ಬೆಂಗಳೂರು: ‘ವಿಕ್ಟರಿ ನೀಟ್ ಅಕಾಡೆಮಿ’ಗೆ ದೇವೇಗೌಡ ಚಾಲನೆ

Update: 2016-10-30 06:14 GMT

ಬೆಂಗಳೂರು, ಅ.30: ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್)ಗಳಿಗೆ ತರಬೇತಿ ನೀಡುವ ‘ವಿಕ್ಟರಿ ನೀಟ್’ ಅಕಾಡಮಿಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶನಿವಾರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಮಾಹಿತಿ ಪುಸ್ತಕವನ್ನು ಬಿಡುಗಡೆಗೊಳಿಸಿ, ವೆಬ್ ಸೈಟ್ ನ್ನು ಅನಾವರಣಗೊಳಿಸಿದ ಮಾಜಿ ಪ್ರಧಾನಿ, ಸಂಸ್ಥೆಗೆ ಶುಭಹಾರೈಸಿದರು. 

ಈ ಸಂದರ್ಭದಲ್ಲಿ ಸಚಿವರಾದ ಯು.ಟಿ ಖಾದರ್, ಶಾಸಕ ಬಿ.ಎ. ಮೊಯ್ದಿನ್ ಬಾವ, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷ ಬಿ.ಎಂ. ಫಾರೂಕ್, ಮಾಜಿ ಸಚಿವ ಬಿ.ಎ. ಮೊಹಿದಿನ್  ಹಾಗೂ ವಿಕ್ಟರಿ ಮೀಟ್ ಅಕಾಡಮಿಯ ಅಧ್ಯಕ್ಷ ಅಬ್ದುಲ್ ಗಫಾರ್ ಕೊಪ್ಪ ಉಪಸ್ಥಿತರಿದ್ದರು.

ಶೀಘ್ರವೇ ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ  ದುಬೈಯಲ್ಲಿ ಅಕಾಡಮಿಯ ಸುಸಜ್ಜಿತ ಕಚೇರಿಯನ್ನು ಪ್ರಾರಂಭಿಸಲಾಗುವುದು ಎಂದು ಅಬ್ದುಲ್ ಗಫಾರ್ ಅವರು ಈ ಸಂದರ್ಭ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News