ಮೋದಿ ವಿರುದ್ಧ ಪೋಸ್ಟ್ ಆರೋಪ ಮಟ್ಟುವಿರುದ್ಧಬಿಜೆಪಿ ದೂರು
ಬೆಂಗಳೂರು, ನ. 7: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಿತ ೇಸ್ಬುಕ್ ಪೋಸ್ಟ್ ಮಾಡಿದ್ದಾರೆ ಎಂದು ಆರೋ ಪಿಸಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ವಿರುದ್ಧ ಬಿಜೆಪಿ ಯುವ ಮೋರ್ಚಾ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದೆ.
ಸೋಮವಾರ ಬಿಜೆಪಿ ಶಾಸಕ ವಿಜಯ್ ಕುಮಾರ್ ಹಾಗೂ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಅಜಿತ್ ಹೆಗಡೆ ಬೆಳ್ಳಿಕೇರಿ, ಹೈಗ್ರೌಂಡ್ಸ್ ಠಾಣೆಗೆ ತೆರಳಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ವಿರುದ್ಧ ದೂರು ಸಲ್ಲಿಕೆ ಮಾಡಿದರು. ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ವಿಜಯ್ ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ಮೋದಿ ಬಗ್ಗೆ ಮಾಡಿರುವ ಅವಹೇಳನ ಕಾರಿ ಕಮೆಂಟ್ ಬಗ್ಗೆ ಅಮೀನ್ ಮಟ್ಟು ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದೇವೆ. ಆದರೆ, ಅವರು ದೂರು ಸ್ವೀಕರಿಸಿದ್ದಾರಷ್ಟೇ. ಇನ್ನೂ ಎ್ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿದರು.್ಐಆರ್ ದಾಖಲಿಸಲು ಸಬೂಬು ಹೇಳುತ್ತಿದ್ದಾರೆ. ಪೊಲೀಸರ ಮೇಲೆ ಸಿಎಂ, ಗೃಹ ಸಚಿವರ ಒತ್ತಡವಿದೆ ಎಂದ ಅವರು, ಪೊಲೀಸರು ಎ್ಐಆರ್ ದಾಖಲು ಮಾಡದಿದ್ದಲ್ಲಿ, ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.