ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಐವರ ನೇಮಕಾತಿಗೆ ಚಾಲನೆ
ಬೆಂಗಳೂರು, ನ.8: ಕಳೆದ ಒಂದೂವರೆ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ ಇದೀಗ ಚಾಲನೆ ದೊರೆತಿದೆ.
ಅಧೀನ ನ್ಯಾಯಾಲಯದ ಐವರು ನ್ಯಾಯಾಧೀಶರಿಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆ ಶುರುವಾಗಿದೆ. ಈ ವಿಷಯವನ್ನು ಖುದ್ದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರು ಮಂಗಳವಾರ ಪ್ರಕರಣವೊಂದರ ವಿಚಾ ರಣೆ ವೇಳೆ ತೆರೆದ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಕೊಲಿಜಿಯಂ ಅಧೀನ ನ್ಯಾಯಾಲ ಯದ ಐವರು ನ್ಯಾಯಾಧೀಶರಿಗೆ ಹೈಕೋರ್ಟ್ ನ್ಯಾಯ ಮೂರ್ತಿಗಳ ಹುದ್ದೆಗೆ ಭಡ್ತಿ ನೀಡುವ ಉದ್ದೇಶದಿಂದ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಿಕೊಡುವಂತೆ ತಮಗೆ ತಿಳಿಸಿರುವುದಾಗಿ ಹೇಳಿದರು. ಸೇವಾ ಹಿರಿತನದ ಆಧಾರದ ಮೇಲೆ ಎಂಟು ಅಧೀನ ನ್ಯಾಯಾಲಯ ನ್ಯಾಯಾಧೀಶರ ಹೆಸರುಗಳನ್ನು ಹೈಕೋರ್ಟ್ ಕೊಲಿಜಿಯಂಗೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೊಲಿಜಿಯಂ ಆ ಎಂಟು ಜನರ ಪೈಕಿ ಐವರ ಹೆಸರುಗಳನ್ನು ಪರಿಗಣಿಸಲಾಗಿದ್ದು, ಅವರ ಸೇವೆಗೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಿಕೊಡಲು ಸುಪ್ರೀಂಕೋರ್ಟ್ ಹೈಕೋರ್ಟ್ ಸೂಚಿಸಿದೆ ಎಂದು ತಿಳಿದು ಬಂದಿದೆ. ಅಕ್ರಮ ಆಸ್ತಿ ಗಳಿಕೆ ಆಸ್ತಿ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಮತ್ತು ಸದ್ಯದ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಜಾನ್ ಮೈಕಲ್ ಡಿ ಕುನ್ಹಾ ಅವರ ಹೆಸರು ಹೈ ಕೋರ್ಟ್ ನ್ಯಾಯ ಮೂರ್ತಿ ಹುದ್ದೆಗೆ ಭಡ್ತಿ ಪಡೆಯುವವರಲ್ಲಿ ಪ್ರಮುಖ ವಾಗಿ ಕೇಳಿ ಬಂದಿದೆ. ಇನ್ನು ಉಳಿದ ಅಧೀನ ನ್ಯಾಯಾಲಯದ ನ್ಯಾಯಾ ಧೀಶರ ಹೆಸರಗಳು ಇದ್ದು, ಆ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.