ರೆಡ್ಡಿ ಪುತ್ರಿಯ ಅದ್ದೂರಿ ವಿವಾಹಕ್ಕೆ ಹಣ ಎಲ್ಲಿಂದ ಬಂತು?: ಎನ್‌ಎಸ್‌ಯುಐ
ಬೆಂಗಳೂರು, ನ.16: ದೇಶದಲ್ಲೆಡೆ 500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳು ರದ್ದುಗೊಂಡಿದ್ದರೂ, ಅದ್ದೂರಿ ವಿವಾಹ ಮಾಡುತ್ತಿರುವ ಗಣಿಧಣಿ, ಮಾಜಿ ಸಚಿವ ಜನಾರ್ದನರೆಡ್ಡಿಯನ್ನು ಈ ಕೂಡಲೇ ಬಂಧಿಸಿ ತನಿಖೆ ನಡೆಸುವಂತೆ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್‌ಗೌಡ ಇಂದಿಲ್ಲಿ ಆಗ್ರಹಿಸಿದ್ದಾರೆ.
ಬುಧವಾರ ನಗರದ ಆನಂದರಾವ್ ವತ್ತದ ಬಳಿ ಗಾಂಧಿ ಪ್ರತಿಮೆ ಎದುರು, ಏಕಾಏಕಿ ಕೇಂದ್ರ ಸರಕಾರ 500 ಮತ್ತು 1 ಸಾವಿರ ಮುಖ ಬೆಲೆಯ ನೋಟುಗಳನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಬಹತ್ ಪ್ರತಿಭಟನೆ ನಡೆಸಿ ಮೋದಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತತ್ವ ವಹಿಸಿ ಮಾತನಾಡಿದ ಮಂಜುನಾಥ್‌ಗೌಡ, ದೇಶದಲ್ಲೆಡೆ 500 ಮತ್ತು 1 ಸಾವಿರ ಮುಖಬೆಲೆಯ ನೋಟು ರದ್ದುಗೊಂಡಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚುವರಿ ಹಣ ಬ್ಯಾಂಕ್‌ನಿಂದ ಪಡೆಯಲು ಅವಕಾಶವಿಲ್ಲ ಎಂದಿದ್ದಾರೆ. ಆದರೆ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಪುತ್ರಿಯ ಅದ್ದೂರಿ ವಿವಾಹ ನಡೆಸಿದ್ದಾರೆ. ಇದಕ್ಕೆಲ್ಲಾ ಹಣ ಎಲ್ಲಿಂದ ಬಂದಿದೆ ಎನ್ನುವ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಉಂಟಾಗಿದ್ದು, ಈ ಕೂಡಲೇ ಜನಾರ್ದನರೆಡ್ಡಿಯನ್ನು ಬಂಧಿಸಿ ತನಿಖೆ ಕೈಗೊಂಡು ಸತ್ಯ ಹೊರಹಾಕಬೇಕೆಂದು ಒತ್ತಾಯಿಸಿದರು.
ದಿಢೀರ್ ನೋಟು ನಿಷೇಧ ಮಾಡಿದ ಕ್ರಮದಿಂದ ಬಡಸಾಮಾನ್ಯರಿಗೆ ತೊಂದರೆಯಾಗಿದೆ. ಈ ಗೊಂದಲಕ್ಕೆ ಕೇಂದ್ರ ಸರಕಾರ ಮುಖ್ಯಕಾರಣ ಎಂದ ಅವರು, ಶ್ರೀಮಂತರು ಚಿನ್ನ, ಬೇನಾಮಿ ಆಸ್ತಿ ಹಾಗೂ ವಿದೇಶಿ ಹಣ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ದಿಟ್ಟ ಕ್ರಮಕೈಗೊಳ್ಳಲಿ ಎಂದು ಮಂಜುನಾಥ್ ಹೇಳಿದರು.
ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಮುಖಂಡರಾದ ಮನಾನ್, ಜಯಂಧರ್‌ಶಾಹಿ ಸೇರಿ ಪ್ರಮುಖರು ಹಾಜರಿದ್ದರು. ಇದೇ ವೇಳೆ ಬಿಜೆಪಿ ನಾಯಕರ ಪ್ರತಿಕತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.