ಸೌಹಾರ್ದ ಕದಡಲು ಬಿಜೆಪಿ ಯತ್ನ: ಸಿಎಂ
Update: 2016-11-05 23:56 IST
ಬೆಂಗಳೂರು, ನ.5: ಆರೆಸೆಸ್ಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಸಚಿವ ರೋಷನ್ ಬೇಗ್ ಕೈವಾಡವಿದೆ ಎಂಬ ಬಿಜೆಪಿ ಆರೋಪ ಶುದ್ಧ ಸುಳ್ಳು. ಸಮಾಜದಲ್ಲಿ- ಸೌಹಾರ್ದವನ್ನು ಹದಗೆಡಿಸಲು ಬಿಜೆಪಿ ವಿಲ ಯತ್ನ ನಡೆಸಿದೆ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ತನ್ನ ವೈಯಕ್ತಿಕ ರಾಜಕೀಯಕ್ಕಾಗಿ ಸಮಾಜದ ಸ್ವಾಸ್ಥ ಕೆಡಿಸಲು ಪ್ರಯತ್ನಿಸುತ್ತಿದೆ. ಸುಳ್ಳು ಆರೋಪ ಮಾಡುವುದು, ಕೋಮು ಭಾವನೆ ಕೆರಳಿಸಿ ಸಂಘರ್ಷ ಸೃಷ್ಟಿಸುವುದೇ ಬಿಜೆಪಿಯವರ ಹವ್ಯಾಸ ಎಂದು ಟೀಕಿಸಿದರು.
ಸಚಿವ ರೋಷನ್ ಬೇಗ್ ಅವರ ಮೇಲೆ ಸಂಸದೆ ಶೋಭಾ ಕರಂದ್ಲಾಜೆ ಮಾಡಿರುವ ಆರೋಪ ಆಧಾರ ರಹಿತ. ಕೇವಲ ರಾಜಕೀಯಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಕಪೋಲಕಲ್ಪಿತ ಹೇಳಿಕೆಗಳನ್ನು ಯಾರೂ ಕೂಡ ನೀಡಬಾರದು ಎಂದು ಸಿದ್ದರಾಮಯ್ಯ ಇದೇ ವೇಳೆ ತಾಕೀತು ಮಾಡಿದರು.