ಉಡುಪಿ ಮಠದ ಮನಸುಗಳು ಸ್ವಚ್ಛವಾಗಬೇಕಿದೆ: ಈಶ್ವರಾನಂದಪುರಿ
ಬೆಂಗಳೂರು, ನ.17: ಉಡುಪಿ ಸ್ವಚ್ಛವಾಗಿಯೇ ಇದೆ. ಆದರೆ, ಉಡುಪಿ ಮಠದಲ್ಲಿರುವವರ ಮನಸುಗಳು ಸ್ವಚ್ಛವಾಗಬೇಕಿದೆ ಎಂದು ಕಾಗಿನೆಲೆ ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತ ಸಮುದಾಯದ ಯುವಕರು ಭೂಮಿ ಹಾಗೂ ಆಹಾರದ ಆಯ್ಕೆಗೆ ಆಗ್ರಹಿಸಿ ಉಡುಪಿಯಲ್ಲಿ ಸಮಾವೇಶ ಮಾಡಿದ್ದರು. ಆದರೆ, ಸಮಾವೇಶ ಮುಗಿದ ನಂತರ ಕೆಲವು ಮೂಲಭೂತ ಸಂಘಟನೆಗಳು ಸ್ವಚ್ಛ ಮಾಡಿದ್ದಾರೆ. ಆ ಮೂಲಕ ತಮ್ಮ ಅನಿಷ್ಟ ಬುದ್ಧಿಯನ್ನು ಹೊರ ಹಾಕಿದ್ದಾರೆ ಎಂದು ಕಿಡಿಕಾರಿದರು.
ಶತಶತಮಾನದಿಂದಲೂ ದಲಿತರಿಗೆ ಆಸ್ತಿ ಕೊಡದೆ ವಂಚಿಸಲಾಗಿದೆ. ಈಗಲೂ ಹಾಗೇ ಬದುಕಬೇಕು ಎನ್ನುವುದು ಯಾವ ನ್ಯಾಯ. ಕೇವಲ ದನದ ಚರ್ಮವನ್ನು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ, ದಲಿತ ಯುವಕರ ಮೇಲೆ ಪ್ರಾಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಇದು ಹಿಂದೂ ಸಂಸ್ಕೃತಿಯೇ ಎಂದು ಅವರು ಪ್ರಶ್ನಿಸಿದರು.
ಕನಕದಾಸರು ಬ್ರಾಹ್ಮಣ ವಿರೋಗಳು ಎನ್ನಲಾಗುತ್ತಿದೆ. ಆದರೆ, ಅವರು ವ್ಯಕ್ತಿಗತವಾಗಿ ಯಾರನ್ನೂ ವಿರೋಸುತ್ತಿರಲಿಲ್ಲ. ಸಮಾಜದಲ್ಲಿದ್ದ ಮೇಲು, ಕೀಳು ಎಂಬ ಭಾವನೆಗಳನ್ನು, ಆಚಾರಗಳನ್ನು ವಿರೋಸುತ್ತಿದ್ದರು. ಹಾಗೂ ಜನಭಾಷೆಯಲ್ಲಿ ಕೀರ್ತನೆಗಳನ್ನು ಹಾಡನ್ನು ಹಾಡುವುದರ ಮೂಲಕ ಜನಜಾಗೃತಿ ಮೂಡಿಸುತ್ತಿದ್ದರು ಎಂದು ಅವರು ಹೇಳಿದರು.
ಜಯಂತಿಗಳಿಗೆ ರಜೆ ಬೇಡ
ಕನಕ ಜಯಂತಿ, ವಾಲ್ಮೀಕಿ ಸೇರಿದಂತೆ ಯಾವುದೇ ಸಮಾಜ ಸುಧಾರಕರ ಜಯಂತಿಗಳಂದು ಸರಕಾರಿ ರಜೆ ಕೊಡಬಾರದು. ಇದರಿಂದ ಯಾರ ಕುರಿತು ಜಯಂತಿ ಆಚರಿಸಲಾಗುತ್ತದೆಯೋ ಅವರ ಆಶಯಗಳು ಈಡೇರುವುದಿಲ್ಲ. ಹೀಗಾಗಿ ಜಯಂತಿ ದಿನದಂದು ಶಾಲಾ-ಕಾಲೇಜು, ಸರಕಾರಿ ಕಚೇರಿಗಳಲ್ಲಿ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಬೇಕು. ಈಶ್ವರಾನಂದ ಸ್ವಾಮೀಜಿ, ಕಾಗಿನೆಲೆ ಪೀಠ