ಯಲಹಂಕ ಬಸ್ ನಿಲ್ದಾಣಕ್ಕೆ ಬಿ.ಬಸವಲಿಂಗಪ್ಪ ಹೆಸರಿಡಲು ಆಗ್ರಹಿಸಿ ಧರಣಿ
Update: 2016-11-18 12:39 IST
ಬೆಂಗಳೂರು, ನ.18: ಯಲಹಂಕ ನೂತನ ಬಸ್ ನಿಲ್ದಾಣಕ್ಕೆ ‘ತಲೆ ಮೇಲೆ ಮಲ ಹೊರುವ ಅನಿಷ್ಟ ಪದ್ಧತಿ ನಿಷೇಧಿಸಿ ಕಾನೂನು ರೂಪಿಸಿದ ‘ಬಿ.ಬಸವಲಿಂಗಪ್ಪ’ ಅವರ ಹೆಸರಿಡಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಶುಕ್ರವಾದ ನಗರದ ಪುರಭವನದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.