×
Ad

ರಾಜ್ಯದಲ್ಲಿಬ್ರಿಟನ್ ಬಂಡವಾಳ ಹೂಡಿಕೆ ನಿರೀಕ್ಷೆ

Update: 2016-11-09 00:28 IST

ಬೆಂಗಳೂರು, ನ. 8: ರಾಜ್ಯದಲ್ಲಿನ ಸ್ಮಾರ್ಟ್‌ಸಿಟಿ ಹಾಗೂ ನವೀಕೃತ ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬ್ರಿಟನ್ ಬಂಡವಾಳ ಹೂಡಿಕೆ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಯು.ಕೆ. ಪ್ರಧಾನಿ ಥೆರೇಸಾ ಮೆ ಅವರೊಂದಿಗಿನ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಅವರು, ಬ್ರಿಟನ್‌ನೊಂದಿಗೆ ಐತಿಹಾಸಿಕ ಸಂಬಂಧವಿದ್ದು, ಉಭಯ ರಾಷ್ಟ್ರಗಳ ಮಧ್ಯೆ ಉತ್ತಮ ಬಾಂಧವ್ಯವಿದೆ ಎಂದು ಬಣ್ಣಿಸಿದರು.

ಹೊಸದಿಲ್ಲಿಗೆ ಭೇಟಿ ನೀಡಿದ ಬಳಿಕ ಬ್ರಿಟನ್ ಪ್ರಧಾನಿ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದ ಅವರು, ಬೆಂಗಳೂರು ಸಂಶೋಧನೆ, ಮಾಹಿತಿ ತಂತ್ರಜ್ಞಾನ, ವೈಮಾನಿಕ ಕ್ಷೇತ್ರ, ಬಯೋಟೆಕ್ನಾಲಜಿ, ಜೀವ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂದರು. ಅಲ್ಲದೆ, ಐಟಿ-ಬಿಟಿ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿರುವ ರಾಜ್ಯದ ವಿಪ್ರೊ, ಇನ್ಫೋಸಿಸ್, ಬಯೋಕಾನ್ ಸೇರಿದಂತೆ ಪ್ರತಿಷ್ಠಿತ ಕಂಪೆನಿಗಳು ಬ್ರಿಟನ್ ದೇಶದಲ್ಲಿ ಹೂಡಿಕೆ ಮಾಡಿದ್ದು, ಹೂಡಿಕೆ ಕ್ಷೇತ್ರದಲ್ಲಿ ಇದೊಂದು ದ್ವಿಪಕ್ಷೀಯ ಒಪ್ಪಂದ ಎಂದು ಅವರು ತಿಳಿಸಿದರು.


