×
Ad

ರಾಜ್ಯವಿರೋ ಕೃತ್ಯ: ಡಿಸಿ ಜಯರಾಮ್

Update: 2016-11-01 23:47 IST

ಬೆಂಗಳೂರು/ಬೆಳಗಾವಿ, ನ.1: ಎಂಇಎಸ್ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಭಾಗಿಯಾಗಿದ್ದು, ರಾಜ್ಯ ವಿರೋ ಕೃತ್ಯ ಎಂದು ಬೆಳಗಾವಿ ಜಿಲ್ಲಾಕಾರಿ ಎನ್.ಜಯರಾಮ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಯ ತೆರಿಗೆ ಹಣದಿಂದ ಎಲ್ಲ ರೀತಿಯ ಸವಲತ್ತುಗಳನ್ನು ಪಡೆದು, ರಾಜ್ಯ ವಿರೋ ಚಟುವಟಿಕೆಯಲ್ಲಿ ಭಾಗಿಯಾಗುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.ಘಿಚ್ಟ2013, 2014, 2015ರಲ್ಲಿ ಪಾಲಿಕೆಯ ಸದಸ್ಯತ್ವ ಹೊಂದಿರುವ ಯಾರೊಬ್ಬರೂ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ, ಈಗ ಮತ್ತೆ ಭಾಗವಹಿಸಿರುವುದು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದೆ. ರಾಜ್ಯ ವಿರೋ ಚಟುವಟಿಕೆ ಕುರಿತು ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಅವರು ಹೇಳಿದರು.
ರಾಜ್ಯೋತ್ಸವದ ಅಂಗವಾಗಿ ಖಾನಾಪುರ ತಾಲೂಕಿನಲ್ಲಿ ಧ್ವಜಾರೋಹಣ ಮಾಡಬೇಕಿದ್ದ ಪಕ್ಷೇತರ ಶಾಸಕ ಅರವಿಂದ ಪಾಟೀಲ್, ಗೈರು ಹಾಜರಿಯಿಂದಾಗಿ ತಹಶೀಲ್ದಾರ್ ಶಿವಾನಂದ್ ಉಳ್ಳಾಗಡ್ಡಿ ಧ್ವಜಾರೋಹಣ ನೆರವೇರಿಸಿದರು. ಆದರೆ, ಎಂಇಎಸ್ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಅರವಿಂದ ಪಾಟೀಲ್ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News