ಗುಂಡಿಕ್ಕಿಉದ್ಯಮಿಯ ಕೊಲೆ
ಬೆಂಗಳೂರು, ಅ.31: ದೀಪಾವಳಿ ಸಂಭ್ರಮಾಚರಣೆಯ ಪಟಾಕಿ ಸದ್ದಿನ ಜೊತೆಯೇ ಗುಂಡಿನ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಹತ್ಯೆಗೈದಿರುವ ದುರ್ಘಟನೆ ಇಲ್ಲಿನ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.
ಮೃತರನ್ನು ಸಂಜಯನಗರದ ಹನುಮಂತಯ್ಯ ಕಾಲನಿಯ ನಿವಾಸಿ ಸುರೇಂದ್ರ(55) ಎಂದು ಗುರುತಿಸಲಾಗಿದೆ.
ರವಿವಾರ ರಾತ್ರಿ 9:30ರ ಸುಮಾರಿಗೆ ಮನೆಗೆ ಹೋಗಲು ಕಾರಿನಿಂದ ಹೊರಬರುತ್ತಿದ್ದ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಏಕಾಏಕಿ ಆರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಬೆನ್ನು, ಕುತ್ತಿಗೆ ಇನ್ನಿತರ ದೇಹದ ಭಾಗಗಳಿಗೆ ಗುಂಡು ತಗುಲಿ ತೀವ್ರ ಗಾಯಗೊಂಡು ಸುರೇಂದ್ರ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ.ನ್ನು ದೀಪಾವಳಿ ಸಂಭ್ರಮಾಚರಣೆಯಲ್ಲಿ ಪಟಾಕಿ ಶಬ್ದದ ನಡುವೆ ಗುಂಡು ಹಾರಿಸಿದ ಶಬ್ದವನ್ನು ಯಾರೂ ಗಂಭೀರವಾಗಿ ನೋಡಲಿಲ್ಲ. ಕೆಲ ಸಮಯದ ನಂತರ ಸ್ಥಳೀಯರು ಗಮನಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುರೇಂದ್ರ ಅವರನ್ನು ಸ್ಥಳೀಯ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದರಾದರೂ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಂಧ್ರಪ್ರದೇಶ ಮೂಲದ ಸುರೇಂದ್ರ ಅವರು ಕಳೆದ ಹನ್ನೊಂದು ವರ್ಷಗಳಿಂದ ಸಂಜಯನಗರದಲ್ಲಿ ವಾಸಿಸುತ್ತಿದ್ದರು. ಮೊದಲು ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿದ್ದ ಅವರು ನಂತರ ರಿಯಲ್ಎಸ್ಟೇಟ್ ಉದ್ಯಮದ ಜೊತೆಗೆ ನೀರಿನ ಟ್ಯಾಂಕರ್ ಇಟ್ಟುಕೊಂಡು ಅದರ ವ್ಯಾಪಾರ ಹಾಗೂ ಆರ್‌ಟಿ ನಗರದಲ್ಲಿ ಮರ್ಚೂರಿ ಫೈನಾನ್ಸ್ ಕಚೇರಿ ನಡೆಸುತ್ತಿದ್ದರು.ವಿವಾಹಿತರಾಗಿದ್ದ ಸುರೇಂದ್ರ ಕಳೆದ 5 ತಿಂಗಳಿಂದ ಆರ್‌ಟಿ ನಗರದಿಂದ ಹನುಮಂತಯ್ಯ ಕಾಲನಿಯ 13 ನೆ ಕ್ರಾಸ್‌ನ ಸುರಪುರ ಅಪಾರ್ಟ್‌ಮೆಂಟ್ ಬಳಿ ಮನೆ ನಿರ್ಮಿಸಿ ವಾಸ್ತವ್ಯ ಬದಲಿಸಿದ್ದರು ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.
ಸುರೇಂದ್ರ ವಿರುದ್ಧ 14 ಮೊಕದ್ದಮೆ: ಸುರೇಂದ್ರ ಕೆಲ ತಿಂಗಳ ಹಿಂದೆ ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನೇಜರ್‌ರೊಬ್ಬರನ್ನು ಕೆಲಸದಿಂದ ತೆಗೆದು ಹಾಕಿದ್ದರು. ಹೀಗಾಗಿ ದ್ವೇಷದಿಂದ ಸುರೇಂದ್ರ ಅವರ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ವಂಚನೆ, ಚೆಕ್‌ಬೌನ್ಸ್ ಸೇರಿದಂತೆ 14 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅವರ ವಿರುದ್ಧ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ 14 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.