ಸೂ ಕಿ ಶಾಂತಿ ನೊಬೆಲ್ ಹಿಂಪಡೆಯಲು ಆಗ್ರಹಿಸಿ ಅಭಿಯಾನಕ್ಕೆ ಭಾರೀ ಬೆಂಬಲ

Update: 2016-10-31 12:08 GMT

ನೀವೂ ಸಹಿ ಮಾಡಬಹುದು
ಜಕಾರ್ತಾ, ಅ.31: "ನನ್ನನ್ನು ಮುಸ್ಲಿಂ ವ್ಯಕ್ತಿ ಸಂದರ್ಶಿಸುತ್ತಿದ್ದಾರೆ ಎಂದು ಯಾರೂ ಹೇಳಿಲ್ಲ"
ಬಿಬಿಸಿ ಟುಡೇ ನಿರೂಪಕರಾದ ಮಿಷಾಲ್ ಹುಸೈನ್ 2013ರಲ್ಲಿ ಆಂಗ್ ಸನ್ ಸೂ ಕಿ ಅವರ ಸಂದರ್ಶನ ನಡೆಸಿದ ಬಳಿಕ ಸೂಕಿ ಈ ಮಾತು ಹೇಳಿದ್ದರು.

ಮ್ಯಾನ್ಮಾರ್‌ನಲ್ಲಿ ಮುಸ್ಲಿಮರು ಎದುರಿಸುತ್ತಿದ್ದ ಸಂಕಷ್ಟಗಳ ಬಗ್ಗೆ ಸಂದರ್ಶಕರು ಕೇಳಿದ್ದ ಪ್ರಶ್ನೆಯಿಂದ ಹತಾಶರಾದ ಸೂಕಿ ಹೀಗೆ ಹೇಳಿದ್ದರು. ಮುಸ್ಲಿಂ ವಿರೋಧಿಗಳನ್ನು ಖಂಡಿಸುವಂತೆಯೂ ಸೂಕಿ ಅವರನ್ನು ಆಗ್ರಹಿಸಲಾಗಿತ್ತು.
2012ರ ಶಾಂತಿ ನೊಬೆಲ್ ಪಡೆದ ಸೂಕಿ ಅವರ ಇಂಥ ಹೇಳಿಕೆ ಹಲವರಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಇದು ಜನಾಂಗೀಯವಾಗಿ ಭಾವಸೂಕ್ಷ್ಮತೆ ಇಲ್ಲದ ಹೇಳಿಕೆ ಎಂಬ ಟೀಕೆಗೂ ಗುರಿಯಾಗಿತ್ತು. ಮ್ಯಾನ್ಮಾರ್‌ನಲ್ಲಿ ವಾಸಿಸುವ 1.4 ಲಕ್ಷ ಮಂದಿ ರೋಹಿಂಗ್ಯಾ ಮುಸ್ಲಿಮರ ಬಗೆಗಿನ ಅವರ ಧೋರಣೆ ಬಗ್ಗೆ ಆಕ್ರೋಶವೂ ವ್ಯಕ್ತವಾಗಿತ್ತು. ಇದೀಗ ಆ ಆಕ್ರೋಶ ಭುಗಿಲೆದ್ದಿದೆ.
ರೋಹಿಂಗ್ಯಾ ಮುಸ್ಲಿಮರ ಹಿತಾಸಕ್ತಿ ಕಾಪಾಡಲು ವಿಫಲರಾದ ಸೂಕಿ ಅವರಿಗೆ ನೀಡಿದ್ದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವಾಪಾಸು ಪಡೆಯಬೇಕು ಎಂದು ಆಗ್ರಹಿಸಿ ದೊಡ್ಡ ಸಹಿ ಚಳವಳಿ ರೂಪುಗೊಂಡಿದೆ. ನಿಜವಾಗಿಯೂ ವಿಶ್ವಶಾಂತಿಯಲ್ಲಿ ಕಳಕಳಿ ಇರುವವರಿಗಷ್ಟೇ ಈ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿ ನೊಬೆಲ್ ಸಮಿತಿಗೆ ಮನವಿಪತ್ರವೂ ಸಲ್ಲಿಕೆಯಾಗಿದೆ.

ಪ್ರಜಾಪ್ರಭುತ್ವ ಮೌಲ್ಯಗಳ ಸಂರಕ್ಷಕಿ ಎನಿಸಿಕೊಂಡಿರುವ ನಿಮಗೆ ನಂಬಿಕೆಯಲ್ಲಿನ ಭಿನ್ನತೆಯನ್ನು ಗೌರವಿಸುವುದು ಪ್ರಜಾಸತ್ತಾತ್ಮಕ ಮೌಲ್ಯವಲ್ಲವೇ? ಮುಸ್ಲಿಮರು ಮಾಡಿರುವ ತಪ್ಪಾದರೂ ಏನು? ಮತ್ತೊಂದು ಜನಾಂಗದ ಬಗ್ಗೆ ತಾರತಮ್ಯ ಎಸಗುವುದು ಸರಿಯೇ? ಎಂದು ಚಳವಳಿಗಾರರು ಖಾರವಾಗಿ ಪ್ರಶ್ನಿಸಿದ್ದಾರೆ. ಈ ಮನವಿಪತ್ರಕ್ಕೆ ನೂರಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಶ್ವಶಾಂತಿಯಲ್ಲಿ ನಂಬಿಕೆ ಇರುವ ಎಲ್ಲರೂ ಇದಕ್ಕೆ ಸಹಿ ಮಾಡಬಹುದಾಗಿದೆ.

https://www.change.org/p/take-back-aung-san-suu-kyi-s-nobel-peace-prize

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News