 ವರ್ಷಗಳಿಗೆ ಏರಿದೆ.

ಮಹಿಳೆಯರು ಹೆಚ್ಚು ಬದುಕುತ್ತಾರೆ

ಮತ್ತೊಂದು ಬದಲಾವಣೆಯೆಂದರೆ ಮಹಿಳೆಯರು ಹೆಚ್ಚು ಕಾಲ ಬದುಕುವುದು. ನಾಲ್ಕು ದಶಕಗಳ ಹಿಂದೆ 80ರ ದಶಕಾರ್ಧದಲ್ಲಿ ಪುರುಷರ ಜೀವಿತಾವಧಿ 50.5 ವರ್ಷಗಳಿದ್ದರೆ, ಮಹಿಳೆಯರದ್ದು 49 ವರ್ಷಗಳಿದ್ದವು. ಆದರೆ ಈಗ ಅದು ಬದಲಾಗಿ ಮಹಿಳೆಯರ ಜೀವಿತಾವಧಿ 69.6ರಷ್ಟಿದ್ದು, ಪುರುಷರ ಅವಧಿಗಿಂತ ಮೂರು ವರ್ಷಗಳಷ್ಟು ಹೆಚ್ಚೇ ಇದೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಜೀವಿತಾವಧಿ ಹೊಂದಿರುವುದು ಜಾಗತಿಕವಾಗಿ ಕಂಡುಬಂದಿದೆ. ಇದಕ್ಕೆ ಆರೋಗ್ಯದ ಅಪಾಯವೇ ಮುಖ್ಯ ಕಾರಣ ಎನ್ನಲಾಗಿದೆ.

ಕೇರಳದಲ್ಲಿ ಅತ್ಯಧಿಕ ಜೀವಿತಾವಧಿ
ಕನಿಷ್ಠ ಶಿಶುಹತ್ಯೆ ಪ್ರಮಾಣ, ಅಧಿಕ ಆದಾಯ, ಅಧಿಕ ಶಿಕ್ಷಣ ಮಟ್ಟಗಳು ಮತ್ತು ಉತ್ತಮ ಆರೋಗ್ಯ ಸೂಚ್ಯಂಕಗಳಿರುವ ಕೇರಳದಲ್ಲಿ ಇತರ ಎಲ್ಲಾ ರಾಜ್ಯಗಳಿಗೆ ಹೋಲಿಸಿದಲ್ಲಿ 74.9 ವರ್ಷಗಳ ಅತ್ಯಧಿಕ ಜೀವಿತಾವಧಿ ಇದೆ.

ರಾಜ್ಯಾದ್ಯಂತ ಜೀವಿತಾವಧಿ

ದಿಲ್ಲಿ, ಜಮ್ಮು ಮತ್ತು ಕಾಶ್ಮೀರ, ಉತ್ತರಖಂಡ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಪಂಜಾಬ್‌ಗಳು ಕ್ರಮವಾಗಿ ಜೀವಿತಾವಧಿ ಹೆಚ್ಚಿರುವ ನಂತರದ ರಾಜ್ಯಗಳು. ಕಡಿಮೆ ಜೀವಿತಾವಧಿ ಇರುವ ರಾಜ್ಯವೆಂದರೆ ಅಸ್ಸಾಂ. ಅದರೊಂದಿಗೆ ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾ ಕೂಡ ಇದೆ.

ಏನು ಬದಲಾಗಿದೆ?

ಐದು ವರ್ಷಗಳ ವಯಸ್ಸಿನ ಬಳಿಕ, ಜಮ್ಮು ಮತ್ತು ಕಾಶ್ಮೀರ ಅತ್ಯಧಿಕ ಜೀವಿತಾವಧಿ ಇರುವ ರಾಜ್ಯವಾಗಿ ಕಂಡಿದೆ. ಪ್ರತೀ ಐದು ವರ್ಷಗಳ ವಯಸ್ಸಿನ ಗುಂಪುಗಳಲ್ಲಿ, 70ರ ಮೇಲಿನ ಗುಂಪು ಹೊರತಾಗಿ ಉಳಿದೆಲ್ಲದರಲ್ಲೂ ಜಮ್ಮು ಕಾಶ್ಮೀರ ಮುಂದಿದೆ.

ಜೀವಿತಾವಧಿ ಹೆಚ್ಚಾಗಲು ಕಾರಣ

ತಜ್ಞರ ಪ್ರಕಾರ ಹೆಚ್ಚು ಕಠಿಣವಲ್ಲದ ಬಡತನದ ರೇಖೆ (ಭಾರತದ ಸರಾಸರಿ ಶೇ. 30ಕ್ಕೆ ಹೋಲಿಸಿದರೆ ಶೇ. 15), ಸಮಾನ ಭೂ ಮಾಲೀಕತ್ವ ಮತ್ತು ಉತ್ತಮ ಹವಾಮಾನ ಕಾಶ್ಮೀರ ಕಣಿವೆಯ ಜನರು ಹೆಚ್ಚು ದಿನ ಬದುಕುವಂತೆ ಮಾಡಿದೆ. ಮಾಲಿನ್ಯವಿಲ್ಲದ ಪರಿಸರ ಅಧಿಕ ಜೀವಿತಾವಧಿಗೆ ಕೊಡುಗೆ ಕೊಟ್ಟಿರಬಹುದು.

ಧೀರ್ಘಾವಧಿ ಪಟ್ಟಿ
ಜಮ್ಮು ಮತ್ತು ಕಾಶ್ಮೀರದ ಸರಾಸರಿ ಜೀವಿತಾವಧಿ ಹುಟ್ಟಿನಲ್ಲಿ (72.6) ಮತ್ತು 60ನೇ ವಯಸ್ಸಿನಲ್ಲಿ (81.1) ವ್ಯತ್ಯಾಸವಿರುವುದು ಏಕೆ? ಅಧಿಕ ಹಸುಗೂಸಿನ ಮರಣದ ದರ ಇದಕ್ಕೆ ಕಾರಣ. ಪ್ರಸವ ವ್ಯವಸ್ಥೆ ಮತ್ತು ಆರೋಗ್ಯ ಸೇವೆ ವ್ಯವಸ್ಥೆಯೂ ಇದಕ್ಕೆ ಕೊಡುಗೆ ನೀಡಿದೆ. 2013ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮರಣ ದರವು 1000 ಮಕ್ಕಳಿಗೆ ಶೇ. 37ರಷ್ಟಿತ್ತು. ಇದೇ ಜಾರ್ಖಂಡ್‌ಗೂ ಅನ್ವಯಿಸುತ್ತದೆ. ಜಾರ್ಖಂಡ್ ರಾಷ್ಟೀಯ ಸರಾಸರಿಗೆ ಸ್ವಲ್ಪ ಕಡಿಮೆ ಶೇ.40ರಷ್ಟಿದೆ.

ಕೃಪೆ: economictimes.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News