ರುದ್ರೇಶ್ ಕೊಲೆ ಪ್ರಕರಣಶೋಭಾ ಕರಂದ್ಲಾಜೆಯ ವಿಚಾರಣೆ ನಡೆಸಿ ದಿನೇಶ್‌ಗುಂಡೂರಾವ್ ಒತ್ತಾಯ
ಬೆಂಗಳೂರು, ನ. 7: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಸಂಬಂಧ, ಮಾಹಿತಿ ಮತ್ತು ಸಾಕ್ಷ್ಯಗಳು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಬಳಿ ಇರುವುದರಿಂದ ಪೊಲೀಸರು ಈ ಕೂಡಲೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಒತ್ತಾಯಿಸಿದ್ದಾರೆ.
ಸೋಮವಾರ ನಗರದ ವೌರ್ಯ ವೃತ್ತದ ಬಳಿಯ ಗಾಂ ಪ್ರತಿಮೆ ಎದುರು ಬೆಂಗಳೂರು ಮಹಾನಗರ ಕಾಂಗ್ರೆಸ್ ವತಿಯಿಂದ ಇತ್ತೀಚಿಗೆ ನಡೆದ ರುದ್ರೇಶ್ ಕೊಲೆ ಪ್ರಕರಣದಲ್ಲಿ ಸಚಿವ ರೋಷನ್ ಬೇಗ್ ಕೈವಾಡವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.ರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಸಂಬಂಧ, ಮಾಹಿತಿ ಮತ್ತು ಸಾಕ್ಷ್ಯಗಳು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಬಳಿ ಇರುವುದರಿಂದ ಪೊಲೀಸರು ಈ ಕೂಡಲೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು. ಅಲ್ಲದೆ, ಸಂಸತ್ ಸದಸ್ಯರಾಗಿ ಇಂತಹ ಮಾಹಿತಿಗಳನ್ನು ಅಡಗಿಸಿಡುವುದು ಅಪರಾಧವಾಗುತ್ತದೆ ಎಂದರು.
ಬಿಜೆಪಿಯವರಿಗೆ ಅಲ್ಪಸಂಖ್ಯಾತರು ಸಚಿವರಾಗಿರುವುದನ್ನು ಸಹಿ ಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಕೆ.ಜೆ.ಜಾರ್ಜ್ ಅವರ ವಿರುದ್ಧ ನಿರಂತರವಾಗಿ ಸುಳ್ಳು ಆರೋಪ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದರು. ಇದೀಗ ರೋಷನ್ ಬೇಗ್‌ಅವರನ್ನು ಗುರಿಯಾಗಿಟ್ಟುಕೊಂಡು ಸಂಚು ರೂಪಿಸುತ್ತಿದ್ದಾರೆ, ಬಿಜೆಪಿಯವರಿಗೆ ನೈತಿಕತೆ ಮತ್ತು ಕಾನೂನಿನ ಬಗ್ಗೆ ಗೌರವ ಇದ್ದರೆ, ಶೋಭಾ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅವರಲ್ಲಿರುವ ಮಾಹಿತಿ ಯನ್ನು ಬಹಿರಂಗಪಡಿಸಬೇಕು ಎಂದರು. ಪೊಲೀಸ್ ಇಲಾಖೆ ಮೇಲೆ ಯಾರ ಒತ್ತಡವು ಇಲ್ಲ. ಅಲ್ಲದೆ, ಇಲಾಖೆಯೂ ಉತ್ತಮವಾಗಿ ಕಾರ್ಯನಿರ್ವಹಿಸಿ ರುದ್ರೇಶ್ ಹತ್ಯೆಯ ಆರೋಪಿಗಳನ್ನು ಬಂಸಿದೆ. ಇದನ್ನು ಬಿಜೆಪಿಯವರು ಅಭಿನಂದಿ ಸಬೇಕಿತ್ತು. ಆದರೆ ಅದನ್ನು ಬಿಟ್ಟು ಸುಳ್ಳು ಆರೋಪಗಳನ್ನು ಮಾಡಿ ಕೋಮುಗಲಭೆ, ಮತೀಯ ವಿಭಜನೆಗೆ ಬಿಜೆಪಿ ಪ್ರಯತ್ನಿಸುತ್ತಿದೆ. ಹತ್ಯೆ ನಡೆದ ಬಳಿಕ ಶಿವಾಜಿನಗರದಲ್ಲಿ ಗೊಂದಲಮಯ ಹಾಗೂ ಆತಂಕ ಕಾರಿಯ ವಾತಾವರಣ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸಿತ್ತು. ಇದನ್ನು ಪೊಲೀಸ್ ಇಲಾಖೆ ವಿಲಗೊಳಿಸಿದೆ. ಇದರಿಂದ ಹತಾಶರಾಗಿರುವ ಬಿಜೆಪಿಯವರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಮಾತನಾಡಿ, ರೋಷನ್ ಬೇಗ್ ಅವರು ಜಾತ್ಯತೀತ ಮನೋಭಾವದ ನಾಯಕ ರಾಗಿದ್ದು, ಎಲ್ಲ ರೀತಿಯ ಮೂಲಭೂತ ವಾದವನ್ನು ಅವರು ವಿರೋ ಸುತ್ತಿದ್ದಾರೆ. ಆರು ಬಾರಿ ಶಾಸಕರಾಗಿರುವ ರೋಷನ್ ಬೇಗ್ ಅವರ ವಿರುದ್ಧ ಸುಳ್ಳು ಆರೋಪ ಮಾಡಿರುವುದು ಖಂಡನೀಯ ಎಂದರು.
