ಎನ್‌ಡಿಟಿವಿ ಪ್ರಸಾರ ನಿಷೇಧದ ವಿರುದ್ಧ ಸಿಡಿದೆದ್ದ ಪತ್ರಕರ್ತರು
Update: 2016-11-05 13:27 IST
ಬೆಂಗಳೂರು, ನ.5: ಎನ್‌ಡಿಟಿವಿಯನ್ನು ಒಂದು ದಿನದ ಮಟ್ಟಿಗೆ ನಿಷೇಧ ಹೇರಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯಲು ಹೊರಟ ಕೇಂದ್ರ ಸರಕಾರದ ನಿಲುವನ್ನು ಖಂಡಿಸಿ ಪ್ರೆಸ್‌ಕ್ಲಬ್ ಮತ್ತು ಜರ್ನಲಿಸ್ಟ್ ಸ್ಟಡಿ ಸೆಂಟರ್ ವತಿಯಿಂದ ಬೆಂಗಳೂರಿನ ಪ್ರೆಸ್‌ಕ್ಲಬ್ ಆವರಣದಲ್ಲಿಂದು ಪ್ರತಿಭಟನೆ ನಡೆಯಿತು.
ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಕೇಂದ್ರ ಸರಕಾರದ ಕ್ರಮವನ್ನು ಪ್ರತಿಭಟನಾಕಾರರು ಖಂಡಿಸಿದರು.