×
Ad

ಮೋದಿ ಅಭಿಮಾನಿಗಳ ಸಂಖ್ಯೆಯಲ್ಲಿ ಕುಸಿತದಿಂದ ಟ್ವಿಟ್ಟರ್ ಗಲಿಬಿಲಿ !

Update: 2016-11-12 12:48 IST

►ಸರಕಾರದಿಂದ ಟ್ವಿಟ್ಟರ್ ಮೇಲೆ ಒತ್ತಡದ ಸಂಶಯ
►ಸಮಜಾಯಿಷಿ ನೀಡಿ ಮತ್ತಷ್ಟು ಪ್ರಶ್ನೆಗಳಿಗೆ ಕಾರಣವಾದ ಟ್ವಿಟ್ಟರ್
►ಪ್ರಶ್ನೆಗಳಿಗೆ ಇಲ್ಲ ಉತ್ತರ

ಹೊಸದಿಲ್ಲಿ, ನ.12: 500 ಹಾಗೂ 1000 ರೂ. ನೋಟುಗಳನ್ನು ರದ್ದುಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ ಮರುದಿನವೇ ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಫಾಲೋರ್ಸ್ ಸಂಖ್ಯೆ 3.13 ಲಕ್ಷಕ್ಕೆ ಕುಸಿದಿದೆಯೆಂದು ಕ್ಯಾಚ್ ನ್ಯೂಸ್ ನವೆಂಬರ್ 9 ರಂದು ಮಾಡಿದ  ವರದಿಗೆ ಟ್ವಿಟ್ಟರ್ ಇಂಡಿಯಾ ಪ್ರತಿಕ್ರಿಯಿಸಿತ್ತು.

ಟ್ವಿಟ್ಟರ್ ವಕ್ತಾರರೊಬ್ಬರು ತಮ್ಮ ಪ್ರತಿಕ್ರಿಯೆಯಲ್ಲಿ ``ಫಾಲೋವರ್ಸ್ ಕುಸಿತ ಸ್ಪ್ಯಾಮ್ ಕ್ಲೀನ್ ಅಪ್ ನಿಂದಾಗಿದ್ದು, ಇದೇ ರೀತಿ ಇನ್ನೂ ಹಲವು ಟ್ವಿಟ್ಟರ್ ಖಾತೆಗಳಲ್ಲಿನ ಫಾಲೋವರ್ಸ್ ಸಂಖ್ಯೆ ಕಡಿಮೆಯಾಗಿದೆ'' ಎಂದು  ಹೇಳಿದ್ದಾರೆಂದು ಕ್ಯಾಚ್ ನ್ಯೂಸ್ ಇದರ ವಿಶೇಷ ವರದಿಯೊಂದು ಹೇಳಿದೆ.

ಈ ವಕ್ತಾರ ಟ್ವಿಟ್ಟರ್ ಪರವಾಗಿ ಅಧಿಕೃತ ಸ್ಪಷ್ಟೀಕರಣ ನೀಡಿದ್ದರೂ, ಆತ/ಆಕೆ ತಮ್ಮ ಹೆಸರನ್ನು ಬಹಿರಂಗಗೊಳಿಸಬಾರದೆಂದು ಮನವಿ ಮಾಡಿದ್ದಾರೆ.
ಟ್ವಿಟ್ಟರ್ ವಕ್ತಾರರ ಪ್ರತಿಕ್ರಿಯೆಯ ಆಧಾರದಲ್ಲಿ ಕ್ಯಾಚ್ ನ್ಯೂಸ್ ಅವರಿಗೆ ಈ ಕೆಳಗಿನ ಪ್ರಶ್ನೆಗಳನ್ನೆಸೆದಿದೆ.

