2022ರ ವಿಶ್ವಕಪ್: ಸ್ಟೇಡಿಯಂನೊಳಗೆ ಮದ್ಯ ಸೇವನೆಗೆ ಕತರ್ ನಿಷೇಧ

Update: 2016-11-09 17:28 GMT

ದೋಹಾ, ನ.9: 2022ರ ಫಿಫಾ ವಿಶ್ವಕಪ್‌ನ ವೇಳೆ ಪ್ರೇಕ್ಷಕರು ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಲ್ಕೋಹಾಲ್ ಸೇವನೆಗೆ ಕತರ್ ಅಧಿಕಾರಿಗಳು ನಿಷೇಧ ವಿಧಿಸಲು ನಿರ್ಧರಿಸಿದ್ದಾರೆ ಎಂದು ವಿಶ್ವಕಪ್‌ನ ಆಯೋಜಕರು ತಿಳಿಸಿದ್ದಾರೆ.

ಕತರ್‌ನಲ್ಲಿ ಬೇಸಿಗೆಯಲ್ಲಿ ವಿಪರೀತ ಸೆಖೆ ಇರುವ ಕಾರಣ ವಿಶ್ವಕಪ್‌ನ್ನು ಚಳಿಗಾಲಕ್ಕೆ ಸ್ಥಳಾಂತರಿಸಿರುವ ಬಗ್ಗೆ ಫುಟ್ಬಾಲ್ ಅಭಿಮಾನಿಗಳು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ವಿಶ್ವಕಪ್‌ನ ವೇಳೆ ಸ್ಟೇಡಿಯಂನೊಳಗೆ ಆಲ್ಕೋಹಾಲ್ ಸೇವಿಸುವುದಕ್ಕೆ ನಿಷೇಧ ಹೇರಲಾಗಿದೆ.

 ಬೀದಿಬದಿಗಳಲ್ಲಿ, ವೃತ್ತಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಲ್ಕೋಹಾಲ್‌ನ್ನು ಸೇವಿಸುವಂತಿಲ್ಲ. ಇದು ನಮ್ಮ ಅಂತಿಮ ನಿರ್ಧಾರವಾಗಿದೆ. ಸ್ಟೇಡಿಯಂ ಹಾಗೂ ಅದರ ಸುತ್ತಮುತ್ತ ಆಲ್ಕೋಹಾಲ್ ಸೇವಿಸುವುದಕ್ಕೆ ನಮ್ಮ ವಿರೋಧವಿದೆ. ಆದರೆ, ಸ್ಟೇಡಿಯಂನ ಹೊರಭಾಗದಲ್ಲಿ ಆಲ್ಕೋಹಾಲ್‌ನ್ನು ಸೇವಿಸಬಹುದು ಎಂದು ವಿಶ್ವಕಪ್ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಸನ್ ಅಲ್-ಥವಾಡಿ ಹೇಳಿದ್ದಾರೆ.

ಕತರ್‌ನಲ್ಲಿ ಮದ್ಯಪಾನ ಸೇವನೆ ಅಕ್ರಮವಲ್ಲ. ಮದ್ಯ ಎಲ್ಲ ಹೊಟೇಲ್‌ಗಳಲ್ಲಿ ಲಭ್ಯವಿರುತ್ತದೆ. ಆದರೆ, ಸಾರ್ವಜನಿಕವಾಗಿ ಮದ್ಯ ಸೇವನೆಯನ್ನು ನಿರ್ಬಂಧಿಸಲಾಗಿದೆ. ದೇಶದೊಳಗೆ ಮದ್ಯವನ್ನು ಬೇರೆಡೆಯಿಂದ ತರುವುದು ಕಾನೂನುಬಾಹಿರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News