ಆಬ್ಸ್ ವ್ಯಾಯಾಮ ಮಾಡದೆಯೇ ಹೊಟ್ಟೆ ಬೊಜ್ಜು ಕರಗಿಸಲು ಸಾಧ್ಯ !
ನಾವೆಲ್ಲರೂ ಉತ್ತಮವಾದ ಮೈಕಟ್ಟು ಹೊಂದಿರಬೇಕು ಎಂದೇ ಬಯಸುತ್ತೇವೆ. ಯಾರಿಗೂ ಹೊಟ್ಟೆಯಲ್ಲಿ ಬೊಜ್ಜು ತುಂಬಿಕೊಂಡು ನಡೆದಾಡುವುದು ಇಷ್ಟವಾಗುವುದಿಲ್ಲ. ಹಾಗಿದ್ದರೆ ಹೊಟ್ಟೆಯ ಬೊಜ್ಜನ್ನು ಕರಗಿಸಲು ಏನು ಮಾಡಬೇಕು? ಇಲ್ಲಿದೆ ಕೆಲವು ವಿಧಾನಗಳು.
ಭಾರ ಎತ್ತಿ
ಭಾರ ಎತ್ತುವ ತರಬೇತಿ ಪಡೆಯುವುದು ಅತ್ಯುತ್ತಮ. ಮಧ್ಯಭಾಗದಲ್ಲಿ ದೇಹದ ಕೊಬ್ಬನ್ನು ಬದಲಿಸುವುದು ಲಾಭಕರ. ರೆಸಿಸ್ಟನ್ಸ್ ಟ್ರೈನಿಂಗ್ ವ್ಯಾಯಾಮ ಮೂಳೆಗಳನ್ನು ಬೆಳೆಸುತ್ತದೆ. ಇದು ಚಯಾಪಚಯ ದರವನ್ನು ಏರಿಸುತ್ತದೆ. ಹೀಗಾಗಿ ದಿನವಿಡೀ ಕ್ಯಾಲರಿಗಳನ್ನು ಕರಗಿಸಬಹುದು. ನಿಮಗೆ ಎಷ್ಟು ಬಿಗಿಯಾದ ಸ್ನಾಯುಗಳು ಇವೆಯೋ ಕೊಬ್ಬು ಅಷ್ಟೇ ಕಡಿಮೆಯಾಗುತ್ತದೆ. ರೆಸಿಸ್ಟನ್ಸ್ ಟ್ರೈನಿಂಗ್ ವ್ಯಾಯಾಮ ಮಾಡುವುದು ಜಿಮ್‌ನಲ್ಲಿ ಭಾರವಾದ ಸಾಧನಗಳನ್ನು ಎತ್ತುವುದಕ್ಕೇ ಸೀಮಿತವಾಗಿರುವುದಿಲ್ಲ. ಅದು ನಿಮ್ಮದೇ ದೇಹವನ್ನು ಸುಧಾರಿಸಬಹುದು. ಕೆಟಲ್ ಬೆಲ್ಸ್ ಮತ್ತು ರೆಸಿಸ್ಟನ್ಸ್ ಬ್ಯಾಂಡ್ಸ್‌ಗಳನ್ನು ಕೊಂಡೊಯ್ಯಲು ಸುಲಭ. ಇದು ಹೊರಾಂಗಣದಲ್ಲಿಯೂ ನಿಮಗೆ ತರಬೇತಿ ಪಡೆಯಲು ನೆರವಾಗುತ್ತದೆ. ನೀವು ವಾರಕ್ಕೆ ಎರಡು- ಮೂರು ಬಾರಿ 30 ನಿಮಿಷಗಳ ಕಾಲ ತೂಕ ಎತ್ತುವುದನ್ನು ಮಾಡಬೇಕು. ಇಷ್ಟರಲ್ಲೇ ಲಾಭ ಸಿಗಲಿದೆ.
