ಪಟೇಲರನ್ನುಮರೆತ ಕಾಂಗ್ರೆಸ್ಸಿಗರು: ಬಿಎಸ್‌ವೈಆಕ್ರೋಶ
ಬೆಂಗಳೂರು,ಅ.31: ಸ್ವಾತಂತ್ರ ನಂತರ ದೇಶವನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಕಾಂಗ್ರೆಸ್ಸಿಗರು ಮರೆತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಭಾರತದ ಪ್ರಥಮ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯ ಅಂಗವಾಗಿ ರಾಜ್ಯ ಬಿಜೆಪಿ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರ ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವಂತೆ ಮಹಾತ್ಮ ಗಾಂಧೀಜಿಯವರು ಸಲಹೆ ನೀಡಿದ್ದರು. ಆಗ ಕಾಂಗ್ರೆಸ್ಸಿಗರು ಅವರ ಮಾತನ್ನು ಕೇಳಲಿಲ್ಲ. ಅದರ ಪರಿಣಾಮ ಈಗ ದೇಶದಲ್ಲಿ ಜನತೆಯೇ ಕಾಂಗ್ರೆಸ್ಸನ್ನು ವಿಸರ್ಜಿಸುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಎಂದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶದ ಪ್ರಧಾನಿ ಆಗಿದ್ದರೆ ಕಾಶ್ಮೀರ ಸಮಸ್ಯೆ ಇರುತ್ತಿರಲಿಲ್ಲ. ಗಾಂಧೀಜಿ- ಅಂಬೇಡ್ಕರ್‌ರಿಂದ ದೇಶವನ್ನು ಕಟ್ಟಿದ್ದ ಪಟೇಲ್‌ರನ್ನು ಇಂದು ಕಾಂಗ್ರೆಸ್ಸಿಗರು ಸ್ಮರಿಸುತ್ತಿಲ್ಲ. ಕೇವಲ ನೆಹರೂ, ಗಾಂಧಿ ಕುಟುಂಬವನ್ನು ನೆನೆಯುತ್ತಿದ್ದಾರೆ ಎಂದರು ವಾಗ್ದಾಳಿ ನಡೆಸಿದರು.ೇಂದ್ರ ರಸಗೊಬ್ಬರ ಸಚಿವ ಅನಂತ ಕುಮಾರ್ ಮಾತನಾಡಿ, ದೇಶದ ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿದವರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪ್ರಮುಖ ರಾಗಿ ನಿಲ್ಲುತ್ತಾರೆ. ಭಾರತದಲ್ಲಿ ಬ್ರಿಟಿಷರು ದೋಚಿಹೋಗುತ್ತಿದ್ದ ಅರಸೊತ್ತಿಗೆಯನ್ನು ತಡೆದು ಪಟೇಲರು ಉಕ್ಕಿನ ಮನುಷ್ಯ ಎಂದೆನಿಸಿದರು ಎಂದು ತಿಳಿಸಿದರು.ೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಈ ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ನಾಗರಿಕ ಸಂಹಿತೆ ಅಗತ್ಯವಿದೆ.ದೇಶದ ಅಖಂಡತೆಯಲ್ಲಿ ಪ್ರತ್ಯೇಕತೆಗೆ ಅವಕಾಶ ನೀಡಬಾರದು. ಇದು ಸಂವಿಧಾನದ ಆಶಯವೂ ಹೌದು ಎಂದರು.
ಶಾಸಕ ನಾರಾಯಣ ಸ್ವಾಮಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಅಬ್ದುಲ್ ಅಝೀಂ, ಅಂಬೇಡ್ಕರ್ ಪ್ರಚಾರ ಸಮಿತಿಯ ಅಧ್ಯಕ್ಷ ಚಿ.ನಾ.ರಾಮು ಉಪಸ್ಥಿತರಿದ್ದರು.