ದಕ್ಷಿಣ ಹಾಗೂ ಪಶ್ಚಿಮ ಭಾರತದಲ್ಲಿ ಮೂಲಸೌಕರ್ಯಗಳ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಬ್ರಿಟನ್ ಹೂಡಿಕೆಗೆ ನಿರೀಕ್ಷೆ ಹೊಂದಲಾಗಿದೆ. ಸಾಂಸ್ಕೃತಿಕವಾಗಿಯೂ ಹಿಂದಿನಿಂದ ಬ್ರಿಟನ್‌ನೊಂದಿಗೆ ಉತ್ತಮ ಸಂಪರ್ಕ ವಿದೆ ಎಂದ ಅವರು, ವಿಜಯ ನಗರದ ಹಂಪಿಯನ್ನು ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೊಳಿಸಿದೆ.ಲ್ಲದೆ, ಮೈಸೂರು, ವಿಜಯಪುರದ ಗೋಲ್ ಗುಂಬಜ್ ವಿಶ್ವ ಮಾನ್ಯತೆ ಪಡೆದಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ ಹೊಂದಲಾಗಿದೆ ಎಂದ ಅವರು, ಇಂಗ್ಲೆಂಡ್ ವ್ಯಾಪಾರಾಭಿವೃದ್ಧಿಯಲ್ಲಿ ಮುಂಚೂಣಿ ದೇಶವಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿರುವ ಬ್ರಿಟಿಷ್ ಹೈಕಮಿಷನ್ ಸಿದ್ಧಪಡಿಸಿರುವ ವರದಿ ಕರ್ನಾಟಕ ರಾಜ್ಯ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣವಿದೆ ಎಂಬುದನ್ನು ಸ್ಪಷ್ಟ ಎಂದು ಉಲ್ಲೇಖಿಸಿದರು. ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಏರ್ ಶೋ ನಡೆಯಲಿದ್ದು, ಈ ಮೊದಲು ಈ ಪ್ರದರ್ಶನದಲ್ಲಿ ಇಂಗ್ಲೆಂಡ್‌ನ ಹಲವು ಕಂಪೆನಿಗಳು ಪಾಲ್ಗೊಂಡಿವೆ. ಮಾತ್ರವಲ್ಲ, ಆ ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡಿದೆ. ಈ ಬಾರಿಯೂ ಮತ್ತಷ್ಟು ಕಂಪೆನಿಗಳ ರಾಜ್ಯದಲ್ಲಿ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳಬೇಕು ಎಂದು ಆಹ್ವಾನ ನೀಡಿದರು.
ಧಾರವಾಡದ ಸಮೀಪದಲ್ಲಿ 400 ಎಕರೆಯಲ್ಲಿ ಹೆಲ್ತ್‌ಸಿಟಿ ಯೋಜನೆಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅಲ್ಲದೆ, ಮಕ್ಕಳ ಮತ್ತು ಗರ್ಭಿಣಿಯರ ಆರೋಗ್ಯ, ಉನ್ನತ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲೂ ಇಂಗ್ಲೆಂಡ್‌ನ ಬಂಡವಾಳ ಹೂಡಿಕೆಯನ್ನು ನಿರೀಕ್ಷೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್. ವಿ.ದೇಶಪಾಂಡೆ, ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್‌ಖರ್ಗೆ, ಮೇಲ್ಮನೆ ಸದಸ್ಯ ಕೆ.ಗೋವಿಂದರಾಜು, ಮುಖ್ಯಮಂತ್ರಿಗಳ ಕಾರ್ಯದರ್ಶಿ ಅತೀಕ್ ಅಹ್ಮದ್ ಸೇರಿ ಇನ್ನಿತರ ಗಣ್ಯರು ಹಾಜರಿದ್ದರು.

ವೀಸಾ ನೀತಿ ಸರಳೀಕರಣಕ್ಕೆ ಆಗ್ರಹ
ಬ್ರಿಟನ್ ವೀಸಾ ನೀತಿಯನ್ನು ಬದಲಾವಣೆ ಮಾಡಿದ್ದು, ನ.24ರ ನಂತರ 30 ಸಾವಿರ ಪೌಂಡ್‌ಗಿಂತ ಹೆಚ್ಚು ವೇತನ ಪಡೆಯುವವರು ಐಸಿಟಿ ವೀಸಾಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಮೊದಲು 20,800 ಪೌಂಡ್ ವೇತನದಾರರಿಗೂ ವೀಸಾ ನೀಡಲಾಗುತ್ತಿತ್ತು. ಇದನ್ನು ಬದಲಾವಣೆ ಮಾಡಿ ಹಿಂದಿನ ಪದ್ಧತಿಯನ್ನೇ ಮುಂದುವ ರಿಸಬೇಕೆಂದು ಸಿಎಂ ಸಿದ್ದರಾಮಯ್ಯ ಕೋರಿದರು.


ಬ್ರಿಟನ್ ಪ್ರಧಾನಿ ಥೆರೇಸಾ ಮೇ ಬೆಂಗಳೂರಿಗೆ ಭೇಟಿ
ಬೆಂಗಳೂರು, ನ.8: ಬ್ರಿಟನ್ ದೇಶದ ಪ್ರಧಾನಿ ಥೆರೇಸಾ ಮೇ, ಒಂದು ದಿನದ ಭೇಟಿಗಾಗಿ ಮಂಗಳವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರನ್ನು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಬರಮಾಡಿಕೊಂಡರು.
ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಥೆರೇಸಾ ಮೇ, ಸಂಜೆ 5.45ಕ್ಕೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ರಿಟನ್‌ಗೆ ತೆರಳಿದರು. ಮೂಲ ಸೌಲಭ್ಯ ಅಭಿವದ್ಧಿ ಹಾಗೂ ಬಹತ್ ಕೈಗಾರಿಕಾ ಸಚಿವ ಆರ್. ವಿ.ದೇಶಪಾಂಡೆ, ಬ್ರಿಟನ್ ಪ್ರಧಾನಿ ಅವರನ್ನು ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಟಿಯಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾಇಲಾಖೆಯ ಕಾರ್ಯದರ್ಶಿ ಟಿ. ಕೆ. ಅನಿಲ್‌ಕುಮಾರ್, ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಗೋಪಾಲಯ್ಯ ಉಪಸ್ಥಿತರಿದ್ದರು.