ಶೋಭಾಗೆ ಸಮನ್ಸ್ ಜಾರಿ: ಶೋಭಾ ಅವರು ಬಿಜೆಪಿಯಲ್ಲಿರುವ ಕೆಟ್ಟ ಹುಳು. ಅವರನ್ನು ಬಿಜೆಪಿಯಲ್ಲಿಟ್ಟುಕೊಳ್ಳುವುದು ಬಿಜೆಪಿಯವರಿಗೆ ಶೋಭೆ ತರುವುದಿಲ್ಲ. ರೋಷನ್ ಬೇಗ್ ಅವರು ಯಾರಿಗೆ ಎಲ್ಲಿ, ಎಷ್ಟು ಸುಪಾರಿ ಕೊಟ್ಟಿದ್ದಾರೆ ಎಂಬುದನ್ನು ಶೋಭಾ ಬಹಿರಂಗ ಪಡಿಸಬೇಕು. ಇಲ್ಲದಿದ್ದರೆ, ನಗರ ಪೊಲೀಸ್ ಆಯುಕ್ತರು, ಶೋಭ ಅವರಿಗೆ ಸಮನ್ಸ್ ಜಾರಿಗೊಳಿಸಿ ಮಾಹಿತಿ ಸಂಗ್ರಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಭೈರತಿ ಸುರೇಶ್, ಸಿ.ನಾರಾಯಣ ಸ್ವಾಮಿ, ಶಕೀಲ್ ಅಹ್ಮದ್, ಜಿ.ಎ.ಬಾವ, ಎಂ.ಕೆ. ಗುಣಶೇಖರ್, ವಸಂತ್ ಕುಮಾರ್ ಸೇರಿ ಪ್ರಮುಖರು ಹಾಜರಿದ್ದರು.
ಶೋಭಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬೇಗ್
ಬೆಂಗಳೂರು, ನ.7: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಸಚಿವ ರೋಶನ್ ಬೇಗ್‌ರ ಕೈವಾಡವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ ಹಿನ್ನೆಲೆಯಲ್ಲಿ ರೋಶನ್ ಬೇಗ್ ಅವರು ಕರಂದ್ಲಾಜೆ ವಿರುದ್ಧ 10 ಕೋಟಿ ರೂ.ಪರಿಹಾರ ಕೋರಿ ನಗರದ 8ನೆ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
ಸೋಮವಾರ ಖುದ್ದು ಸಚಿವರೇ 8ನೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗಿ ಶೋಭಾ ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ ಯನ್ನು ದಾಖಲಿಸಿದರು. ಈ ಅರ್ಜಿಯನ್ನು ಪರಿಗಣಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಿತು. ಸಂಸದೆ ಕರಂದ್ಲಾಜೆ ಅವರು ಸಚಿವ ರೋಶನ್ ಬೇಗ್ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಯಲ್ಲಿ 10 ಕೋಟಿ ರೂ.ಮಾನನಷ್ಟ ಪರಿಹಾರ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಪ್ರಕರಣ ಏನು:? ಶಿವಾಜಿನಗರದಲ್ಲಿ ನಡೆದಿದ್ದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯಲ್ಲಿ ಸಚಿವ ರೋಶನ್ ಬೇಗ್ ಅವರ ಕೈವಾಡವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದರು. ಈ ಆರೋಪವು ಸಾಕಷ್ಟು ವಿವಾದಕ್ಕೆ ಕಾರಣವಾ ಗಿತ್ತು. ಈ ಹಿನ್ನೆಲೆಯಲ್ಲಿ ರೋಶನ್ ಬೇಗ್ ಅವರು 10 ಕೋಟಿ ರೂ. ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.