ನಿಮ್ಮ ಭಂಗಿ ಸುಧಾರಿಸಿ
ಉತ್ತಮ ವ್ಯಾಯಾಮದ ಭಂಗಿ ದೈಹಿಕವಾಗಿ ಆಕರ್ಷಕವಾಗಿರುವುದು ಮಾತ್ರವಲ್ಲ ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಲೂ ನೆರವಾಗುತ್ತದೆ. ಸಾಮಾನ್ಯವಾಗಿ ಹೊಟ್ಟೆಗೆ ಪ್ರತ್ಯೇಕವಾದ ವ್ಯಾಯಾಮಗಳಿರುತ್ತವೆ. ನೀವು ಇವುಗಳನ್ನು ಮಾಡುತ್ತಲೇ ಬದಲಾವಣೆ ಕಾಣಬಹುದು. ನೇರವಾಗಿ ನಿಲ್ಲುವುದು ತಕ್ಷಣವೇ ಕೆಲವು ಪೌಂಡ್‌ಗಳನ್ನು ಇಳಿಸಬಹುದು. ಹೀಗೆ ಕುಳಿತು ಮಾಡಿದ ವ್ಯಾಯಾಮದ ನಂತರ ನೇರ ನಿಲ್ಲುವಂತಹ ಭಂಗಿಗಳು ತಕ್ಷಣದಲ್ಲಿ ಹೆಚ್ಚು ಆಕರ್ಷಕ ಮೈಕಟ್ಟು ಕೊಡಲಿದೆ. ವಾರಕ್ಕೆ ಎರಡು ಮೂರು ಬಾರಿ ಫೋಮ್ ರೋಮ್ ಮತ್ತು ಸ್ಟ್ರೆಚ್ ಮಾಡಬೇಕು. ಇದು ದೇಹದ ಮುಂಭಾಗದ ಮೇಲಿನ ಬಿಗಿತ ಮತ್ತು ಘರ್ಷಣೆ ಕಡಿಮೆ ಮಾಡುತ್ತದೆ. ಇದರಲ್ಲಿ ಎದೆ, ಭುಜಭಾಗ, ಮೇಲಿನ ಎದೆ ಮತ್ತು ಸೊಂಟದ ಸ್ನಾಯುಗಳೂ ಸೇರಿರುತ್ತವೆ. ಸ್ನಾಯುಗಳು ಮತ್ತು ಪೋಸ್ಟರಿಯರ್ ಚೈನ್ ಒಳಗೊಂಡಿರುವ ವ್ಯಾಯಾಮವನ್ನು ಹೆಚ್ಚು ಮಾಡಬೇಕು. ಇವುಗಳಲ್ಲಿ ಬೆನ್ನು, ಗ್ಲೂಟ್ಸ್ ಮತ್ತು ಮಂಡಿರಜ್ಜು ವ್ಯಾಯಾಮ ಮಾಡಬೇಕು.
ಒತ್ತಡ ಕಡಿಮೆ
ನೀವು ಚಿಂತೆಯಲ್ಲಿದ್ದಾಗ ವ್ಯಾಯಾಮ ಮಾಡಲು ಇಳಿದರೆ ನಿಮ್ಮ ದೇಹವು ಒತ್ತಡದ ಹಾರ್ಮೋನ್‌ಗಳು ಮತ್ತು ಸ್ಟಿರಾಯ್ಡಿಗಳನ್ನು ಹೊರ ಸೂಸುತ್ತದೆ. ಇದು ನೇರವಾಗಿ ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಉಬ್ಬುವಿಕೆ ಮತ್ತು ಮಲಬದ್ಧತೆಯಾಗಬಹುದು. ಒತ್ತಡ ಹಾಕಿದ ದೇಹ ಮತ್ತು ಮನಸ್ಸು ಕೊರ್ಟಿಸಾಲ್ ಎನ್ನುವ ಹಾರ್ಮೋನ್ ಹೆಚ್ಚಾಗಿ ಬಿಡುಗಡೆ ಮಾಡುತ್ತದೆ. ಇದು ದೇಹದಲ್ಲಿ ಕೊಬ್ಬಿನ ಪದರಕ್ಕೆ ಕಾರಣವಾಗುತ್ತದೆ. ಸೊಂಟದ ಮೇಲೆ ಕೊಬ್ಬು ತುಂಬಿ ಕೆಲವು ಪ್ರಮುಖ ಅಂಗಗಳ ರಕ್ಷಣೆಗೆ ಪರಯತ್ನಿಸುತ್ತದೆ. ನಿಮಗೆ ಸಾಕಷ್ಟು ಸಮಯವಿರಲಿ. ಪ್ರತೀ ದಿನ ಉಲ್ಲಾಸದಿಂದ ವ್ಯಾಯಾಮಕ್ಕೆ ಇಳಿಯಿರಿ. ಸಂಜೆ ಯೋಗ ತರಗತಿಗಳಿಗೆ ಹೋಗಿ. ಸಾಕಷ್ಟು ನಿದ್ರೆ ಮಾಡಿ. ಶಾಂತಿ ಕೊಡುವಂತಹ ಸಂಗೀತ ಕೇಳಿ. ಆಳವಾದ ಉಸಿರುಬಿಟ್ಟು ರಿಲ್ಯಾಕ್ಸ್ ಆಗಿ.
ಕೃಪೆ:english.alarabiya.net