 @ನರೇಂದ್ರಮೋದಿ ಖಾತೆಯನ್ನು ಹಲವರು ಅನ್ ಫಾಲೋ ಮಾಡಿದ್ದರಿಂದ ಅಥವಾ ನಕಲಿ ಖಾತೆಗಳನ್ನು ತೆಗೆದು ಹಾಕಿದ್ದರಿಂದ ಈ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆಯಲ್ಲಿ ಕುಸಿತವಾಯಿತೇ ?
ನಕಲಿ ಫಾಲೋವರ್ಸ್ ಅವರನ್ನು ತೆಗೆದು ಹಾಕಿದ್ದರಿಂದಲೇ ಹೀಗಾಗಿದ್ದಿದ್ದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಖಾತೆಗಳೇಕೆ ಬಾಧಿತವಾಗಿಲ್ಲ ?
ಫಾಲೋವರ್ಸ್ ಸಂಖ್ಯೆ ನವೆಂಬರ್ 9 ರಂದೇ ಏಕೆ ಆಗಿದ್ದು ? ಬೇರೆ ಯಾವುದಾದರೂ ದಿನ ಅಥವಾ ಕಳೆದೆರಡು ತಿಂಗಳಲ್ಲಿ ಏಕೆ ಆಗಿಲ್ಲ ? ಕ್ಯಾಚ್ ನ್ಯೂಸ್ ನೀಡಿದ ಗ್ರಾಫ್ ಒಂದರಲ್ಲಿ ಇದನ್ನು  ತೋರಿಸಲಾಗಿದೆ. ಆದರೆ ಟ್ವಿಟ್ಟರ್ ವಕ್ತಾರರು ಈ ಯಾವುದೇ ಪ್ರಶ್ನೆಗಳನ್ನು ಉತ್ತರಿಸುವ ಗೋಜಿಗೆ ಹೋಗಿಲ್ಲ

ಟ್ವಿಟ್ಟರಿನ ಫ್ಲಿಪ್-ಫ್ಲಾಪ್ 

ಆದರೆ ಶುಕ್ರವಾರ ಬೆಳಿಗ್ಗೆ ಟ್ವಿಟ್ಟರ್ ತನ್ನ ನಿಲುವನ್ನು ಬದಲಾಯಿಸಿದ್ದು ಅದೊಂದು ಸ್ಪ್ಯಾಮ್ ಕ್ಲೀನ್ ಅಪ್ ಅಲ್ಲವೇ ಅಲ್ಲ ಎಂದು ಹೇಳಿಕೊಂಡಿದೆ. ``ಅದೊಂದು ಸೋಶಿಯಲ್ ಗ್ರಾಫ್  ದೋಷ, ಸ್ಪ್ಯಾಮ್ ಕ್ಲೀನ್ ಅಪ್ ಅಲ್ಲ'' ಎಂದು ಟ್ವಿಟ್ಟರ್ ವಕ್ತಾರರೊಬ್ಬರು ಹೇಳಿದ್ದಾರೆ.

ಟ್ವಿಟ್ಟರಿನ ಈ ವಾದವು ಹಲವಾರು ಪ್ರಶ್ನೆಗಳನ್ನೆತ್ತಿದೆ :

►ಫಾಲೋವರ್ಸ್ ಸಂಖ್ಯೆಯಲ್ಲಿನ ಕುಸಿತ ಸ್ಪ್ಯಾಮ್ ಕ್ಲೀನ್ ಅಪ್ ನಿಂದಾಗಿತ್ತೆಂದು ಟ್ವಿಟ್ಟರ್ ಈ ಹಿಂದೆ ಏಕೆ ಹೇಳಿಕೊಂಡಿತ್ತು ?
►ಸ್ಪ್ಯಾಮ್ ಕ್ಲೀನ್ ಅಪ್ ಗೊಳಗಾಗಿತ್ತೆಂದು ಹೇಳಲಾಗಿರುವ `ಇತರ ಅಕೌಂಟುಗಳು' ಕೂಡ ಗ್ರಾಫ್ ದೋಷದಿಂದ ಬಾಧಿತವಾಗಿವೆಯೇ ?
►ಈ ಸೋಶಿಯಲ್ ಗ್ರಾಫ್ ದೋಷ ಕೇವಲ ಪ್ರಧಾನಿ ಮೋದಿಯವರ ಖಾತೆಯನ್ನು ಮಾತ್ರ ಏಕೆ ಬಾಧಿಸಿತ್ತು ? ಹಾಗೂ ಅದು ನವೆಂಬರ್ 9 ರಂದೇ ಏಕೆ ಆಗಿತ್ತು ?
►ಟ್ವಿಟ್ಟರ್ ಫಾಲೋವರ್ಸ್ ಖಾತೆಗಳನ್ನು ಹೇಗೆ `ರಿಸ್ಟೋರ್' ಮಾಡಿತು ?  ಡಿಲೀಟ್ ಆದ ಅಕೌಂಟುಗಳನ್ನು ಅದು ಮರು-ಆಕ್ಟಿವೇಟ್ ಮಾಡಿತೆಂದು ಇದರ ಅರ್ಥವೇ ?
►ಕ್ಯಾಚ್ ಸ್ಟೋರಿ ಸರಿಯಲ್ಲವೆಂದಾದರೆ, ಟ್ವಿಟ್ಟರ್  ಸ್ಪಷ್ಟೀಕರಣಗಳನ್ನು ಅನಾಮಿಕ ವಕ್ತಾರರ ಮೂಲಕ ಏಕೆ ನೀಡುತ್ತಿದೆ ?ಅನಾಮಿಕರು ನೀಡುತ್ತಿರುವ ಸ್ಪಷ್ಟೀಕರಣಗಳು ಹೆಚ್ಚು ವಿಶ್ವಾಸಾರ್ಹವಾಗಿರುವುದಿಲ್ಲ.
► ಟ್ವಿಟ್ಟರ್ ತಾನು ಸ್ಪ್ಯಾಮ್ ಖಾತೆಗಳನ್ನು ಡಿಲೀಟ್ ಮಾಡಿದೆಯೆಂದು ಒಪ್ಪುವುದಾದರೆ ಹಾಗೂ ಈ ಕ್ರಮದಿಂದಾಗಿ ಫಾಲೋವರ್ಸ್ ಸಂಖ್ಯೆ ಕಡಿಮೆಯಾಗಿದೆಯೆಂದಾದರೆ, ಹೆಚ್ಚು ಸಂಖ್ಯೆಯ ಮೋದಿ ಫಾಲೋವರ್ಸ್ ನಕಲಿ ಎಂದರ್ಥವೇ ?
 ►ಕೊನೆಯದಾಗಿ ಟ್ವಿಟ್ಟರ್ ಸರಕಾರದಿಂದ ಒತ್ತಡವೆದುರಿಸುತ್ತಿದೆಯೇ ?

