ನನ್ನವಿರುದ್ಧಬಿಎಸ್‌ವೈ-ಡಿಕೆಶಿ ಷಡ್ಯಂತ್ರ: ಎಚ್ಡಿಕೆ
ಬೆಂಗಳೂರು, ನ. 7: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಆವರಣ ದಲ್ಲಿ ಪತ್ತೆಯಾದ 2 ಕೋಟಿ ರೂ.ಹಣದ ವಿಷಯವನ್ನು ಮರೆ ಮಾಚಲು ತಮ್ಮ ಮೇಲೆ ಭೂ ಕಬಳಿಕೆ ಆರೋಪ ಮಾಡಲಾ ಗುತ್ತಿದೆ ಎಂದು ಜೆಡಿಎಸ್‌ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1985-86ರಲ್ಲಿ ರಾಮನಗರ ಜಿಲ್ಲೆ, ಕೇತಗಾನಹಳ್ಳಿ ಗ್ರಾಮದಲ್ಲಿ 42 ಎಕರೆ ಭೂಮಿಯನ್ನು ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ಹಣದಲ್ಲಿ ಖರೀದಿ ಮಾಡಿದ್ದೇನೆ. ಯಾವುದೇ ರೀತಿಯಲ್ಲಿಯೂ ಅಕ್ರಮ ನಡೆಸಿಲ್ಲ. ಈ ಬಗ್ಗೆ ಈಗಾಗಲೇ ಲೋಕಾಯುಕ್ತ, ಸಿಐಡಿ ತನಿಖೆ ನಡೆಸಲಾಗಿದೆ ಎಂದರು.
ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ್, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಖುದ್ದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಲಿ ಎಂದು ಸವಾಲು ಹಾಕಿದ ಕುಮಾರಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಡಿ.ಕೆ.ಶಿವಕುಮಾರ್ ಸಮಾಲೋಚನೆ ನಡೆಸಿ, ಅಕಾರಿಗಳ ಮೂಲಕ ಹಿರೇಮಠ್‌ಗೆ ದಾಖಲೆ ಒದಗಿದ್ದಾರೆ ಎಂದು ದೂರಿದರು.ಪ ವಿಭಾಗಾಕಾರಿ ಜಯಂತಿ ಹಾಗೂ ಪ್ರಧಾನ ಕಾರ್ಯ ದರ್ಶಿ ರಮಣ ರೆಡ್ಡಿ ತನ್ನ ಜಮೀನಿನ ದಾಖಲೆಗಳನ್ನು ಹಿರೇಮಠ್ ಅವರಿಗೆ ನೀಡಿದ್ದಾರೆ. ಆದರೆ, ಭೂಮಿ ಖರೀದಿ ಯಲ್ಲಿ ತಾನು ಯಾವುದೇ ಅಕ್ರಮ ನಡೆಸಿಲ್ಲ ಎಂದ ಅವರು, ಆ ಭೂಮಿಯನ್ನು ಅನಾಥಾಶ್ರಮ ಮತ್ತು ವಿಕಲಚೇತರಿಗೆ ಮೀಸಲಿಡಲಿದ್ದೇನೆ ಎಂದು ಸ್ಪಷ್ಟಪಡಿಸಿದರು.ಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ಒಂದೆ ನಾಣ್ಯದ ಎರಡು ಮುಖಗಳು. ಲೋಕಾಯುಕ್ತ ಸಂಸ್ಥೆ ನಾಶ ಮತ್ತು ಕೆಪಿಎಸ್ಸಿ ಹದಗೆಡಲು ಉಭಯ ಪಕ್ಷಗಳ ಕೊಡುಗೆ ಇದೆ ಎಂದು ಅವರು ಟೀಕಿಸಿದರು.
ಮಾಜಿ ಸಚಿವ ಸುರೇಶ್ ಕುಮಾರ್, ತನ್ನ ಪುತ್ರನ ಜಾಗ್ವಾರ್ ಚಿತ್ರ ವಿದೇಶದಲ್ಲಿನ ಚಿತ್ರೀಕರಣದ ಲೆಕ್ಕಾಚಾರ ಕೇಳಿದ್ದಾರೆ. ಇದೆ ಕಾರ್ಯಕ್ಕೆ ಆದಾಯ ತೆರಿಗೆ ಇಲಾಖೆ ಇದೆ ಎಂದ ಅವರು, 2 ಕೋಟಿ ರೂ.ಖರೀದಿಸಿದ್ದ ಭೂಮಿಯನ್ನು 20ಕೋಟಿ ರೂ.ಗೆ ಜಿಂದಾಲ್ ಕಂಪೆನಿಗೆ ಮಾರಾಟ ಮಾಡಿದ್ದರಿಂದ ಬಂದ ಹಣ ದಲ್ಲಿ ತಾನು ಚಿತ್ರ ನಿರ್ಮಿಸಿಲ್ಲ ಎಂದು ತಿರುಗೇಟು ನೀಡಿದರು.
‘ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಜಯಂತಿ ಆಚರಣೆಯಿಂದ ಮುಸ್ಲಿಮರಿಗೇನು ಸಿಗುವುದಿಲ್ಲ. ಆದರೆ, ಸತತ ಬರದಿಂದ ಸುಮಾರು 45 ಸಾವಿರ ಕೋಟಿ ರೂ. ನಷ್ಟವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಮಾತನಾಡದ ಬಿಜೆಪಿಯವರು, ಟಿಪ್ಪು ನೆಪದಲ್ಲಿ ಬೀದಿಗೆ ಇಳಿಯುವುದು ಸರಿಯಲ್ಲ’
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