×
Ad

ರಾಜ್ಯದಲ್ಲಿ ನಾಳೆ ಬ್ಯಾಂಕ್‌ಗಳಿಗೆ ರಜೆ ಇಲ್ಲ

Update: 2016-11-16 21:22 IST

ಬೆಂಗಳೂರು, ನ. 16: ಒಂದು ಸಾವಿರ ಹಾಗೂ ಐನೂರು ರೂ.ನೋಟುಗಳ ನಿಷೇಧದಿಂದ ಸಾರ್ವಜನಿಕರು ಪರದಾಡುತ್ತಿರುವುದರಿಂದ ಎಂದಿನಂತೆ ಬ್ಯಾಂಕ್‌ಗಳು, ಎಟಿಎಂ, ಅಂಚೆ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಂತ ಶ್ರೇಷ್ಠ ಕವಿ ಕನಕದಾಸರ ಜಯಂತಿ ಹಿನ್ನೆಲೆಯಲ್ಲಿ ನಾಳೆ(ನ.17) ಸರಕಾರಿ ರಜೆಯನ್ನು ಘೋಷಿಸಿ, ರಾಜ್ಯದಲ್ಲಿನ ಎಲ್ಲ ಬ್ಯಾಂಕುಗಳೂ ಕಾರ್ಯನಿರ್ವಹಿಸುವುದಿಲ್ಲ ಎಂದು ಎಸ್‌ಬಿಐನ ಮ್ಯಾನೇಜರ್ ಅವರು ಸೂಚನೆ ನೀಡಿದ್ದರು. ಆದರೆ, ಸಾರ್ವಜನಿಕರು ಒಂದು ಸಾವಿರ ಹಾಗೂ ಐನೂರು ರೂ.ನೋಟುಗಳ ನಿಷೇಧದಿಂದ ಪರದಾಡುತ್ತಿರುವುದರಿಂದ ಪ್ರತಿದಿನದಂತೆ ಬ್ಯಾಂಕ್‌ಗಳು, ಎಟಿಎಂ ಮತ್ತು ಅಂಚೆ ಕಚೇರಿಗಳು ಕಾರ್ಯನಿರ್ವಹಿಸಲಿವೆ, ಈ ಸಂಬಂಧ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News