×
Ad

ಯಡಿಯೂರಪ್ಪ ಢೋಂಗಿ ರಾಜಕಾರಣಿ: ಸಿದ್ದರಾಮಯ್ಯ

Update: 2016-11-09 15:31 IST

ಬೆಂಗಳೂರು, ನ.9: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಡೋಂಗಿ ರಾಜಕಾರಣಿ. ಅವರು ಕೆಜೆಪಿಯಲ್ಲಿದ್ದಾಗ ಟಿಪ್ಪುಸುಲ್ತಾನ್ ಕುರಿತು ಹೇಗೆ ನಡೆದುಕೊಂಡಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಟಿಪ್ಪುಜಯಂತಿ ಆಚರಣೆಗೆ ಯಡಿಯೂರಪ್ಪವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಈ ರೀತಿ ಪ್ರತಿಕ್ರಿಯಿಸಿದರು. ಮಾಜಿ ಉಪಮುಖ್ಯಮಂತ್ರಿ ಆರ್.ಆಶೋಕ್ ಟಿಪ್ಪುವಿನಂತೆ ಕಿರೀಟ ಹಾಕಿರಲಿಲ್ಲವೇ? ಜಗದೀಶ ಶೆಟ್ಟರ್ ಅವರೂ ಅದೇರೀತಿ ವೇಷ ಧರಿಸಿರಲಿಲ್ಲವೇ? ಟಿಪ್ಪು ಬಗ್ಗೆ ಈ ಹಿಂದೆ ಪ್ರೀತಿ ತೋರುತ್ತಿದ್ದವರು ಈಗ ಏಕೆ ವಿರೋಧ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಇದು ಕೋಮುವಾದಿಗಳ ಭಾವನೆ. ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಕುಟಿಲ ಪ್ರಯತ್ನ. ಟಿಪ್ಪುಜಯಂತಿ ವೇಳೆ ಆಹಿತಕರ ಘಟನೆಗಳಿಗೆ ಆಸ್ಪದ ನೀಡುವುದಿಲ್ಲ ಎಂದರು. ಬಿಎಸ್‌ವೈ ಹೊಣೆ: ಅಹಿತಕರ ಘಟನೆ ನಡೆದರೆ ಮುಖ್ಯಮಂತ್ರಿಯವರೇ ಹೊಣೆ ಎಂದು ಯಡಿಯೂರಪ್ಪಹೇಳಿದ್ದಾರೆ. ಒಂದು ವೇಳೆ ಟಿಪ್ಪು ಜಯಂತಿ ಆಚರಣೆ ವೇಳೆ ಏನಾದರೂ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ಯಡಿಯೂರಪ್ಪ ಅವರೇ ಹೊಣೆಯಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News