ಗ್ರಾಹಕರ ಕ್ರೆಡಿಟ್ ಕಾರ್ಡನ್ನು ತನ್ನದೇ ಎಂದುಕೊಂಡರೆ ಏನಾಗುತ್ತೆ?

Update: 2016-11-16 09:27 GMT

ಗ್ರಾಹಕರ ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದುಕೊಂಡು ವಿವಿಧ ಆನ್‌ಲೈನ್ ಅಂಗಡಿಗಳಿಂದ ಖರೀದಿಗಳನ್ನು ಮಾಡಿದ್ದಕ್ಕಾಗಿ ದುಬೈ ಹೊಟೇಲ್ ಒಂದರ ರಿಸೆಪ್ಷನಿಸ್ಟ್‌ನ್ನು ದುಬೈ ಪೊಲೀಸರು ಬಂಧಿಸಿದ್ದಾರೆ. ತಮ್ಮ ಕ್ರೆಡಿಟ್ ಕಾರ್ಡ್ ವಿವರಗಳು ಮತ್ತು ಮುಖ್ಯವಾಗಿ ಅದರ ಹಿಂಬದಿ ಇರುವ ಸಿವಿವಿ ಕೋಡ್ ಅನ್ನು ಇತರರಿಗೆ ತಿಳಿಸುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಹೀಗೆ ಕಾರ್ಡ್ ವಿವರಗಳನ್ನು ನೀಡುವುದರಿಂದ ಇತರರು ಇದನ್ನು ಬಳಸಿಕೊಂಡು ಖರೀದಿ ಮಾಡುವ ಸಾಧ್ಯತೆಯಿದೆ ಎಂದು ದುಬೈ ಪೊಲೀಸ್‌ನ ಜನರಲ್ ಡಿಪಾರ್ಟ್‌ಮೆಂಟ್ ಆಫ್ ಇ ಕ್ರೈಮ್ಸ್ ನಿರ್ದೇಶಕ ಮೇಜರ್ ಸಲೇಮ್ ಬಿನ್ ಸಲ್ಮೀನ್ ಹೇಳಿದ್ದಾರೆ.

"ಜಿಸಿಸಿ ಪ್ರಜೆಯೊಬ್ಬ ಸಾಮಾಜಿಕ ತಾಣದ ಖಾತೆ ಬಳಸಿ ದುಬೈನಲ್ಲಿ ತನ್ನ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಯಾಗಿರುವ ಬಗ್ಗೆ ದುಬೈ ಪೊಲೀಸರಿಗೆ ದೂರು ನೀಡಿದ್ದರು. ದುಬೈ ಹೊಟೇಲ್ ಒಂದರ ವೆಬ್‌ತಾಣದಲ್ಲಿ ಕೋಣೆ ಕಾದಿರಿಸಿದ್ದಾಗಿ ಮತ್ತು ಅದಕ್ಕಾಗಿ ಕ್ರೆಡಿಟ್ ಕಾರ್ಡ್ ಸಂಖ್ಯೆ ಮತ್ತು ಸಿವಿವಿ ನಂಬರ್ ಹೊರತಾದ ಇತರ ವಿವರಗಳನ್ನು ಹೊಟೇಲಿಗೆ ಕೊಟ್ಟಿದ್ದಾಗಿ ಹೇಳಿದ್ದರು. ಆದರೆ ನಂತರ ಅವರು ತಮ್ಮ ದುಬೈ ಭೇಟಿ ಮತ್ತು ಕಾಯ್ದಿರಿಸಿದ ಕೋಣೆ ಎರಡನ್ನೂ ರದ್ದು ಮಾಡಿದ್ದಾಗಿ ದೂರಿನಲ್ಲಿ ಆತ ಹೇಳಿದ್ದ" ಎಂದು ಮೇಜರ್ ಲೇಮ್ ಬಿನ್ ಸಲ್ಮೀನ್ ಹೇಳಿದ್ದಾರೆ.

ಕೋಣೆ ಬುಕ್ ಮಾಡಿದ ಕೆಲವೇ ದಿನಗಳಲ್ಲಿ 4000 ಧಿರಂಗಳು ತನ್ನ ಕ್ರೆಡಿಟ್ ಕಾರ್ಡ್‌ನಿಂದ ಹೊಟೇಲ್ ಕಡಿತ ಮಾಡಿತ್ತು. ರೂಮ್ ಬುಕ್ ಮಾಡಿದ ಮೇಲೆ ಹೊಟೇಲ್‌ನಿಂದ ಒಬ್ಬರು ಕರೆ ಮಾಡಿ ಆತನ ಸಿವಿವಿ ಕೋಡ್ ಕೇಳಿದ್ದರು. ಹೆಚ್ಚು ಸಂಶಯ ಪಡದೇ ಅವರು ವಿವರ ನೀಡಿದ್ದರು. ಆದರೆ ಹಣ ಕಳೆದುಕೊಂಡ ಮೇಲೆ ಹೊಟೇಲಿಗೆ ಬಂದರೆ ರಿಸೆಪ್ಷನಿಸ್ಟ್ ಆ ಕರೆ ಮಾಡಿರುವುದು ಆತನಿಗೆ ತಿಳಿದು ಬಂತು. ನಂತರ ಆತ ದೂರು ನೀಡಿದ್ದ. ದುಬೈ ಪೊಲೀಸರು ರಿಸೆಪ್ಷನಿಸ್ಟ್‌ರನ್ನು ಬಂಧಿಸಿ ವಿಚಾರಣೆ ನಡೆಸಿದರು. "ಆರೋಪಿ ಕಾರ್ಡ್ ಬಳಸಿ ಆನ್‌ಲೈನ್ ಶಾಪಿಂಗ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಇತರ 10 ಗ್ರಾಹಕರ ಕ್ರೆಡಿಟ್ ಕಾರ್ಡ್ ವಿವರಗಳನ್ನೂ ಖಾಸಗಿ ಖರೀದಿಗೆ ಬಳಸಿದ್ದನ್ನು ಆರೋಪಿ ಒಪ್ಪಿಕೊಂಡಿದ್ದಾನೆ" ಎಂದು ಸಲ್ಮೀನ್ ಹೇಳಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ಹೀಗಾಗಿ ಸಾರ್ವಜನಿಕರು ರೆಸ್ಟೊರೆಂಟ್ ಮತ್ತು ಇತರ ಕಡೆಗೆ ಕಾರ್ಡ್ ಬಳಸುವಾಗ ಎಚ್ಚರವಹಿಸಬೇಕು, ಕಾರ್ಡು ವಿವರಗಳನ್ನು ಯಾರಿಗೂ ನೀಡಬಾರದು ಎಂದು ಅಧಿಕಾರಿಗಳು ಹೇಳಿದ್ದಾರೆ. ಜನರು ಖರೀದಿಗೆ ಸಾಧ್ಯವಾದಷ್ಟು ಪ್ರಿಪೈಯ್ಡಿ ಕಾರ್ಡುಗಳನ್ನೇ ಬಳಸಬೇಕು ಮತ್ತು ಹೆಚ್ಚು ಭದ್ರತಾ ಆಯ್ಕೆಗಳಾದ ಒನ್‌ಟೈಮ್ ಪಾಸ್ವರ್ಡ್ ಅಥವಾ ಡಬಲ್ ಸೆಕ್ಯುರ್‌ಗಳನ್ನು ಸುರಕ್ಷತೆಗಾಗಿ ಬಳಸಬೇಕು ಎಂದೂ ಸಲಹೆ ನೀಡಿದ್ದಾರೆ.

ಕೃಪೆ:khaleejtimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News