ಮೊದಲ ಟೆಸ್ಟ್ ; ಪೂಜಾರ , ವಿಜಯ್ ಶತಕ

Update: 2016-11-11 13:59 GMT

ರಾಜ್ ಕೋಟ್, ನ.11:ಇಲ್ಲಿ  ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ಭಾರತದ ಚೇತೇಶ್ವರ ಪೂಜಾರ ಮತ್ತು ಮುರಳಿ ವಿಜಯ್  ಮೊದಲ  ಇನಿಂಗ್ಸ್ ನಲ್ಲಿ  ಶತಕ ದಾಖಲಿಸಿದ್ದಾರೆ.

ಟೆಸ್ಟ್ ನ ಮೂರನೆ ದಿನವಾಗಿರುವ ಇಂದು  ದಿನದಾಟದಂತ್ಯಕ್ಕೆ ಭಾರತ 108.3  ಓವರ್ ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 319 ರನ್ ಗಳಿಸಿದೆ.

26 ರನ್ ಗಳಿಸಿರುವ ನಾಯಕ ವಿರಾಟ್ ಕೊಹ್ಲಿ ಔಟಾಗದೆ ಕ್ರೀಸ್ ನಲ್ಲಿದ್ದಾರೆ. 

 ಇದಕ್ಕೂ ಮೊದಲು ಆರಂಭಿಕ ದಾಂಡಿಗ ಮುರಳಿ ವಿಜಯ್ 126 ರನ್ (301ಎ, 9ಬೌ,4ಸಿ) ಮತ್ತು ಚೇತೇಶ್ವರ ಪೂಜಾರ 124 ರನ್( 206ಎ, 17ಬೌ)  ಗಳಿಸಿ  ಔಟಾದರು.ನೈಟ್ ವಾಚ್ ಮನ್ ಅಮಿತ್ ಮಿಶ್ರಾ ಖಾತೆ ತೆರೆಯದೆ ಔಟಾಗಿದ್ದಾರೆ.

ಪೂಜಾರ  169 ಎಸೆತಗಳಲ್ಲಿ 15 ಬೌಂಡರಿಗಳ ನೆರವಿನಲ್ಲಿ  9ನೆ ಶತಕ ಮತ್ತು ವಿಜಯ್ 254 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ 7ನೆ ಶತಕ ಪೂರೈಸಿದರು. 

  ಭಾರತ  ಎರಡನೆ ದಿನದಾಟದಂತ್ಯಕ್ಕೆ 23 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿತ್ತು. ಮುರಳಿ ವಿಜಯ್ 25 ಮತ್ತು ಗಂಭೀರ್ 28 ರನ್ ಗಳಿಸಿ ಔಟಾಗದೆ ಕ್ರೀಸ್ ನಲ್ಲಿದ್ದರು. ಇಂದು ಆರಂಭಿಕ ದಾಂಡಿಗ ಗೌತಮ್ ಗಂಭೀರ್( 29) ಬೇಗನೆ  ಔಟಾಗಿದ್ದಾರೆ. ನಿನ್ನೆಯ ಮೊತ್ತಕ್ಕೆ ಭಾರತ 5 ರನ್ ಸೇರಿಸುವಷ್ಟರಲ್ಲಿ ಆರಂಭಿಕ ದಾಂಡಿಗ ಗಂಭೀರ್ ಅವರನ್ನು ಕ್ರಿಸ್ ಬ್ರಾಡ್ ಎಲ್ ಬಿಡಬ್ಲ್ಯು ಬಲೆಗೆ ಬೀಳಿಸಿದರು. ಬಳಿಕ ಪೂಜಾರ ಮತ್ತು ಮುರಳಿ ವಿಜಯ್ ಎರಡನೆ ವಿಕೆಟ್ ಗೆ  ಜೊತೆಯಾಟದಲ್ಲಿ 209 ರನ್ ಗಳ ಜೊತೆಯಾಟ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News