ಟ್ವಿಟ್ಟರಿನ ಸಮಸ್ಯೆ ನಮಗೆ ಅರ್ಥವಾಗುತ್ತದೆ.

►ಐನೂರು ಹಾಗೂ 1000 ರೂ. ನೋಟುಗಳನ್ನು ರದ್ದುಗೊಳಿಸಿದ ಮರುದಿನವೇ ನರೇಂದ್ರ ಮೋದಿಯ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಕಡಿಮೆಯಾಗಿದ್ದು ನಿಜಕ್ಕೂ ಮುಜುಗರಕಾರಿ. ಈಗಾಗಲೇ ಬ್ಯಾಂಕುಗಳ, ಎಟಿಎಂ ಗಳು ಹಾಗೂ  ಇತರೆಡೆಗಳಲ್ಲಿ ಹಳೆಯ ನೋಟುಗಳ ವಿಚಾರದಲ್ಲಿ ಜನಸಾಮಾನ್ಯರು ಸಾಕಷ್ಟು ಸಂಕಷ್ಟವೆದುರಿಸುತ್ತಿದ್ದು  ಈ ಹಿನ್ನೆಲೆಯಲ್ಲಿ ಮೋದಿ ಫಾಲೋವರ್ಸ್ ಸಂಖ್ಯೆ ಕುಗ್ಗಿರುವುದು ಅವರ ಕ್ರಮದ ವಿರುದ್ಧ ಜನರ ಪ್ರತಿಕ್ರಿಯೆಯೆಂದೇ ಹೇಳಬಹುದು. ಈ ಋಣಾತ್ಮಕ ಪ್ರತಿಕ್ರಿಯೆ  ಸರಕಾರಕ್ಕೆ ಮುಜುಗರ ತಂದಿದೆಯೆಂಬುದು ಸ್ಪಷ್ಟ.

►ಟ್ವಿಟ್ಟರಿನ ಆರಂಭಿಕ ಪ್ರತಿಕ್ರಿಯೆ - ಇದೊಂದು ಸ್ಪ್ಯಾಮ್ ಕ್ಲೀನ್ ಅಪ್ ಎಂಬುದಾಗಿ ಮೋದಿಯವರ ಸಾಮಾಜಿಕ ಜಾಲತಾಣದಲ್ಲಿ ಮೇಲುಗೈ ನಕಲಿ ಖಾತೆಗಳನ್ನೇ ಅವಲಂಬಿಸಿದೆಯೆಂದು ತಿಳಿಯುತ್ತದೆ. ಇಂತಹ ಒಂದು ಆರೋಪ ಹಿಂದೆ ಕೂಡ ಕೇಳಿ ಬಂದಿತ್ತು.
ಕ್ಯಾಚ್ ವರದಿಯ ನಂತರ ಮೋದಿ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಮತ್ತೆ ಹಿಂದಿನಂತೆಯೇ ಆಗಿರುವುದು ಅದು ಒತ್ತಡದಿಂದಾಗಿ ಹಾಗೆ ಮಾಡಿದೆಯೆಂಬ ಆರೋಪಕ್ಕೆ ಕಾರಣವಾಗುತ್ತದೆ. 

 ಕೃಪೆ: catchnews.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News