 ರೇಷ್ಮೆಸೀರೆ ಉಟ್ಟುಸೋಮೇಶ್ವರನ ದರ್ಶನ ಪಡೆದ ಬ್ರಿಟನ್ ಪ್ರಧಾನಿ

ಬೆಂಗಳೂರು, ನ.8: ಬ್ರಿಟನ್ ಪ್ರಧಾನಮಂತ್ರಿ ಥೆರೇಸಾ ಮೇ, ಚಿನ್ನದ ಬಣ್ಣದ ರೇಷ್ಮೆ ಸೀರೆಗೆ ಹಸಿರು ಬಣ್ಣದ ಕುಪ್ಪಸ ಉಟ್ಟು ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.
ಅಪ್ಪಟ ಭಾರತೀಯ ನಾರಿಯಂತೆ ಚಿನ್ನದ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಬ್ರಿಟನ್ ಪ್ರಧಾನಿ, ಮಂಗಳವಾರ ಮಧ್ಯಾಹ್ನ ಹಲಸೂರಿನಲ್ಲಿರುವ ಐತಿಹಾಸಿಕ ಸೋಮೇಶ್ವರ ದೇವಸ್ಥಾನಕ್ಕೆ ಆಗಮಿಸಿದಾಗ, ದೇವಸ್ಥಾನ ದ್ವಾರದಲ್ಲಿ ಮಲ್ಲಿಗೆ ಹಾರಹಾಕಿ, ನಾದಸ್ವರ ನುಡಿಸುವ ಮೂಲಕ ಬರಮಾಡಿಕೊಳ್ಳಲಾಯಿತು.ಂದು ದಿನದ ಬೆಂಗಳೂರು ಭೇಟಿಗಾಗಿ ಆಗಮಿಸಿದ್ದ ಅವರಿಗೆ ನಗರದ ಪುರಾತನ ದೇವಸ್ಥಾನಗಳಲ್ಲಿ ಒಂದಾದ ಈ ದೇವಸ್ಥಾನವನ್ನು ತೋರಿಸಲು ಅನುವು ಮಾಡಿಕೊಡಲಾಗಿತ್ತು. ದೇವಸ್ಥಾನ ಪ್ರವೇಶಿ ಸುತ್ತಿದ್ದಂತೆ ದೇವಸ್ಥಾನದ ಇಬ್ಬರು ಪ್ರಧಾನ ಅರ್ಚಕರೊಂದಿಗೆ ದೇವಸ್ಥಾನವನ್ನು ಪ್ರದಕ್ಷಿಣೆ ಮಾಡುತ್ತಾ ಅವರಿಂದಲೇ ಈ ದೇವಸ್ಥಾನದ ಇತಿಹಾಸದ ಕುರಿತು ಮಾಹಿತಿಯನ್ನು ಪಡೆದುಕೊಂಡರು.
ಪ್ರದಕ್ಷಿಣೆ ಮುಗಿದ ಕೂಡಲೆ ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ನಂತರ ಉಯ್ಯೆಲೆ ಮಂಟಪದಲ್ಲಿರುವ ಸೋಮೇಶ್ವರನಿಗೆ ಪೂಜೆ ಸಲ್ಲಿಸಿ, ದೇವರಿಗೆ ಕೈಮುಗಿದು ನಮಸ್ಕಾರ ಮಾಡಿದ ನಂತರ ಮಂಗಳಾರತಿಯನ್ನು ಸ್ವೀಕರಿಸಿ ದೇವರ ದರ್ಶನವನ್ನು ಪಡೆದರು.
ಸೋಮೇಶ್ವರನ ದರ್ಶನ ಮುಗಿಸಿ ತೆರಳುವ ಸಂದರ್ಭದಲ್ಲಿ ದೇವ ಸ್ಥಾನದ ವತಿಯಿಂದ ಮುಜರಾಯಿ ಇಲಾಖೆಯ ಆಯುಕ್ತ ಎಸ್.ಪಿ.ಷಡಕ್ಷರಿಸ್ವಾಮಿ ಮತ್ತು ನಗರ ಜಿಲ್ಲಾಧಿಕಾರಿ ವಿ.ಶಂಕರ್, ಥೆರೇಸಾ ಮೇ ಅವರಿಗೆ ಶಾಲು ಹೊದಿಸಿ ನಟರಾಜನ ಗಂಧದ ಪ್ರತಿಮೆಯನ್ನು ನೀಡಿ ಗೌರವ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News